ದೆಹಲಿ(ಮೇ 08): ಕೊರೋನಾ ವೈರಸ್ ಜಗತ್ತನ್ನೇ ಪೀಡಿಸುತ್ತಿರುವ ಸಂದರ್ಭದಲ್ಲಿಯೇ ಭಾರತದಲ್ಲಿ ಸುಮಾರು ಇನ್ನೂರು ಲಕ್ಷ ಮಕ್ಕಳು ಹುಟ್ಟಲಿದ್ದಾರೆ ಎಂಬ ಮಾಹಿತಿಯನ್ನು ಯುನಿಸೆಫ್ ತಿಳಿಸಿದೆ.

ಭಾರತದಲ್ಲಿ ಮಾರ್ಚ್‌ನಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಕೊರೋನಾ ವೈರಸ್ ಸಮಯದಲ್ಲಿ ಹುಟ್ಟಿದ ತಾಯಿ ಹಾಗೂ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಯುನಿಸೆಫ್ ಎಚ್ಚರಿಸಿದೆ.

ಮೊಸಳೆ, ಹೈನಾ, ಹಾವು ಸತ್ತರೆ ಅವರು ಸೆಕ್ಸ್‌ಗೆ ಹೇಳಬೇಕು ಗುಡ್‌ ಬೈ; ಏನಿದು ನಿಗೂಢ ?

ಮಾರ್ಚ್ 10ರಂದು ತಾಯಂದಿರ ದಿನಾಚರಣೆ ನಡೆಯಲಿದ್ದು, ಇದಕ್ಕೂ ಮುನ್ನ ಮಕ್ಕಳ ಜನನದ ಬಗ್ಗೆ ತಿಳಿಸಿರುವ ಯುನಿಸೆಫ್ 1116 ಮಿಲಿಯನ್ ಮಕ್ಕಳ ಜನನದ ಮೇಲೆ ಕೊರೋನಾ ಕರಿನೆರಳು ಬೀಳಲಿದೆ ಎಂದಿದೆ.

ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್.. ಇಲ್ಲಿಯೂ ಸಿಗುತ್ತದೆ ಮದ್ಯ!

ಮಾರ್ಚ್‌ ನಂತರ ಮುಂದಿನ 40 ವಾರದಲ್ಲಿ ಕೊರೋನಾ ವೈರಸ್ ಭೀತಿ ಮಾಸುವ ಮುನ್ನವೇ ಹೆಚ್ಚಿನ ಮಕ್ಕಳು ಹುಟ್ಟಲಿದ್ದಾರೆ ಎನ್ನಲಾಗಿದೆ. ಮಾರ್ಚ್‌ನಿಂದ ಆರಂಭಗೊಂಡಂತೆ ಮುಂದಿನ 9 ತಿಂಗಳು ಅತ್ಯಂತ ಹೆಚ್ಚು ಜನನ ಪ್ರಮಾಣವಿರಲಿದೆ. ಕೊರೋನಾ ಭೀತಿ ನಡುವೆ ಚೀನಾ, ನೈಜೀರಿಯಾ, ಪಾಕಿಸ್ತಾನ ಇಂಡೋನೇಷ್ಯಾದಲ್ಲೂ ಹೆಚ್ಚಿನ ಮಕ್ಕಳು ಹುಟ್ಟಲಿದ್ದಾರೆ.