ಜನವರಿ 30 ರಂದು ಶ್ರೀನಗರದಲ್ಲಿ ಭಾರತ್ ಜೋಡೋ ಸಮಾರೋಪ: 21 ಪಕ್ಷಕ್ಕೆ ಆಹ್ವಾನ

ಈ ಸಮಾರಂಭದಲ್ಲಿ, ನಾವು ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಡಲು, ಸತ್ಯ, ಕರುಣೆ ಮತ್ತು ಅಹಿಂಸೆಯ ಸಂದೇಶವನ್ನು ಹರಡಲು ಮತ್ತು ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಬದ್ಧರಾಗಿದ್ದೇವೆ" ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರದಲ್ಲಿ ಬರೆದಿದ್ದಾರೆ.

21 parties invited to join the closure of rahul gandhi s yatra in srinagar ash

ಶ್ರೀನಗರ: ರಾಹುಲ್‌ ಗಾಂಧಿ ನಡೆಸುತ್ತಿರುವ ದೇಶವ್ಯಾಪಿ ಭಾರತ್‌ ಜೋಡೋ ಯಾತ್ರೆ ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಅಂತ್ಯವಾಗಲಿದೆ. ಅಂದು ಅಲ್ಲಿ ಬೃಹತ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಭಾಗಿಯಾಗುವಂತೆ 21 ಸಮಾನ ಮನಸ್ಕ ಪಕ್ಷಗಳಿಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನ ನೀಡಿದ್ದಾರೆ. ‘ಜ.30 ರಂದು ಮಧ್ಯಾಹ್ನ ಶ್ರೀನಗರದಲ್ಲಿ ನಡೆಯಲಿರುವ ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ವೈಯಕ್ತಿಕವಾಗಿ ಪಾಲ್ಗೊಳ್ಳುವಂತೆ ನಾನು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ಮಹಾತ್ಮ ಗಾಂಧಿಯವರ ಸ್ಮರಣೆಗೆ ಆ ದಿನವನ್ನು ಸಮರ್ಪಿಸಲಾಗಿದೆ. ಈ ಸಮಾರಂಭದಲ್ಲಿ ನಾವು ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಡಲು ಸತ್ಯ, ಕರುಣೆ ಮತ್ತು ಅಹಿಂಸೆಯನ್ನು ಹರಡಬೇಕು’ ಎಂದು ಆಹ್ವಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಉಲ್ಲೇಖಿಸಿದ್ದಾರೆ. ಈ ಬೃಹತ್‌ ಕಾರ್ಯಕ್ರಮದ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪರ್ಯಾಯವಾಗಿ ಹೊಸ ಒಕ್ಕೂಟವನ್ನು ರಚಿಸಲು ಕಾಂಗ್ರೆಸ್‌ ಮುಂದಾಗಿದೆ.

ಯಾರ್ಯಾರಿಗೆ ಆಹ್ವಾನ..?:
ಟಿಎಂಸಿ, ಜೆಡಿಯು, ಶಿವಸೇನೆ, ಟಿಡಿಪಿ, ಎಸ್‌ಪಿ, ಎನ್‌ಸಿ, ಬಿಎಸ್ಪಿ, ಡಿಎಂಕೆ, ಸಿಪಿಐ, ಜೆಎಮ್‌ಎಮ್‌, ಆರ್‌ಜೆಡಿ, ಆರ್‌ಎಲ್‌ಎಸ್‌ಪಿ, ಎಚ್‌ಎಎಂ, ಪಿಡಿಪಿ, ಎನ್‌ಸಿಪಿ, ಎಂಡಿಎಂಕೆ, ವಿಸಿಕೆ, ಐಯುಎಮ್‌ಎಲ್‌, ಕೆಎಸ್‌ಎಮ್‌, ಹಾಗೂ ಆರ್‌ಎಸ್‌ಪಿ ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಇದರ ಜೊತೆಗೆ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್‌ ಯಾದವ್‌ (Lalu Prasad Yadav), ತೇಜಸ್ವಿ ಯಾದವ್‌ (Tejaswi Yadav) , ಫಾರುಖ್‌ ಅಬ್ದುಲ್ಲಾ (Farooq Abdullah), ಒಮರ್‌ ಅಬ್ದುಲ್ಲಾ (Omar Abdullah), ಶರದ್‌ ಯಾದವ್‌ಗೆ (Sharad Yadav) ಆಹ್ವಾನ ನೀಡಲಾಗಿದೆ.

ಇದನ್ನು ಓದಿ: ಚಳಿ ತಡೆಗೆ ಟೀಶರ್ಟ್‌ನೊಳಗೆ ಥರ್ಮಲ್ಸ್‌ ಬಳಕೆ: ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ನಾಯಕರ ಟೀಕೆ

ಆದರೆ, ಪ್ರಮುಖವಾಗಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಗೆ ಆಹ್ವಾನ ನೀಡಿಲ್ಲ. ಚೀನಾದಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ ಕೋವಿಡ್ ಪ್ರೋಟೋಕಾಲ್‌ಗಳನ್ನು ಜಾರಿಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡುವ ಮೂಲಕ ಎಎಪಿ ಮೆರವಣಿಗೆಯನ್ನು ನಿಲ್ಲಿಸುವ ಯತ್ನ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

"ಈ ಸಮಾರಂಭದಲ್ಲಿ, ನಾವು ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಡಲು, ಸತ್ಯ, ಕರುಣೆ ಮತ್ತು ಅಹಿಂಸೆಯ ಸಂದೇಶವನ್ನು ಹರಡಲು ಮತ್ತು ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಬದ್ಧರಾಗಿದ್ದೇವೆ" ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರದಲ್ಲಿ ಬರೆದಿದ್ದಾರೆ. ಈ ಸಂಬಂಧ ಪಕ್ಷದ ಹಿರಿಯ ನಾಯಕ ಮತ್ತು ಅದರ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್ ಅವರು ಎಐಸಿಸಿ ಅಧ್ಯಕ್ಷರ ಪತ್ರವನ್ನು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆ ಪುನಾರಂಭ ಯುಪಿಯಲ್ಲಿ ರಾಹುಲ್‌ಗೆ ಭರ್ಜರಿ ಸ್ವಾಗತ

ಭಾರತ್‌ ಜೋಡೋ ಯಾತ್ರೆಯ ಹಾದಿ
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಪಾದಯಾತ್ರೆಯು ಜನವರಿ 30ರಂದು ಶ್ರೀನಗರದಲ್ಲಿ ರಾಹುಲ್‌ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಅಂತ್ಯವಾಗಲಿದೆ. ಈ ಮೂಲಕ ಯಾತ್ರೆಯು 3,570 ಕಿ.ಮೀ ಕ್ರಮಿಸಿದಂತಾಗುತ್ತದೆ. ಸದ್ಯ ಯಾತ್ರೆಯು ಪಂಜಾಬ್‌ನಲ್ಲಿ ಸಾಗುತ್ತಿದೆ.

ಆದರೂ, ಅನೇಕ ವಿರೋಧ ಪಕ್ಷಗಳು ಭಾರತ್‌ ಜೋಡೋ ಯಾತ್ರೆಗೆ ಬೆಂಬಲ ನೀಡಿಲ್ಲ. ಇದು ಲೋಕಸಭೆ  ಚುನಾವಣೆಗೆ ಒಂದು ವರ್ಷ ಮುಂಚಿತವಾಗಿ ಬಿಜೆಪಿ ವಿರೋಧಿ ಒಕ್ಕೂಟದಲ್ಲಿರುವ ಬಿರುಕನ್ನು ಎತ್ತಿ ತೋರಿಸುತ್ತದೆ. ಆದರೆ, ಈಗ 21 ಪಕ್ಷಗಳಿಗೆ ಆಹ್ವಾನಿಸಿದ್ದು, ಈ ಮೂಲಕ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ ಮತ್ತೊಂದು ಪ್ರಯತ್ನ ನಡೆಸುತ್ತಿದೆ. 

ಇದನ್ನೂ ಓದಿ: ರಾಹುಲ್‌ ಯಾತ್ರೆಗೆ ಭದ್ರತೆ ಕೊಡಿ: ಝಡ್‌ ಪ್ಲಸ್‌ ಭದ್ರತೆಯಲ್ಲಿ ವೈಫಲ್ಯ ಎಂದು ಅಮಿತ್‌ ಶಾಗೆ ಪತ್ರ

Latest Videos
Follow Us:
Download App:
  • android
  • ios