ನಕಲಿ ಖಾತೆ ಬಳಸಿ 175 ಕೋಟಿ ರೂ ಅವ್ಯವಹಾರ ನಡೆಸಿದ ಆರೋಪದ ಮೇಲೆ ಹೈದರಾಬಾದ್‌ನ ಎಸ್‌ಬಿಐ ಬ್ಯಾಂಕ್‌ನ ಮ್ಯಾನೇಜರ್‌ ಹಾಗೂ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಹೈದರಾಬಾದ್‌: ನಕಲಿ ಖಾತೆ ಬಳಸಿ 175 ಕೋಟಿ ರೂ ಅವ್ಯವಹಾರ ನಡೆಸಿದ ಆರೋಪದ ಮೇಲೆ ಹೈದರಾಬಾದ್‌ನ ಎಸ್‌ಬಿಐ ಬ್ಯಾಂಕ್‌ನ ಮ್ಯಾನೇಜರ್‌ ಹಾಗೂ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಹೈದರಾಬಾದ್‌ ನಗರದ ಶಂಶೀರ್ ಗುಂಜ್ ಪ್ರದೇಶದಲ್ಲಿರುವ ಎಸ್‌ಬಿಐನ ಬ್ಯಾಂಕ್ ಮ್ಯಾನೇಜರ್‌ ಹಾಗೂ ಸಿಬ್ಬಂದಿ ಕೆಲ ಕಳ್ಳ ವ್ಯವಹಾರಿಗಳ ಜೊತೆ ಸೇರಿ ಫ್ರಾಡ್ ಮಾಡಿದ್ದಾರೆ. ಅಕ್ರಮ ವ್ಯವಹಾರ ನಡೆಸುವವರಿಗೆ ನಕಲಿ ಕರೆಂಟ್ ಖಾತೆಗಳನ್ನು ಮಾಡಿಕೊಟ್ಟು ಹಣ ಅವರು ಹಣ ವಿತ್‌ಡ್ರಾ ಮಾಡಿಕೊಳ್ಳಲು ನೆರವಾಗಿದ್ದಾರೆ. ಅಲ್ಲದೇ ಹಣವನ್ನು ಬೇರೆಡೆಗೆ ತಿರುಗಿಸುವ ಯೋಜನೆಗೆ ನೆರವಾಗಿದ್ದಾರೆ. ಇದೆಲ್ಲ ಅವ್ಯವಹಾರವನ್ನು ಬ್ಯಾಂಕ್ ಮ್ಯಾನೇಜರ್ ಕಮೀಷನ್ ಆಸೆಗಾಗಿ ಮಾಡಿದ್ದಾರೆ ಎಂದು ಹೈದರಾಬಾದ್‌ನ ಎಸ್‌ಬಿಐ ಮುಖ್ಯ ಕಚೇರಿಯ ಸೈಬರ್‌ ಸೆಕ್ಯೂರಟಿ ಬ್ಯುರೋದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಮ್ಯಾನೇಜರ್ 49 ವರ್ಷದ ಮಧು ಬಾಬು ಗಲಿ, ಜಿಮ್ ಟ್ರೈನರ್ 34 ವರ್ಷದ ಉಪಾಧ್ಯಾಯ ಸಂದೀಪ್ ಶರ್ಮಾ ಎಂಬಾತನನ್ನು ಬಂಧಿಸಲಾಗಿದ್ದು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. 

ಬ್ಯಾಂಕ್ ಜೊತೆ ಬಿಸಿನೆಸ್ ಮಾಡಿ ತಿಂಗಳಿಗೆ ಗಳಿಸಿ 60 ರಿಂದ 70 ಸಾವಿರ ರೂ ಆದಾಯ!

ಬ್ಯಾಂಕ್‌ನ ಸೈಬರ್ ಸೆಕ್ಯೂರಿಟಿ ಬ್ಯೂರೋದ ಡಾಟಾ ಅನಾಲಿಸೀಸ್ ತಂಡವೂ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ಶಂಶೀರ್‌ ಗುಂಜ್‌ ಎಸ್‌ಬಿಐ ಬ್ಯಾಂಕ್‌ ಶಾಖೆಯ ಆರು ಖಾತೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳ ಬಂದಿರುವುದನ್ನು ಗಮನಿಸಿತ್ತು. ಅಲ್ಲದೇ ಇದೇ ವಿಚಾರದ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಜೊತೆಗೆ ವೇರಿಫಿಕೇಷನ್ ಕೂಡ ಮಾಡಲು ಆರಂಭಿಸಿತ್ತು. ಅಂದಾಜು 600 ದೂರುಗಳು ಈ ಖಾತೆಗಳ ಬಗ್ಗೆ ಬಂದಿದ್ದವು. ಈ ಸಂದರ್ಭದಲ್ಲಿ ಕೇವಲ 2 ತಿಂಗಳ ಅವಧಿಯಲ್ಲಿ ಅಂದರೆ ಮಾರ್ಚ್‌ 2024ರಿಂದ ಏಪ್ರಿಲ್ 2024ರವರೆಗೆ ಭಾರಿ ಮೊತ್ತದ ಹಣ ಈ ಖಾತೆಗಳ ಮಧ್ಯೆ ವರ್ಗಾವಣೆ ಆಗಿರುವುದು ಗಮನಕ್ಕೆ ಬಂದಿತ್ತು.

ಈ ಪ್ರಕರಣದ ಪ್ರಮುಖ ರೂವಾರಿ ದುಬೈನಲ್ಲಿ ನೆಲೆಸಿದ್ದು, ಈತನ ಐವರು ಸಹಚರರು ಆರ್ಥಿಕವಾಗಿ ಹಿಂದುಳಿದ ಜನರಿಗೆ ಹಣದ ಆಮಿಷವೊಡ್ಡಿ ಖಾತೆ ತೆರೆಯುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೇ ಕಮೀಷನ್ ಆಧಾರದ ಮೇಲೆ ಈ ಖಾತೆಗಳ ಮೂಲಕ ಸೈಬರ್‌ ಕ್ರೈಂ ಹಾಗೂ ಹವಾಲಾ ಹಣದ ವರ್ಗಾವಣೆ ನಡೆಸಿ ಅಕ್ರಮವೆಸಗುತ್ತಿದ್ದರು. 
ಆಗಸ್ಟ್ 24ರಂದು ಈ ವಿಚಾರಕ್ಕೆ ಸಂಬಂಧಿಸಿದಂತೆ ಸೈಬರ್‌ ಸೆಕ್ಯೂರಿಟಿ ಬ್ಯುರೋ ಇಬ್ಬರನ್ನು ಬಂಧಿಸಿತ್ತು. ಮೊಹಮ್ಮದ್ ಶೋಯೆಬ್ ತಾಖಿರ್ ಹಾಗೂ ಮೊಹಮ್ಮದ್ ಬಿನ್ ಅಹ್ಮದ್ ಬವಜಿರ್‌ ಎಂಬುವವರನ್ನು 15 ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು. 

ಬೆಂಗಳೂರು: ಸೈಟ್‌ ಖರೀದಿ ನೆಪದಲ್ಲಿ ಎಸ್‌ಬಿಐಗೆ 2.30 ಕೋಟಿ ಪಂಗನಾಮ..!

ಬಂಧಿತರಲ್ಲಿ ಶೋಯೆಬ್ ಬ್ಯಾಂಕ್ ಖಾತೆ ತೆರೆಯುವ ಹಾಗೂ ಅದಕ್ಕಾಗಿ ದಾಖಲೆಗಳನ್ನು ಸಿದ್ಧಪಡಿಸುಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ. ಖಾತೆ ತೆರೆದ ನಂತರ ಖಾತೆದಾರರ ಸಹಿಯನ್ನು ಖಾಲಿ ಚೆಕ್‌ಗಳಿಗೆ ಹಾಕಿಸಿಕೊಳ್ಳುತ್ತಿದ್ದರು. ಬಳಿಕ ಆ ಚೆಕ್‌ ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಕ್ರಿಫ್ಟೊಕರೆನ್ಸಿ ಮೂಲಕವೂ ಇವರು ಸ್ವಲ್ಪ ಮೊತ್ತದ ಹಣವನ್ನು ದುಬೈಗೆ ಕಳುಹಿಸಿದ್ದರು. 

ಈ ಅಕ್ರಮ ವ್ಯವಹಾರದ ಪ್ರಮುಖ ರೂವಾರಿಯ ನಿರ್ದೇಶನದಂತೆ ಆತನ ಸಹಚರರು ಹಣ ಡ್ರಾ ಮಾಡಿ ಏಜೆಂಟರುಗಳ ಸಹಾಯದಿಂದ ಇತರರಿಗೆ ಹಂಚುತ್ತಿದ್ದರು. ಅದೇ ರೀತಿ ಶೋಯೆಬ್ ಹಾಗೂ ಇತರರು ಕೆಲ ಬಡ ಜನರನ್ನು ಸಂಪರ್ಕಿಸಿ ಅವರ ಬಳಿ ಸಂಶೀರ್ ಗುಂಜ್‌ನ ಎಸ್‌ಬಿಐ ಬ್ರಾಂಚ್‌ನಲ್ಲಿ ಖಾತೆ ತೆರೆಯುವಂತೆ ಫೆಬ್ರವರಿ ತಿಂಗಳಲ್ಲಿ ಅವರ ಮನವೊಲಿಸಿದ್ದರು. ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಅವರಿಗೆ ಕಮೀಷನ್ ನೀಡುವುದಾಗಿ ಹೇಳಿದ್ದರು. ಇದಾದ ನಂತರ ಈ ಆರು ಖಾತೆಗಳಲ್ಲಿ ಒಟ್ಟು 175 ಕೋಟಿ ವ್ಯವಹಾರಗಳನ್ನು ನಡೆಸಿದ್ದರು. 

ಹೈದರಾಬಾದ್ ಎಸ್‌ಪಿ ದೇವೇಂದ್ರ ಸಿಂಗ್ ಮೇಲುಸ್ತುವಾರಿಯಲ್ಲಿ ಡೆಪ್ಯುಟಿ ಎಸ್‌ಪಿ ಹರಿ ಕೃಷ್ಣ ಹಾಗೂ ಕೆವಿಎಂ ಪ್ರಸಾದ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಇನ್ಸ್‌ಪೆಕ್ಟರ್ ಡಿ. ಶ್ರೀನು, ಮಹೇಂದರ್‌, ಕಾನ್ಸಟೇಬಲ್ ವೆಂಕಟ್‌ ಗೌಡ, ಸೈಯದ್‌ ತಾಹೀರ್ ಕೃಷ್ಣ ಸ್ವಾಮಿ ಹಾಗೂ ಶಂಕರ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. 

ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ಗಳ ವೇತನ ಶ್ರೇಣಿ ಲಕ್ಷಕ್ಕೆ ಹತ್ತಿರದಲ್ಲಿದೆ. ಹೀಗಿರುವಾಗ ಇನ್ನು ಬೇಕು ಎಂಬ ದುರಾಸೆಗೆ ಒಳಗಾದ ಬ್ಯಾಂಕ್ ಮ್ಯಾನೇಜರ್ ಅಕ್ರಮವೆಸಗಲು ಮುಂದಾಗಿದ್ದು, ಈಗ ಕೆಲಸವೂ ಹೋಗಿದ್ದಲ್ಲದೇ ಕಂಬಿ ಹಿಂದೆ ಕೂರುವಂತಾಗಿದೆ.