ಬೆಂಗಳೂರು(ಮೇ. 08)  ನಾಳೆ ಅಂದರೆ ಮೇ 9 ರಿಂದ  ಲಾಡ್ಜ್, ಬಾರ್, ಕ್ಲಬ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಅಬಕಾರಿ ಸಚಿವ ನಾಗೇಶ್  ತಿಳಿಸಿದ್ದಾರೆ.

"

Mrp ಬೆಲೆಗೆ ಮಾರಾಟ ಮಾಡಬೇಕು.  Mrp ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದ್ರೆ ಲೈಸನ್ಸ್ ರದ್ದು ಮಾಡಲಾಗುತ್ತದೆ.  ಇದರ ಜವಬ್ದಾರಿ ಮಾಲೀಕರದ್ದು . ಖರೀದಿ ಸಮಯ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಇರಲಿದೆ ಎಂದು ತಿಳಿಸಿದ್ದಾರೆ.

ಅಪ್ಪನೊಂದಿಗೆ ಕುಳಿತು ಎಣ್ಣೆ ಹೊಡೆಯುವ ಬೆಂಗಳೂರು ಯುವತಿ

ಪಾರ್ಸೆಲ್ ಗೆ ಮಾತ್ರ ಅವಕಾಶ ಇದ್ದು ಅಲ್ಲಿಯೇ ಕುಳಿತು ಮದ್ಯ ಸೇವನೆ ಮಾಡುವಂತೆ ಇಲ್ಲ. ಒಂದು ರೀತಿಯಲ್ಲು ವೈನ್ ಶಾಪ್ ತೆರನಾಗಿಯೇ ಕಾರ್ಯನಿರ್ವಹಿಸಲಿದ್ದುಸ್ಟಾಕ್ ನಲ್ಲಿರುವ ಮದ್ಯ ಹಾಳಾಗದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. 

ಮದ್ಯಪ್ರಿಯರ ಜೇಬಿಗೆ ಸರ್ಕಾರದ ಕತ್ತರಿ

ವರ್ಷಕ್ಕೆ ಅಬಕಾರಿ ಆದಾಯ ಸರ್ಕಾರಕ್ಕೆ 25 ಸಾವಿರ ಕೋಟಿ ಬರಲಿದೆ.  ಈ ವರ್ಷ 2500 ಕೋಟಿ ಹೆಚ್ಚಾಗಲಿದೆ.  22500 ಕೋಟಿ ಆದಾಯಕ್ಕೆ 2500 ಕೋಟಿ ಹೆಚ್ಚಳ ಆಗಲಿದೆ  ಎಂಬ ಮಾಹಿತಿಯನ್ನು ನಾಗೇಶ್ ನೀಡಿದ್ದಾರೆ. ಕೊರೋನಾ ವೈರಸ್ ಲಾಕ್ ಡೌನ್ ಕಾರಣ ಮದ್ಯ ಮಾರಾಟ ಬಂದ್ ಮಾಡಲಾಗಿತ್ತು. ಮೇ. 4 ರಿಂದ ಕರ್ನಾಟಕ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು.

ಹೋಟೆಲ್ ಗಳಲ್ಲಿ ಟಿ ಕಾಫಿ ಸೇವನೆಗೆ ಅವಕಾಶ ಲಭ್ಯವಾಗಲಿದೆ.   ಆದರೆ ಊಟ - ಉಪಹಾರಕ್ಕೆ ಅವಕಾಶ ಇಲ್ಲ.  ಕೇವಲ ಪಾರ್ಸೆಲ್ ಗೆ ಹಿಂದಿದ್ದ ಅನುಮತಿ ಮುಂದುವರಿಕೆ ಮಾಡಲಾಗುತ್ತಿದೆ.