Asianet Suvarna News Asianet Suvarna News

ಮೋದಿಗೆ ಮರಣದಂಡನೆ ಸಿಗಬೇಕು, ತೀಸ್ತಾ ಸೆಟಲ್ವಾಡ್ ವಿರುದ್ಧ ಸಲ್ಲಿಸಿರುವ ಚಾರ್ಜ್‌ಶೀಟ್ ಸ್ಫೋಟಕ ಮಾಹಿತಿ ಬಹಿರಂಗ!

2002ರ ಗುಜರಾತ್ ಗಲಭೆ ಬಳಿಕ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಗುಜರಾತ್ ಸರ್ಕಾರದ ವಿರುದ್ಧ ಇಡಿ ಪ್ರಕರಣದ ಹೊಣೆಯನ್ನು ಗುರಿಯಾಗಿಸುವ ಪ್ರಯತ್ನಗಳು ನಡೆದಿತ್ತು ಅನ್ನೋ ಸ್ಫೋಟಕ ಮಾಹಿತಿ ಈಗಾಗಲೇ ಬಹಿರಂಗವಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಚಾರ್ಜ್‌ಶೀಟ್‌ನ ಸ್ಪೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ.
 

2002 Gujarat riots case Wanted death sentence for Modi SIT charge sheet against Teesta Setalvad reveals conspiracy ckm
Author
First Published Sep 21, 2022, 8:41 PM IST

ಗುಜರಾತ್(ಸೆ.21):  ಗುಜರಾತ್‌ ದಂಗೆ 2002ರ ಪ್ರಕರಣ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಈ ಘಟನೆಯಲ್ಲಿ  ಅಮಾಯಕರನ್ನು ಸಿಲುಕಿಸಲು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ ಆರೋಪದಡಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಪೊಲೀಸ್ ಡಿಜಿ ಆರ್‌ಬಿ ಶ್ರೀಕುಮಾರ್ ಹಾಗೂ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧ ಗುಜರಾತ್ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ದಾಖಲಿಸಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 2002ರ ಗುಜರಾತ್ ಗಲಭೆ ಹೊಣೆಯನ್ನು ಸಂಪೂರ್ಣವಾಗಿ ಬಿಜೆಪಿ ಸರ್ಕಾರದ ಮೇಲೆ ಹೊರಿಸುವ ಪ್ರಯತ್ನ ಮಾಡಲಾಗಿತ್ತು. ಇಷ್ಟೇ ಅಲ್ಲ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿಸಲಾಗಿತ್ತು. ಹೇಗಾದರು ಮಾಡಿ ನರೇಂದ್ರ ಮೋದಿಗೆ ಮರಣದಂಡನೆ ಶಿಕ್ಷೆ ಸಿಗುವಂತೆ ಮಾಡುವುದೇ ಇದರ ಉದ್ದೇಶವಾಗಿತ್ತು ಅನ್ನೋದು ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ. ಇದರ ನೇತೃತ್ವವನ್ನು ತೀಸ್ತಾ ಸೆಟ್ವಾಡ್, ಆರ್‌ಬಿ ಶ್ರೀಕುಮಾರ್ ಹಾಗೂ ಸಂಜೀವ್ ಭಟ್ ವಹಿಸಿಕೊಂಡಿದ್ದರು. 

ನರೇಂದ್ರ ಮೋದಿಗೆ(Narendra Modi) ಅತ್ಯಂತ ಕಠಿಣ ಶಿಕ್ಷೆ ನೀಡಲು ಈ ಕಸರತ್ತು ಮಾಡಲಾಗಿತ್ತು. ಗೋದ್ರೋತ್ತರ ಗುಲಭೆಯ(Gujarat Roits) ಹೊಣೆಯನ್ನು ಮೋದಿ ನೇತೃತ್ವದ ಗುಜರಾತ್ ಸರ್ಕಾರದ ಮೇಲೆ ಹೊರಿಸಲಾಗಿತ್ತು. ಇದಕ್ಕಾಗಿ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ಮೋದಿಯನ್ನು ಸಿಲುಕಿಸಲು ಯತ್ನ ನಡೆದಿತ್ತು. ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ(Narendra Modi) ಹೆಸರು ಕೆಡಿಸಿ ಖಳನಾಯಕನಾಗಿ ಚಿತ್ರಿಸಲು ಈ ಪ್ಲಾನ್ ಮಾಡಲಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

ಗುಜರಾತ್‌ ಗಲಭೆ: ತೀಸ್ತಾಗೆ ಹಣ ಬೇಕಾ ಎಂದು ಕೇಳಿದ್ದರಂತೆ ಸೋನಿಯಾ!

ಮೂವರು ಆರೋಪಿಗಳ ವಿರುದ್ದ ಗುಜರಾತ್ ಪೊಲೀಸರು(Gujarat Police) 468, 194 ಹಾಗೂ 218ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಟಲ್ವಾಡ್(Teesta Setalvad) ಅವರನ್ನು ಜುನ್ ಅಂತ್ಯದಲ್ಲಿ ಗುಜರಾತ್ ಪೊಲೀಸರು ಬಂಧಿಸಿತ್ತು.  ಇತ್ತೀಚೆಗೆ ಸುಪ್ರೀಂ ಕೋರ್ಟ್( ಜಾಮೀನು ನೀಡಿದೆ. 

ಗುಜರಾತ್‌ ಗಲಭೆ ಆರೋಪಿ ತೀಸ್ತಾ ಸೆಟಲ್ವಾಡ್‌ ಜೈಲಿನಿಂದ ಹೊರಕ್ಕೆ
2002ರ ಗುಜರಾತ್‌ ದಂಗೆ ಪ್ರಕರಣದಲ್ಲಿ ಅಮಾಯಕರನ್ನು ಸಿಕ್ಕಿಹಾಕಿಸಲು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಅವರಿಗೆ ಮಧ್ಯಂತರ ಜಾಮೀನು ದೊರೆತ ಬಳಿಕ  ಜೈಲಿನಿಂದ ಹೊರಬಂದರು. ಜೂ.26ರಂದು ಬಂಧನವಾದ ಬಳಿಕ ಸಬರಮತಿ ಸೆಂಟ್ರಲ್‌ ಜೈಲಿನಲ್ಲಿ ಅವರನ್ನು ಇಡಲಾಗಿತ್ತು. ‘ತನಿಖಾ ಸಂಸ್ಥೆ ಈಗಾಗಲೇ ಅರ್ಜಿದಾರರನ್ನು 7 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಹೀಗಾಗಿ ಅವರು ಮಧ್ಯಂತರ ಜಾಮೀನು ಪಡೆಯಲು ಅರ್ಹರಿದ್ದಾರೆ’ ಎಂದು ಶುಕ್ರವಾರ ಅಭಿಪ್ರಾಯ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಚ್‌ ತೀಸ್ತಾ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಗೋಧ್ರಾ ಗಲಭೆ ಕೇಸಲ್ಲಿ ಮೋದಿಗೆ ಕ್ಲೀನ್‌ಚಿಟ್‌, ತೀಸ್ತಾ ಸೆತಲ್ವಾಡೆ ಬಂಧನದ ಹಿಂದಿನ ಕಥೆಯೇನು?

ತೀಸ್ತಾ, ಶ್ರೀಕುಮಾರ್‌ ಹಾಗೂ ಸಂಜೀವ್‌ ಭಟ್‌ ವಿರುದ್ಧ ಶನಿವಾರ ಮುಂಜಾನೆ ಗುಜರಾತ್‌ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ದೂರಿನಲ್ಲಿ ಗಲಭೆ ಸಂತ್ರಸ್ತರೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿದ ಸೆಟಲ್ವಾಡ್‌ ಅವರ ಎನ್‌ಜಿಒ ಮಾಡಿದ ಆರೋಪಗಳನ್ನು ಸುಪ್ರೀಂ ಕೋರ್ಚ್‌ ಖಾರವಾಗಿ ವಿರೋಧಿಸಿದ್ದನ್ನು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ತೀಸ್ತಾ ಅವರನ್ನು ನಕಲಿ ಮತ್ತು ಸುಳ್ಳು ದಾಖಲೆಗಳ ಸೃಷ್ಟಿಆರೋಪದ ಅಡಿ ಮುಂಬೈನ ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿತ್ತು.

Follow Us:
Download App:
  • android
  • ios