Asianet Suvarna News Asianet Suvarna News

Software Engineer ಮನೆಯಲ್ಲಿ ಕದಿಯಲು ಏನೂ ಇಲ್ಲ ಎಂದು 500 ರೂ. ಇಟ್ಟು ಹೋದ ಕಳ್ಳರ ಗ್ಯಾಂಗ್‌!

ಸಾಫ್ಟ್‌ವೇರ್‌ ಎಂಜಿನಿಯರ್‌ ನಿವಾಸದಲ್ಲಿ ಕದಿಯಲು ಯೋಗ್ಯವಾದ ವಸ್ತುವೇನೂ ಸಿಗದಿದ್ದಕ್ಕೆ ಮನನೊಂದ ಕಳ್ಳರ ತಂಡವೊಂದು 500 ರೂ.ಗಳ ನೋಟನ್ನು ಅವರ ಮನೆ ಬಾಗಿಲಿಗೆ ಬಿಟ್ಟು ಹೋಗಿರುವ ಘಟನೆ ದೆಹಲಿಯ ರೋಹಿಣಿಯ ಸೆಕ್ಟರ್ 8 ರಲ್ಲಿ ನಡೆದಿದೆ. 

disgusted with nothing to steal gang leaves 500 rs note in new delhi ash
Author
First Published Jul 23, 2023, 3:32 PM IST

ಹೊಸದಿಲ್ಲಿ (ಜುಲೈ 23, 2023): ದೇಶದಲ್ಲಿ ಕಳ್ಳತನ ಪ್ರಕರಣಗಳ ಸಾಕಷ್ಟು ವರದಿಯಾಗುತ್ತಲೇ ಇರುತ್ತದೆ. ಚಿಕ್ಕ ವಸ್ತುವಿನಿಂದ ಹಿಡಿದು ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವುದನ್ನು ಕೇಳಿರಬಹುದು. ಆದರೆ, ರಾಷ್ಟ್ರ ರಾಜಧಾನಿಯಲ್ಲಿ ಇಲ್ಲೊಬ್ಬರ ನಿವಾಸದಲ್ಲಿ ಕದಿಯಲು ಯೋಗ್ಯವಾದ ವಸ್ತುವೇನೂ ಸಿಗದಿದ್ದಕ್ಕೆ ಮನನೊಂದ ಕಳ್ಳರ ತಂಡವೊಂದು 500 ರೂ.ಗಳ ನೋಟನ್ನು ಅವರ ಮನೆ ಬಾಗಿಲಿಗೆ ಬಿಟ್ಟು ಹೋಗಿದೆ.

ಸಾಫ್ಟ್‌ವೇರ್‌ ಎಂಜಿನಿಯರ್ ಅಂದರೆ ಸಿಕ್ಕಾಪಟ್ಟೆ ದುಡ್ಡು ಮಾಡಿರುವವರು ಅಂತ ಜನ ಸಾಮಾನ್ಯ ಅಂದ್ಕೊಂಡಿರುತ್ತಾರೆ. ಅಲ್ಲದೆ, ಮನೆಗೆ ಸಾಕಷ್ಟು ಐಷಾರಾಮಿ ವಸ್ತುಗಳನ್ನು ಮಾಡ್ಕೋತಾರೆ ಅನ್ನಬಹುದು. ಆದರೆ, ಅದೇ ಸಾಫ್ಟ್‌ವೇರ್‌ ಎಂಜಿನಿಯರ್‌ ನಿವಾಸದಲ್ಲಿ ಕದಿಯಲು ಯೋಗ್ಯವಾದ ವಸ್ತುವೇನೂ ಸಿಗದಿದ್ದಕ್ಕೆ ಮನನೊಂದ ಕಳ್ಳರ ತಂಡವೊಂದು 500 ರೂ.ಗಳ ನೋಟನ್ನು ಅವರ ಮನೆ ಬಾಗಿಲಿಗೆ ಬಿಟ್ಟು ಹೋಗಿರುವ ಘಟನೆ ದೆಹಲಿಯ ರೋಹಿಣಿಯ ಸೆಕ್ಟರ್ 8 ರಲ್ಲಿ ನಡೆದಿದೆ. ಈ ಬಗ್ಗೆ ದೂರು ಬಂದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಸಾವನ್‌ ಮಾಸದಲ್ಲಿ ಹಲಾಲ್‌ ಚಹಾ ಕೊಡ್ತೀರಾ: ರೈಲ್ವೆ ಸಿಬ್ಬಂದಿ ಮೇಲೆ ಪ್ರಯಾಣಿಕರ ಆಕ್ರೋಶ! ಏನಿದು ‘ಹಲಾಲ್‌ ಟೀ’’ ವಿವಾದ?

ಉತ್ತರ ರೋಹಿಣಿ ಪೊಲೀಸ್ ಠಾಣೆಯ ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ 80 ವರ್ಷದ ದೂರುದಾರರನ್ನು ಭೇಟಿ ಮಾಡಿತು. ಜುಲೈ 19 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಅವರು ಮತ್ತು ಅವರ ಪತ್ನಿ ಗುರ್ಗಾಂವ್‌ಗೆ ಅಲ್ಲಿ ವಾಸಿಸುವ ಮಗನನ್ನು ಭೇಟಿಯಾಗಲು ಹೋಗಿದ್ದರು ಎಂದು ದೂರುದಾರರು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ, ಕಳ್ಳರು ತಮ್ಮ ಮನೆಗೆ ನುಗ್ಗಿರುವ ಬಗ್ಗೆ ಅವರ ನೆರೆಹೊರೆಯವರು ಕರೆ ಮಾಡಿ ತಿಳಿಸಿದ್ದಾರೆ. ಸಂತ್ರಸ್ತರು ಮನೆಗೆ ಹಿಂತಿರುಗಿ ನೋಡಿದಾಗ ಮುಖ್ಯ ಗೇಟ್‌ನ ಬೀಗ ಒಡೆದಿರುವುದನ್ನು ಗಮನಿಸಿದರು. ಆದರೆ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡದ ಕಾರಣ ಅವರ ಮನೆಯಲ್ಲಿ ಏನೂ ಕಾಣೆಯಾಗಿರಲಿಲ್ಲ. ಅಲ್ಮೀರಾಗಳು ಹಾಗೇ ಇದ್ದವು. ಏನೂ ಕಳ್ಳತನವಾಗಿಲ್ಲ, ಆದರೆ 500 ರೂ ನೋಟು ಪತ್ತೆಯಾಗಿದೆ ಎಂದು ಅವರು ವರದಿ ಮಾಡಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದ ಕೋಟಾದ ರಸ್ತೆಗಳಲ್ಲಿ ಬೃಹತ್‌ ಮೊಸಳೆಗಳ ತಿರುಗಾಟ: ವಿಡಿಯೋ ವೈರಲ್‌

ಇದೇ ರೀತಿಯ ಘಟನೆ ದೆಹಲಿಯಲ್ಲಿ ಈ ಹಿಂದೆಯೂ ನಡೆದಿತ್ತು. ಜೂನ್‌ನಲ್ಲಿ ದಂಪತಿಯನ್ನು ದರೋಡೆ ಮಾಡಲು ಯತ್ನಿಸಿದ ಇಬ್ಬರು ದರೋಡೆಕೋರರು ಅವರ ಬಳಿ ಕೇವಲ 20 ರೂ.ಗಳನ್ನು ಕಂಡುಕೊಂಡ ನಂತರ 100 ರೂ. ಅನ್ನು ಅವರೇ ಕೊಟ್ಟಿದ್ದರು. ಈ ಅಪರೂಪದ ಘಟನೆಯು ಪೂರ್ವ ದೆಹಲಿಯ ಶಾಹದಾರದ ಫರ್ಶ್ ಬಜಾರ್ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಏನೂ ಸಿಗದ ಹಿನ್ನೆಲೆಯಲ್ಲಿ ದರೋಡೆಕೋರರೊಬ್ಬರು ದಂಪತಿಗೆ 100 ರೂ. ನೀಡಿದ ಬಳಿಕ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದರು.

ನಂತರ, ಕನಿಷ್ಠ 200 ಕ್ಯಾಮೆರಾಗಳಿಂದ ದೃಶ್ಯಗಳನ್ನು ಸ್ಕ್ಯಾನ್ ಮಾಡಿದ ನಂತರ ಪೊಲೀಸರು ಇಬ್ಬರು ದರೋಡೆಕೋರರನ್ನು ಬಂಧಿಸಿದ್ದರು. ಈಗ, ಇದೇ ರೀತಿ ಸಾಫ್ಟ್‌ವೇರ್‌ ಎಂಜಿನಿಯರ್ ಮನೆಗೆ ಹೋಗಿ ಅವರ ಮನೆಯಲ್ಲಿ ಏನೂ ಕದಿಯದೆ ಅವರೇ 500 ರೂ. ಇಟ್ಟು ಹೋಗಿರುವ ಘಟನೆ ವರದಿಯಾಗಿದೆ. 

ಇದನ್ನೂ ಓದಿ: ಮಹಿಳೆಯರ ಒಳಗೆ ಸೇರಿದ ‘ಗುಂಡು’; ಪೊಲೀಸ್‌ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ವಿಡಿಯೋ ವೈರಲ್‌

Follow Us:
Download App:
  • android
  • ios