ನವದೆಹಲಿ[ಡಿ.17]: ನಿರ್ಭಯಾ ಪ್ರಕರಣದ ನಾಲ್ವರು ದೋಷಿಗಳ ಪೈಕಿ ಒಬ್ಬನಾದ ಅಕ್ಷಯ್‌ ಕುಮಾರ್‌ ಸಿಂಗ್‌, ಗಲ್ಲು ಶಿಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಪುನರ್‌ ಪರಿಶೀಲನಾ ಅರ್ಜಿ ವಿಚಾರಣೆನಡೆಸಿರುವ ಸುಪ್ರೀಂ ಕೋರ್ಟ್‌ನ ವಿಶೇಷ ತ್ರಿಸದಸ್ಯ ಪೀಠ ಅಪರಾಧಿಗಳ ಅರ್ಜಿ ವಜಾಗೊಳಿಸಿದೆ. ಈ ಮೂಲಕ ನಾಲ್ವರೂ ದೋಷಿಗಳ ಗಲ್ಲು ಖಾಯಂಗೊಳಿಸಿದೆ.

ಅಕ್ಷಯ್ ಪರ ವಕೀಲ ಹಾಗೂ ನಿರ್ಭಯಾ ಪರ ವಕೀಲರ ವಾದ ಪ್ರತಿವಾದ ಆಲಿಸಿದ ಜಸ್ಟೀಸ್ ಭಾನುಮತಿ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ಆದೇಶ ಕಾಯ್ದಿರಿಸಿತ್ತು. ಮಧ್ಯಾಹ್ನ 1 ಗಂಟೆಗೆ ಈ ಸಂಬಂಧ ತೀರ್ಪು ಪ್ರಕಟಿಸಿದ ನ್ಯಾಯಪೀಠ ಅಕ್ಷಯ್ ಅರ್ಜಿ ವಜಾಗೊಳಿಸಿದೆ ಹಾಗೂ ನಾಲ್ವರೂ ದೋಷಿಗಳ ಗಲ್ಲು ಖಾಯಂಗೊಳಿಸಿದೆ. ಮುಂದೆ ತಿಹಾರ್ ಜೈಲು ಅಧಿಕಾರಿಗಳು ಡೆತ್‌ವಾರಂಟ್‌ಗೆ ಅನುಮತಿ ಕೋರಿ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಲಿದ್ದಾರೆ.

ಇಂದೇ ಡೆತ್ ವಾರೆಂಟ್ ಹೊರಬೀಳುವ ಸಾಧ್ಯತೆ

ಈ ನಡುವೆ ದೋಷಿಗಳ ವಿರುದ್ಧ ಡೆತ್‌ ವಾರಂಟ್‌ ಜಾರಿ ಮಾಡಬೇಕು ಎಂದು ಕೋರಿ ನಿರ್ಭಯಾ ಪೋಷಕರು ಸಲ್ಲಿಸಿರುವ ಅರ್ಜಿ ಇಂದು ಗುರುವಾರ 2 ಗಂಟೆಗೆ ಪಟಿಯಾಲ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಹೀಗಾಗಿ ಇಂದೇ ಡೆತ್ ವಾರೆಂಟ್ ಹೊರಬೀಳುವ ಸಾಧ್ಯತೆ ಇದೆ.

ಕೇಂದ್ರದ ಪರ ಮೆಹ್ತಾ ವಾದವೇನಿತ್ತು?

* 3 ಕೋರ್ಟ್ಗಳು ವಿಚಾರಣೆ ನಡೆಸಿವೆ, ಮತ್ತೆ ವಾದ ಮಾಡಲು ಏನಿದೆ?

* ಕಾನೂನಿನ ಅಡಿಯಲ್ಲೇ ತನಿಖೆ ಆಗಿದೆ, ಯಾವುದೇ ಒತ್ತಡ ಇಲ್ಲ

* ಈ ಹಿಂದೆ ಸಲ್ಲಿಸಿದ್ದ 3 ಮರು ಪರಿಶೀಲನಾ ಅರ್ಜಿಗಳು ತಿರಸ್ಕೃತವಾಗಿವೆ

* ಅತ್ಯಾಚಾರಿ ಅಕ್ಷಯ್ ಬಳಿ ನಿರ್ಭಯಾಳ ಉಂಗುರ ಸಹ ಸಿಕ್ಕಿದೆ

* ಡಿಎನ್ಎ ಮಾದರಿ ಪರೀಕ್ಷೆಯಲ್ಲೂ ಅತ್ಯಾಚಾರ ಸಾಬೀತಾಗಿದೆ

* ಸ್ಥಳದಲ್ಲಿ ಸಿಕ್ಕ ಕೆಂಪು ಬನಿಯನ್ನ್ನೇ ಸಾಕ್ಷಿಯಾಗಿ ಪರಿಗಣನೆ

* ಆರೋಪಿಗಳನ್ನು  ವಿಶೇಷ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ

* ವಿರಳಾತಿವಿರಳ ಎಂದು ಈ ಪ್ರಕರಣವನ್ನು ಪರಿಗಣಿಸಬೇಕು 

* ಆರೋಪಿಗಳಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಬೇಕು

ಅತ್ಯಾಚಾರಿ ಪರ ವಕೀಲರ ವಾದವೇನು?

* ಅಪರಾಧಿ ಅಕ್ಷಯ್ ವಿರುದ್ಧ ಯಾವುದೇ ಪ್ರಬಲ ಸಾಕ್ಷಿಗಳಿಲ್ಲ

* ನಿಜವಾದ ಆರೋಪಿ ಹಿಡಿಯಲು ತನಿಖಾಧಿಕಾರಿ ವಿಫಲ 

* ಪ್ರಮುಖ ಅಪರಾಧಿ ರಾಮ್ಸಿಂಗ್ ಆತ್ಮಹತ್ಯೆ ಅಲ್ಲ ಕೊಲೆ

* ತಿಹಾರ್ ಜೈಲ್ ನಿವೃತ್ತಿ ಅಧಿಕಾರಿ ಬರೆದಿರುವ ಪುಸ್ತಕದಲ್ಲಿ ಉಲ್ಲೇಖ

* ಮೀಡಿಯಾ, ಸಾರ್ವಜನಿಕರು, ರಾಜಕಾರಣಿಗಳ ಒತ್ತಡ ಇದೆ

* ಇದು ಹೊಸ ಪ್ರಬಲ ಸಾಕ್ಷಿ, ತುಂಬಾ ಮುಖ್ಯವಾದದು

* ಈ ಪ್ರಕರಣದ ಏಕೈಕ ಸಾಕ್ಷಿ ನಿರ್ಭಯಾ ಸ್ನೇಹಿತನ ಮೇಲೆ ಕೇಸ್

* ಪ್ರಕರಣದ ದಿಕ್ಕು ತಪ್ಪಿಸಲು ಆತ ಹಣ ಸ್ವೀಕರಿಸಿದ್ದಾನೆ

* ದಿಲ್ಲಿ ಮಾಲಿನ್ಯದಿಂದ ಆಯಸ್ಸು ಕ್ಷೀಣಿಸುತ್ತಿರುವಾಗ ಗಲ್ಲುಶಿಕ್ಷೆ ಏಕೆ?

* ಉಪನಿಷತ್ ಪ್ರಕಾರ ಸತ್ಯಯುಗದಲ್ಲಿ ಸಾವಿರ ವರ್ಷ ಬದುಕುತ್ತಿದ್ದರು

* ಕಲಿಯುಗದಲ್ಲಿ 50 ರಿಂದ 60 ವರ್ಷ ಮಾತ್ರ ಬದುಕುತ್ತಿದ್ದಾರೆ

* ಅಪರಾಧವನ್ನು ಸಾಯಿಸಬೇಕೇ ಹೊರತು ಅಪರಾಧಿಯನ್ನಲ್ಲ

*ನಿರ್ಭಯಾಗೆ ನೋವು ನಿವಾರಕ ಮಂಪರು ಔಷಧ ನೀಡಲಾಗಿತ್ತು

* ಮಂಪರು ಔಷಧ ಸೇವಿಸಿ ಮರಣಪೂರ್ವ ಹೇಳಿಕೆ ನೀಡಲು ಸಾಧ್ಯವೇ?

*ನಿರ್ಭಯಾ ನೀಡಿದ 3ನೇ ಹೇಳಿಕೆಯಲ್ಲಿ ಅಕ್ಷಯ್ ಹೆಸರು ಬಂದಿದೆ

* ನಿರ್ಭಯಾ ಮರಣಪೂರ್ವ ಹೇಳಿಕೆಯನ್ನು ನಂಬಲಾಗದು

* ಬಡವರಿಗೆ ಮಾತ್ರ ಗಲ್ಲು ಶಿಕ್ಷೆ, ಶ್ರೀಮಂತರು ನೇಣುಗಂಬಕ್ಕೆ ಏರಲ್ಲ

* ರಾಜೀವ್ ಹಂತಕಿ ನಳಿನಿಗೆ ಗಲ್ಲುಶಿಕ್ಷೆ ಇಳಿಸಿ ಜೀವಾವಧಿ ನೀಡಲಾಗಿದೆ

* ಅಕ್ಷಯ್‌ಗೆ ಗಲ್ಲು ವಿಧಿಸಿದರೆ ಆತನ ಕುಟುಂಬದ ಜವಾಬ್ದಾರಿ ಯಾರದ್ದು?

* ಅಕ್ಷಯ್‌ಗೆ ಜೈಲು ಶಿಕ್ಷೆ ಕೊಡಿ, ಗಲ್ಲು ಶಿಕ್ಷೆ ರದ್ದುಪಡಿಸಿ

ನಿನ್ನೆ ಏನೇನಾಯ್ತು?

"

ವಿಚಾರಣೆಯಿಂದ ಹಿಂದೆ ಸರಿದಿದ್ದ ಬೋಬ್ಡೆ

ದೆಹಲಿಯಲ್ಲಿ ಈಗಾಗಲೇ ವಾಯು ಮತ್ತು ನೀರಿನ ಮಾಲಿನ್ಯದಿಂದಾಗಿ ಆಯುಷ್ಯ ಕಡಿಮೆಯಾಗಿದೆ. ಹೀಗಿರುವಾಗ ಗಲ್ಲು ಶಿಕ್ಷೆ ಏಕೆ ಎಂಬ ಕ್ಷುಲ್ಲಕ ಕಾರಣ ನೀಡಿ ಅಕ್ಷಯ್‌ಸಿಂಗ್‌ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ಮಂಗಳವಾರ ಈ ಅರ್ಜಿ ಪರಿಶೀಲಿಸಿದ ಕೈಗೆತ್ತಿಕೊಂಡಿದ್ದ CJI ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ವೈಯುಕ್ತಿಕ ಕಾರಣ ನೀಡಿ, ವಿಚಾರಣೆಯಿಂದ ಹಿಂದೆ ಸರಿದಿದ್ದರು.

ನಿರ್ಭಯಾ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ CJI, ದೋಷಿಗಳಿಗೆ ಗಲ್ಲು ವಿಳಂಬ?

ಬೋಬ್ಡೆ ಸಂಬಂಧಿ ಈ ಹಿಂದೆ ದೋಷಿ ಪರ ವಾದ ನಡೆಸುತ್ತಿರುದರಿಂದ ಅವರು ಈ ವಿಚಾರಣೆಯಿಂದ ಹಿಂದೆ ಸರಿಯಲು ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು. ಬಳಿಕ ಈ ಅರ್ಜಿಯನ್ನು ಜಸ್ಟೀಸ್ ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿತ್ತು. ಈ ಪ್ರತ್ಯೇಕ ಪೀಠದಲ್ಲಿ ಕನ್ನಡಿಗ ನ್ಯಾ. ಬೋಪಣ್ಣ ಕೂಡಾ ಇದ್ದಾರೆ ಎಂಬುವುದು ಉಲ್ಲೇಖನೀಯ.

#Nirbhaya rape case: Chief Justice of India (CJI) SA Bobde said, we will constitute another bench for hearing at 10:30 am tomorrow. https://t.co/dXlI9Fy0V7

— ANI (@ANI) December 17, 2019

ನಿರ್ಭಯಾ ದೋಷಿಗಳಿಗೆ ಸಾವಿನ ಭೀತೀಲಿ ಖಿನ್ನತೆ, ಆಹಾರ ಸೇವನೆ ಇಳಿಕೆ

ಗಲ್ಲು ಶಿಕ್ಷೆಗೆ ತಿಹಾರ್ ನಲ್ಲಿ ತಯಾರಿ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳ ಗಲ್ಲುಶಿಕ್ಷೆಗೆ ದಿನಗಣನೆ ಆರಂಭವಾಗಿದೆ. ಹೈದರಾಬಾದ್ ಎನ್ ಕೌಂಟರ್ ಪ್ರಕರಣದ ಬಳಿಕ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಕೂಗು ಮತ್ತೆ ಜೋರಾಗಿತ್ತು. ಹೀಗಿರುವಾಗ ಡಿಸೆಂಬರ್ 16ರಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಿರುವಾಗಲೇ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ನೀಡುವ ಕೊಠಡಿ ಸ್ವಚ್ಛತೆ ಕೆಲಸ ಆರಂಭವಾಗಿದ್ದು, ಗಲ್ಲಿಗೇರಿಸುವ ಹಗ್ಗ ತಯಾರು ಮಾಡುವಂತೆ ತಿಹಾರ್ ಜೈಲು ಸಿಬ್ಬಂದಿ, ಬಕ್ಸಾರ್ ಸಿಬ್ಬಂದಿಗೆ ಮನವಿ ಮಾಡಿದ್ದೂ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ನಾನು 'ನಿರ್ಭಯ': ಅತ್ಯಾಚಾರಿಗಳ ಕತ್ತಿಗೆ ಹಗ್ಗ ಹಾಕುವೆನೆಂದ ಪೇದೆ!

ಓರ್ವ ಅಪರಾಧಿ ಸಾವು

ನಿರ್ಭಯಾ ಸಾಮೂಹಿಕ ಅತ್ಯಾಚಾರದ 6 ಆರೋಪಿಗಳಲ್ಲಿ ಓರ್ವ 2013ರಲ್ಲೇ ತಿಹಾರ್ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ದೋಷಿ ಈ ಕೃತ್ಯ ನಡೆದ ವೇಳೆ ಅಪ್ತಾಪ್ತನಾಗಿದ್ದರಿಂದ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದಾನೆ.