ಬಸ್ ಹತ್ತುವ ವೇಳೆ ಮಹಿಳೆಯ ಚಿನ್ನಾಭರಣ ಕಳ್ಳತನ; ಇಬ್ಬರು ಸರಗಳ್ಳಿಯರ ಬಂಧನ
ಬಸ್ ನಿಲ್ದಾಣದ ಬಳಿ ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ 20 ಗ್ರಾಮ ತೂಕದ ಚಿನ್ನದ ಸರವನ್ನು ಎಗರಿಸಿದ್ದ ಮಹಿಳಾ ಕಳ್ಳಿಯರಿಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ಗ್ರಾಮದ ಹಾದಿಯಮ್ಮ ಮತ್ತು ಮೈಸೂರು ಜಿಲ್ಲೆಯ ಹುಣಸೂರಿನ ಮಹದೇವಪುರ ಗ್ರಾಮದ ಹೇಮಾವತಿ ಈ ಇಬ್ಬರು ಕಳ್ಳಿಯರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಯಳಂದೂರು (ಜು.25): ಬಸ್ ನಿಲ್ದಾಣದ ಬಳಿ ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ 20 ಗ್ರಾಮ ತೂಕದ ಚಿನ್ನದ ಸರವನ್ನು ಎಗರಿಸಿದ್ದ ಮಹಿಳಾ ಕಳ್ಳಿಯರಿಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ಗ್ರಾಮದ ಹಾದಿಯಮ್ಮ ಮತ್ತು ಮೈಸೂರು ಜಿಲ್ಲೆಯ ಹುಣಸೂರಿನ ಮಹದೇವಪುರ ಗ್ರಾಮದ ಹೇಮಾವತಿ ಈ ಇಬ್ಬರು ಕಳ್ಳಿಯರಿಬ್ಬರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕುಣಗಳ್ಳಿ ಗ್ರಾಮದ ನಂಜಮಣಿ ಭೀಮನ ಅಮಾವಾಸ್ಯೆಯಂದು ಕಂದಹಳ್ಳಿ ಮಹದೇಶ್ವರ ದೇವಾಲಯದಿಂದ ಗ್ರಾಮಕ್ಕೆ ಹಿಂದಿರುಗಲು ಯಳಂದೂರು ಬಸ್ ನಿಲ್ದಾಣಕ್ಕೆ ಬಂದಿದ್ದರು.
ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಾಗ ಕೊರಳಲ್ಲಿ ಇದ್ದ ಸರ ಕಳ್ಳತನವಾಗಿತ್ತು. ಈ ಹಿನ್ನೆಲೆ ನಂಜಮಣಿ ಪುತ್ರ ಕುಮಾರ್ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬೆಂಗಳೂರು: ಸರ ಕದಿಯುತ್ತಿದ್ದ ಚಾಲಾಕಿ ಭಾವ-ಮೈದುನ ಬಂಧನ, ಗಂಡನ ಕೃತ್ಯಕ್ಕೆ ಪತ್ನಿಯರ ನೆರವು..!
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಡಿವೈಎಸ್‌ಪಿ ಸೋಮೇಗೌಡ ಮಾರ್ಗದರ್ಶನದಲ್ಲಿ ಸಿಪಿಐ ಶಿವರಾಜ್ ಮುಧೋಳ್, ಪಿಎಸ್‌ಐ ಚಂದ್ರ ನಾಯಕ್ ಅವರು, ಚಿನ್ನದ ಸರವನ್ನು ಕಳ್ಳತನ ಮಾಡಿದ್ದ ಇಬ್ಬರು ಮಹಿಳೆಯರನ್ನು ದಸ್ತಗಿರಿ ಮಾಡಿ 18 ಗ್ರಾಮ್ ಚಿನ್ನದ ಸರವನ್ನು ವಶಕ್ಕೆ ಪಡೆದು ಮಹಿಳೆಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಚರಣೆಯಲ್ಲಿ ಎಎಸ್‌ಐ ಎಪಿ ಶಂಕರ್, ಮುಖ್ಯಪೇದೆ ನಾಗೇಂದ್ರ, ವಾಸುದೇವ್, ಕಾನ್ಸ್‌ಟೇಬಲ್ ರಾಮಶೆಟ್ಟಿ, ಜಡೆಸ್ವಾಮಿ, ಪ್ರಮೋದ್, ಮಹಿಳಾ ಸಿಬ್ಬಂದಿ ರೇಖಾ, ಕವಿತಾ ಪಾಲ್ಗೊಂಡಿದ್ದರು.
ಸಿನಿಮಾ ಶೂಟಿಂಗ್ ಪೂರ್ಣ ಮಾಡೋ ಸಲುವಾಗಿ ಸರಗಳ್ಳತನಕ್ಕೆ ಇಳಿದಿದ್ದ ಗ್ಯಾಂಗ್ ಅರೆಸ್ಟ್!