Asianet Suvarna News Asianet Suvarna News

ಬ್ಯಾಟಲ್‌ ಆಫ್‌ ಬಘೇಲ್ಸ್‌: ಭೂಪೇಶ್‌-ವಿಜಯ್‌ ಬಘೇಲ್‌ ನಡುವೆ ಗೆಲುವಿಗಾಗಿ ಭರ್ಜರಿ ಫೈಟ್‌!


ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಎಕ್ಸಿಟ್‌ ಪೋಲ್‌ನ ಅಂದಾಜನ್ನು ಮೀರಿರುವ ಬಿಜೆಪಿ ಅಧಿಕಾರ ಹಿಡಿಯುವ ಹಾದಿಯಲ್ಲಿದೆ. ಈ ನಡುವೆ ಪಠಾಣ್‌ ವಿಧಾನಸಭಾ ಕ್ಷೇತ್ರದಲ್ಲಿ ಛತ್ತೀಸ್‌ಗಢ ಸಿಎಂ ಕಾಂಗ್ರೆಸ್‌ನ ಭೂಪೇಶ್‌ ಬಘೇಲ್ ಹಾಗೂ ಬಿಜೆಪಿಯ ಸಂಸದ ವಿಜಯ್‌ ಬಘೇಲ್ ನಡುವೆ ಗೆಲುವಿಗಾಗಿ ಹಾವು ಏಣಿ ಆಟ ನಡೆಯುತ್ತಿದೆ.
 

2023 Chhattisgarh Legislative Assembly Election Results CM Bhupesh Baghel is leading from Patan san
Author
First Published Dec 3, 2023, 12:48 PM IST

ನವದೆಹಲಿ (ಡಿ.3): ಕಾಂಗ್ರೆಸ್ ಅಭ್ಯರ್ಥಿ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ತಮ್ಮ ಸೋದರಳಿಯ, ಬಿಜೆಪಿ ಅಭ್ಯರ್ಥಿ ವಿಜಯ್ ಬಘೇಲ್ ಅವರ ನಡುವೆ ಗೆಲುವಿಗಾಗಿ ಹಾವು ಏಣಿ ಆಟ ನಡೆಯುತ್ತಿದೆ. ಒಂದು ಸುತ್ತಿನಲ್ಲಿ ಭೂಪೇಶ್‌ ಬಘೇಲ್ ಮುನ್ನಡೆ ಕಂಡಿದ್ದರೆ, ಇನ್ನೊಂದು ಸುತ್ತಿನಲ್ಲಿ ವಿಜಯ್‌ ಬಘೇಲ್ ಮುನ್ನಡೆಗೇರುತ್ತಿದ್ದಾರೆ. ಪಠಾಣ್‌ ವಿಧಾನಸಭಾ ಕ್ಷೇತ್ರದಲ್ಲಿ ಇವರಿಬ್ಬರು ಗೆಲುವಿಗಾಗಿ ಜಂಗೀಕುಸ್ತಿ ನಡೆಸುತ್ತಿದ್ದಾರೆ. ವಿಜಯ್ ಬಾಘೇಲ್ ದುರ್ಗ್‌ನ ಬಿಜೆಪಿಯ ಲೋಕಸಭಾ ಸಂಸದರಾಗಿದ್ದಾರೆ. ಐದನೇ ಸುತ್ತಿನ ಮತ ಎಣಿಕೆ ಮುಗಿದ ಬಳಿಕ ಭೂಪೇಶ್‌ ಬಘೆಲ್‌ 1452 ಮತಗಳಿಂದ ಮುನ್ನಡೆ ಕಂಡುಕೊಂಡಿದ್ದಾರೆ. ಇಲ್ಲಿಯವರೆಗೂ ಅವರು 26854 ಮತಗಳನ್ನು ಅವರು ಪಡೆದುಕೊಂಡಿದ್ದಾರೆ. ಆರಂಭಿಕ ಕೆಲವು ಸುತ್ತಿನಲ್ಲಿ ತಮ್ಮ ಅಂಕಲ್‌ ಭೂಪೇಶ್‌ ಬಘೇಲ್‌ ವಿರುದ್ಧವೇ ಸ್ಪರ್ಧೆ ಮಾಡಿದ್ದ ವಿಜಯ್‌ ಬಘೇಲ್‌ ಅಲ್ಪ ಮತಗಳ ಅಂತರದಲ್ಲಿ ಮುನ್ನಡೆ ಕಂಡುಕೊಂಡಿದ್ದರು. ಇನ್ನೊಂದೆಡೆ ಛತ್ತೀಸಸ್‌ಗಢದ ಉಪಮುಖ್ಯಮಂತ್ರಿ ಟಿಎಸ್‌ ಸಿಂಗ್‌ ದಿಯೋ,, ಅಂಬಿಕಾಪುರ ಕ್ಷೇತ್ರದಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ಪ್ರಾರಂಭಿಕ ವರದಿಗಳು ತಿಳಿಸಿವೆ.

2008 ಹಾಗೂ 2013ರಲ್ಲಿಯೂ  ವಿಜಯ್‌ ಬಘೇಲ್‌ ಹಾಗೂ ಭೂಪೇಶ್‌ ಬಘೇಲ್‌ ಮುಖಾಮುಖಿಯಾಗಿದ್ದರು. ಎರಡೂ ಬಾರಿ ಒಬ್ಬೊಬ್ಬರು ಗೆಲುವು ಸಾಧಿಸಿದ್ದಾರೆ. 1993 ರಿಂದ ಪಟಾನ್‌ನಿಂದ ಸತತ ಐದು ಗೆಲುವಿನ ದಾಖಲೆ ಹೊಂದಿದ್ದಾರೆ. ಇನ್ನೊಂದೆಡೆ ದುರ್ಗ್ ಪ್ರದೇಶದಲ್ಲಿ ವಿಜಯ್ ಬಾಘೆಲ್ ಅವರ ಜನಪ್ರಿಯತೆ ಮತ್ತು ಪ್ರದೇಶದ ಯುವಕರಲ್ಲಿ ಅವರ ಮನವಿ ಅವರನ್ನು ಪ್ರಮುಖ ಸ್ಪರ್ಧಿಯನ್ನಾಗಿ ಮಾಡಿದೆ.

ಬಘೇಲ್‌ಗಳ ಹೊರತಾಗಿ, ಅಮಿತ್ ಜೋಗಿ ಪಟಾನ್ ಹೋರಾಟಕ್ಕೆ ಇನ್ನಷ್ಟು ಫೈಟ್‌ ತುಂಬಿದ್ದಾರೆ. ಅಮಿತ್ ಜೋಗಿ ಅವರು ಜನತಾ ಕಾಂಗ್ರೆಸ್ ಛತ್ತೀಸ್‌ಗಢ (ಜೆ) ರಾಜ್ಯಾಧ್ಯಕ್ಷ ಮತ್ತು ಮಾಜಿ ಸಿಎಂ ದಿವಂಗತ ಅಜಿತ್ ಜೋಗಿ ಅವರ ಪುತ್ರ.

ಇಂಡಿಯಾ ಟುಡೇ-ಮೈ ಆಕ್ಸಿಸ್ ಎಕ್ಸಿಟ್ ಪೋಲ್ ಸೇರಿದಂತೆ ಬಹುತೇಕ ಎಕ್ಸಿಟ್ ಪೋಲ್‌ಗಳು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಗೆಲುವನ್ನು ಭವಿಷ್ಯ ನುಡಿದಿದ್ದವು. ರಾಜ್ಯದಲ್ಲಿ ನೆಕ್ ಟು ನೆಕ್ ಪೈಪೋಟಿಯಲ್ಲಿ ಬಿಜೆಪಿ ಹಿಂದುಳಿದಿಲ್ಲ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಗೊಂಡ್‌ವಾನ ಗಣತಂತ್ರ ಪಾರ್ಟಿ (ಜಿಜಿಪಿ) ಸೇರಿದಂತೆ ಇತರ ಪಕ್ಷಗಳು ಒಂದರಿಂದ ಐದು ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.

ಛತ್ತೀಸ್‌ಗಢದಲ್ಲಿ ಎಕ್ಸಿಟ್‌ ಪೋಲ್‌ಗಳ ಭವಿಷ್ಯ ಉಲ್ಟಾ: ಗೆಲುವಿನತ್ತ ಬಿಜೆಪಿ; ಮಹದೇವ ಹಗರಣಕ್ಕೆ ತಲೆಬಾಗಿದ ಕೈ!

"ನಾವು ನಮ್ಮ ಮೌಲ್ಯಮಾಪನವನ್ನು ನಡೆಸಿದ್ದೇವೆ ಮತ್ತು ಕಾಂಗ್ರೆಸ್ ಅನುಕೂಲಕರ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ ಎನ್ನುವ ವಿಶ್ವಾಸವಿದೆ" ಎಂದು ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದ ಸ್ವಲ್ಪ ಸಮಯದ ನಂತರ ಉಪ ಮುಖ್ಯಮಂತ್ರಿ ಟಿಎಸ್ ಸಿಂಗ್ ಡಿಯೋ ಹೇಳಿದ್ದರು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದೇ ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲಲು ಕಾರಣ: ಡಿ.ವಿ. ಸದಾನಂದ ಗೌಡ

Follow Us:
Download App:
  • android
  • ios