Youtube Channel ನಲ್ಲಿ ಹಣ ಗಳಿಸಲು ಈ ರೂಲ್ಸ್ ಫಾಲೋ ಮಾಡಿ : ಟ್ಯಾಕ್ಸ್ ಕಟ್ಟೋಕೆ ಮರೀಬೇಡಿ
ಯುಟ್ಯೂಬ್ ಚಾನೆಲ್ ಸದ್ಯ ಗಳಿಕೆಯ ಮೂಲ. ಕೋಟ್ಯಾಂತರ ಚಾನೆಲ್ ನಮ್ಮಲ್ಲಿದ್ರೂ ಕೆಲ ಯುಟ್ಯೂಬರ್ ಗಳಿಕೆ ಲಕ್ಷಾಂತರ ರೂಪಾಯಿ ಮೇಲಿದೆ. ಅದಕ್ಕೆ ಅವರ ಪರಿಶ್ರಮ ಹಾಗೂ ಕೆಲ ಟ್ರಿಕ್ಸ್ ಕಾರಣ.
ಯುಟ್ಯೂಬ್ ಚಾನೆಲ್ ಶುರು ಮಾಡಿ ಲಕ್ಷಾಂತರ ರೂಪಾಯಿ ಗಳಿಕೆ ಮಾಡ್ಬಹುದು ಅಂತಾ ನಾವು ಕೇಳ್ತಿರುತ್ತೇವೆ. ಅನೇಕ ಸೆಲೆಬ್ರಿಟಿಗಳು ಯುಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಮೂಲಕ ಹಣ ಗಳಿಸೋದಾಗಿ ಹೇಳ್ತಿರುತ್ತಾರೆ. ಬರೀ ಸೆಲೆಬ್ರಿಟಿಗಳು ಮಾತ್ರವಲ್ಲ ಅನೇಕ ಸಾಮಾನ್ಯ ಜನರು ಯುಟ್ಯೂಬ್ ಮೂಲಕವೇ ಸೆಲೆಬ್ರಿಟಿಗಳಾಗಿದ್ದಾರೆ. ನಟ ಹಾಗೂ ಅವರ ನಾಲೇಷ್ ನಿಂದಾಗಿ ಕೆಲಸ ಗಿಟ್ಟಿಸಿಕೊಂಡವರಿದ್ದಾರೆ. ಯುಟ್ಯೂಬ್ ನ ಕೆಲ ಚಾನೆಲ್ ಗಳಲ್ಲಿ ವಿಡಿಯೋ ಪೋಸ್ಟ್ ಮಾಡಿ ಗಂಟೆ ಆಗಿರೋದಿಲ್ಲ ಆಗ್ಲೇ ಸಾವಿರಾರು ವ್ಯೂವ್ಸ್ ಬಂದಿರುತ್ತದೆ. ಅದೇ ನೀವು ಮಾಡಿದ ವಿಡಿಯೋವನ್ನು ತಿಂಗಳಲ್ಲಿ ನಾಲವತ್ತೋ ಐವತ್ತೋ ಜನರು ವೀಕ್ಷಣೆ ಮಾಡಿರ್ತಾರೆ. ಪ್ರತಿ ತಿಂಗಳು ಸಾವಿರಾರು ರೂಪಾಯಿ ಗಳಿಕೆ ಮಾಡೋದಿರಲಿ ಚಾನೆಲ್ ಗೂಗಲ್ ಆಡ್ ಗೆ ಸೇರಬೇಕೆಂದ್ರೆ ಅಗತ್ಯವಿರುವ ಸಬ್ಸ್ಕ್ರೈಬರ್ ಹಾಗೂ ವೀವ್ಸ್ ನಿಮಗೆ ಆಗಿರೋದಿಲ್ಲ. ಯುಟ್ಯೂಬ್ ನಲ್ಲಿ ಹೆಚ್ಚು ಸಬ್ಸ್ಕ್ರೈಬರ್ ಆಗ್ಬೇಕು, ವೀವ್ಸ್ ಹೆಚ್ಚಾಗಿ ನೀವು ಹಣ ಗಳಿಕೆ ಮಾಡ್ಬೇಕು ಅಂದ್ರೆ ಏನು ಮಾಡ್ಬೇಕು ಅಂತಾ ನಾವು ಹೇಳ್ತೇವೆ. ಕೆಲ ಸುಲಭ ಟಿಪ್ಸ್ ಫಾಲೋ ಮಾಡೋ ಮೂಲಕ ನೀವು ಹಣ ಗಳಿಕೆ ಶುರು ಮಾಡ್ಬಹುದು.
ವಿವಾದಿತ ವಿಷ್ಯಗಳನ್ನು ಪೋಸ್ಟ್ ಮಾಡ್ಬೇಡಿ : ನೀವು ಈಗಷ್ಟೆ ಯುಟ್ಯೂಬ್ (YouTube) ಚಾನೆಲ್ ಶುರು ಮಾಡಿರಬಹುದು ಇಲ್ಲವೆ ನಿಮ್ಮ ಚಾನೆಲ್ ಗಳಿಕೆ ಶುರು ಮಾಡಿರಬಹುದು ಸಂದರ್ಭ ಯಾವುದೇ ಇರಲಿ ನೀವು ವಿವಾದಾತ್ಮಕ ವಿಷ್ಯವನ್ನು ಪೋಸ್ಟ್ ಮಾಡ್ಬೇಡಿ. ವಿವಾದಾತ್ಮಕ ವಿಷ್ಯವನ್ನು ಜನರು ವೀಕ್ಷಣೆ ಮಾಡಬಹುದು. ಆದ್ರೆ ಇದು ನಿಮ್ಮ ಗಳಿಕೆಗೆ ಅಡ್ಡಿಯುಂಟು ಮಾಡುತ್ತದೆ. ವಿವಾದಾತ್ಮಕ ವಿಷ್ಯ ಹಾಕಿದ್ರೆ ಯುಟ್ಯೂಬ್ ನಿಮ್ಮ ಚಾನೆಲ್ (Channel) ಮಾನಿಟೈಸ್ ಮಾಡೋದಿಲ್ಲ.
ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳೆ ಕೊಡಗಿನ ಮಗಳು, 10 ವರ್ಷದಲ್ಲಿ 1500 ಕೋಟಿ!
ನಿಯಮಿತವಾಗಿ ವಿಡಿಯೋ (Video) ಪೋಸ್ಟ್ ಮಾಡಿ : ಚಾನೆಲ್ ಶುರು ಮಾಡಿದ ಜೋಶ್ ನಲ್ಲಿ ಆರಂಭದಲ್ಲಿ ನೀವು ಒಂದಷ್ಟು ವಿಡಿಯೋ ಹಾಕಿರ್ತೀರಿ. ವೀಕ್ಷಕರು ಆಗಷ್ಟೆ ಬರಲು ಶುರು ಮಾಡಿರ್ತಾರೆ. ಈ ಸಮಯದಲ್ಲಿ ನೀವು ವಿಡಿಯೋ ಪೋಸ್ಟ್ ಮಾಡೋದನ್ನು ನಿಲ್ಲಿಸಿದ್ರೆ ಗಳಿಕೆಗೆ ಅಡ್ಡಿಯಾಗುತ್ತದೆ. ಪ್ರತಿದಿನ ನಿಮ್ಮ ಚಾನಲ್‌ಗೆ ವೀಡಿಯೊವನ್ನು ಅಪ್‌ಲೋಡ್ ಮಾಡಬೇಕು. ಆಗ ವೀಕ್ಷಕರು ನಿಲ್ಲುತ್ತಾರೆ. ಇದಲ್ಲದೆ ಹೊಸ ಹೊಸ ವಿಷ್ಯಗಳನ್ನು ಅಪ್ಲೋಡ್ ಮಾಡಲು ನೀವು ಪ್ರಯತ್ನ ನಡೆಸಬೇಕು. ಇನ್ಸ್ಟಾ ಹಾಗೂ ಶಾರ್ಟ್ಸ್ ನಲ್ಲಿ ಪ್ರತಿ ದಿನ ವಿಡಿಯೋ ಹಾಕ್ಬೇಕು. ಯೂಟ್ಯೂಬ್ ಚಾನೆಲ್ ನಲ್ಲಿ ನೀವು ವಾರಕ್ಕೆ ಒಂದೋ ಎರಡೋ ಹಾಕ್ತಿದ್ದರೆ ಪ್ರತಿ ಬಾರಿ ಅದೇ ದಿನ ಹಾಗೂ ಅದೇ ಸಮಯಕ್ಕೆ ಪೋಸ್ಟ್ ಮಾಡಿ.
ವಿಡಿಯೋ ಸಮಯಕ್ಕೆ ಆದ್ಯತೆ ನೀಡಿ : ನೀವು ಯಾವುದೇ ವಿಡಿಯೋ ಮಾಡುವಾಗ್ಲೂ ವಿಡಿಯೋ ಸಮಯಕ್ಕೆ ಮಹತ್ವ ನೀಡಿ. ಆ ವೀಡಿಯೊದ ಸಮಯ ಹೆಚ್ಚು ಇರಬಾರದು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಇನ್ಸ್ಟಾಗ್ರಾಮ್, ಶಾರ್ಟ್ಸ್ ಗೆ ವೀಡಿಯೊ ಹಾಕುವ ವೇಳೆ ಸಮಯ 60 ಸೆಕೆಂಡುಗಳಿಗಿಂತ ಹೆಚ್ಚಿರಬಾರದು. ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಹಾಕುವಾಗ ಮೂನ್ಲಾಲ್ಕು ನಿಮಿಷಕ್ಕೆ ಮುಗಿಸಲು ಪ್ರಯತ್ನಿಸಿ.
ದುಡ್ಡು ಮಾಡೋದು ಹೇಗೆ? : 10 ಸಾವಿರ ಹೂಡಿಕೆ ಮಾಡಿ, ತಿಂಗಳಿಗೆ 50 ಸಾವಿರ ಗಳಿಸೋ ಬ್ಯುಸಿನೆಸ್ ಇದು
ಆಸಕ್ತಿಕರ ವಿಷ್ಯ ಹಾಕಿ : ನಿಮ್ಮ ವೀಡಿಯೊ ಆಸಕ್ತಿದಾಯಕವಾಗಿಲ್ಲದಿದ್ದರೆ ನಿಮ್ಮ ಫಾಲೋವರ್ಸ್ ಹಿಂದೆ ಹೋಗ್ಬಹುದು. ವೀಡಿಯೊವನ್ನು ಆಸಕ್ತಿದಾಯಕವಾಗಿಸಲು ಅನಿಮೇಷನ್ ಮತ್ತು ಗ್ರಾಫಿಕ್ಸ್ ಅನ್ನು ಸಹ ನೀವು ಬಳಸಬಹುದು. ಹಾಗೆಯೇ ಜನರಿಗೆ ಇಂಟರೆಸ್ಟ್ ಇರುವ ಹಾಗೂ ಸದ್ಯ ಟ್ರೆಂಡ್ ನಲ್ಲಿರುವ ವಿಡಿಯೋವನ್ನು ನೀವು ಪೋಸ್ಟ್ ಮಾಡ್ಬೇಕು.
ಯುಟ್ಯೂಬ್ ಗಳಿಕೆ – ತೆರಿಗೆ ಬಗ್ಗೆ ತಿಳಿದಿರಿ : ಯುಟ್ಯೂಬ್ ನಿಂದ ಹಣ ಗಳಿಸುವವರು ತೆರಿಗೆ ಬಗ್ಗೆಯೂ ತಿಳಿದಿರಬೇಕು. ಯೂಟ್ಯೂಬ್‌ನಿಂದ ಮಾಡಿದ ಆದಾಯವನ್ನು ವ್ಯಾಪಾರದ ಆದಾಯವೆಂದು ಪರಿಗಣಿಸಲಾಗುತ್ತದೆ. ಯೂಟ್ಯೂಬ್ ಚಾನೆಲ್‌ನಿಂದ ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಆದಾಯವಿದ್ದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 44 ಎಬಿ ಅಡಿಯಲ್ಲಿ ಆ ಯೂಟ್ಯೂಬರ್ ತನ್ನ ಖಾತೆಯನ್ನು ಲೆಕ್ಕಪರಿಶೋಧನೆ ಮಾಡಬೇಕಾಗುತ್ತದೆ.