ಸಂಕಷ್ಟದಲ್ಲಿ ಕೆಸಿಆರ್‌; ನನಸಾಗಲ್ಲ ಹ್ಯಾಟ್ರಿಕ್‌ ಕನಸು! ಮ್ಯಾಜಿಕ್‌ ನಂಬರ್‌ ದಾಟಿದ ಕಾಂಗ್ರೆಸ್‌

2014ರಲ್ಲಿ ರಾಜ್ಯ ರಚನೆಯಾದಾಗಿನಿಂದಲೂ ಆಗಿನ ಟಿಆರ್‌ಎಸ್‌, (ಈಗಿನ ಬಿಆರ್‌ಎಸ್) ಚುಕ್ಕಾಣಿ ಹಿಡಿದಿತ್ತು. ಈಗ ರಾಜ್ಯ ರಚನೆ ಮಾಡಿದ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ಬಹುತೇಕ ನಿಚ್ಚಳವಾಗಿದೆ.

telangana chief minister kcr in trouble as congress cross halfway mark ash

ಹೈದರಾಬಾದ್ (ಡಿಸೆಂಬರ್ 3, 2023): ತೆಲಂಗಾಣದ ವಿಧಾನಸಭೆ ಚುನಾವಣೆ ಮತ ಎಣಿಕೆ 8 ಗಂಟೆಯಿಂದಲೇ ಆರಂಭವಾಗಿದ್ದು, ಎಕ್ಸಿಟ್‌ ಪೋಲ್‌ ಭವಿಷ್ಯದಂತೆ ಕಾಂಗ್ರೆಸ್‌ ಭಾರಿ ಮುನ್ನಡೆಯಲ್ಲಿದ್ದು, ಅಧಿಕಾರ ಹಿಡಿಯುವುದು ಬಹುತೇಕ ನಿಚ್ಚಳವಾಗಿದೆ. 

119 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಅಧಿಕಾರ ಹಿಡಿಯಲು ಸಹ ಕನಿಷ್ಠ 60 ಸೀಟುಗಳು ಬೇಕಿದೆ. ಈ ಹಿನ್ನೆಲೆ ಕೈ ಅಧಿಕಾರ ಬಹುತೇಕ ನಿಶ್ಚಿತವಾಗಿದ್ದು, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಬಹುಮತದ ಸಮೀಪಕ್ಕೆ ಹೋಗುವುದು ಸಹ ಕಷ್ಟವಾಗಿದೆ. ಇದು ಸದ್ಯದ ಟ್ರೆಂಡ್‌ ಆಗಿದ್ದರೂ ಸಹ, ಸಿಎಂ ಚಂದ್ರಶೇಖರ್‌ ರಾವ್‌ ಸತತ 3ನೇ ಬಾರಿ ಮುಖ್ಯಮಂತ್ರಿಯಾಗುವ ಕನಸು ನನಸಾಗದಲ್ಲ ಎಂದೇ ಬಿಂಬಿತವಾಗ್ತಿದೆ. 

ಇದನ್ನು ಓದಿ: ಇಂದು 4 ರಾಜ್ಯಗಳ ಫಲಿತಾಂಶ: ತೆಲಂಗಾಣ ವೀಕ್ಷಕರಾಗಿ ಡಿಕೆಶಿ, ಜಾರ್ಜ್‌ ನೇಮಕ

ಈ ಪ್ರವೃತ್ತಿ ಮುಂದುವರಿದರೆ, ಭಾರತದ ಅತ್ಯಂತ ಕಿರಿಯ ರಾಜ್ಯಗಳಲ್ಲಿ ಒಂದಾದ ತೆಲಂಗಾಣದಲ್ಲಿ ಈ ಬಾರಿ ಆಡಳಿತಾರೂಢ ಪಕ್ಷ ಬದಲಾಗಲಿದೆ. 2014ರಲ್ಲಿ ರಾಜ್ಯ ರಚನೆಯಾದಾಗಿನಿಂದಲೂ ಆಗಿನ ಟಿಆರ್‌ಎಸ್‌, (ಈಗಿನ ಬಿಆರ್‌ಎಸ್) ಚುಕ್ಕಾಣಿ ಹಿಡಿದಿತ್ತು. ಈಗ ರಾಜ್ಯ ರಚನೆ ಮಾಡಿದ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ಬಹುತೇಕ ನಿಚ್ಚಳವಾಗಿದೆ.

ಟಿಆರ್‌ಎಸ್‌ ರೈತ ಬಂಧು ಮತ್ತು ರೈತ ಬಿಮಾ ಯೋಜನೆಗಳು, ದಲಿತ ಮತ್ತು ಬಿ.ಸಿ.ಬಂಧು ಯೋಜನೆಗಳು ವಂಚಿತ ವರ್ಗಗಳಿಗೆ ಮತ್ತು ಬಡವರಿಗೆ ವಸತಿ ನೀಡುವ ಗೃಹ ಲಕ್ಷ್ಮೀ ಸೇರಿದಂತೆ ಅನೇಕ ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದರೂ, ಹಾಗೂ ಭರವಸೆ ನೀಡಿದ್ದರೂ ಆಡಳಿತಾರೂಢ ಪಕ್ಷದ ವಿರುದ್ಧ ಆಡಳಿತ ವಿರೋಧಿ ಧೋರಣೆ ನಿರ್ಮಾಣವಾಗಿರುವುದು ಕಂಡುಬಂದಿದೆ.

ತೆಲಂಗಾಣ ಚುನಾವಣೆ -2023 ವಿಐಪಿ ಅಭ್ಯರ್ಥಿಗಳು ಯಾರಾರು ಇಲ್ಲಿದೆ ನೋಡಿ ಮಾಹಿತಿ..

ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್‌ಗೆ 62 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಆದರೆ ಬಿಆರ್‌ಎಸ್ 44 ಸ್ಥಾನಗಳಿಗೆ ಇಳಿಯಬಹುದು ಎಂದು ಭವಿಷ್ಯ ನುಡಿದಿದೆ. ನವೆಂಬರ್ 30 ರ ಚುನಾವಣೆಯಲ್ಲಿ ರಾಜ್ಯದ ಮತದಾನವು 71.34% ಆಗಿತ್ತು, ಇದು 2018 ಕ್ಕಿಂತ ಎರಡು ಶೇಕಡಾ ಕಡಿಮೆಯಾಗಿದೆ.

2018ರ ಚುನಾವಣೆಯಲ್ಲಿ ಟಿಆರ್‌ಎಸ್ (ಈಗಿನ ಬಿಆರ್‌ಎಸ್‌) 88 ಸ್ಥಾನಗಳನ್ನು ಪಡೆದು ವಿಜಯಶಾಲಿಯಾಗಿತ್ತು. ಕಾಂಗ್ರೆಸ್ 19 ಸ್ಥಾನಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ತೆಲುಗು ದೇಶಂ ಪಕ್ಷವು ಕೇವಲ ಎರಡು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎಐಎಂಐಎಂ ಏಳು ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಬಿಜೆಪಿ ಕೇವಲ ಒಂದನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 
 

Latest Videos
Follow Us:
Download App:
  • android
  • ios