Asianet Suvarna News Asianet Suvarna News

ಬ್ಯಾಂಕ್ ಜೊತೆ ಬಿಸಿನೆಸ್ ಮಾಡಿ ತಿಂಗಳಿಗೆ ಗಳಿಸಿ 60 ರಿಂದ 70 ಸಾವಿರ ರೂ ಆದಾಯ!

ಬ್ಯಾಂಕ್‌ನಲ್ಲಿ ಹೂಡಿಕೆ, ಉಳಿತಾಯ ಸೇರಿದಂತೆ ಹಲವು ವಿಧಾನದಲ್ಲಿ ಬಡ್ಡಿ ಪಡೆಯಲು ಸಾಧ್ಯವಿದೆ. ಜೊತೆಗೆ ಬ್ಯಾಂಕ್ ಜೊತೆ ಬಿಸಿನೆಸ್ ಮಾಡಿ ತಿಂಗಳಿಗೆ 60 ರಿಂದ 70 ಸಾವಿರ ರೂಪಾಯಿ ಆದಾಯ ಗಳಿಸಲು ಅವಕಾಶವಿದೆ.

Business with bank tips take sbi atm franchise and earn RS 60 t0 70000 per month ckm
Author
First Published Aug 23, 2024, 3:02 PM IST | Last Updated Aug 23, 2024, 3:02 PM IST

ನವದೆಹಲಿ(ಆ.23) ಡಿಜಿಟಲ್ ಇಂಡಿಯಾದಲ್ಲಿ ಉದ್ಯಮ, ಸ್ಟಾರ್ಟ್ ಅಪ್ ಆರಂಭಿಸಲು ಸರ್ಕಾರದಿಂದ ಉತ್ತಮ ಪ್ರೋತ್ಸಾಹ, ಆರ್ಥಿಕ ನೆರವು, ಸಾಲ ಸೌಲಭ್ಯಗಳಿವೆ. ಇದರ ನಡುವೆ ಬ್ಯಾಂಕ್ ಜೊತೆಗೆ ಬಿಸಿನೆಸ್ ಮಾಡುವ ವಿಧಾನ ಹೆಚ್ಚಿನವರಿಗೆ ತಿಳಿದಿಲ್ಲ. ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಬ್ಯಾಂಕ್ ಜೊತೆ ಬಿಸಿನೆಸ್ ಅವಕಾಶ ನೀಡುತ್ತಿದೆ. ಹೌದು, ಎಸ್‌ಬಿಐ ಎಟಿಂ ಫ್ರಾಂಚೈಸಿ ತೆಗೆದುಕೊಂಡು ತಿಂಗಳಿಗೆ 60,000 ರೂಪಾಯಿಯಿಂದ 70,000 ರೂಪಾಯಿ ಆದಾಯ ಗಳಿಸಲು ಸಾಧ್ಯವಿದೆ.

ಎಸ್‌ಬಿಐ ಬ್ಯಾಂಕ್ ಯಾವತ್ತೂ ಎಟಿಎಂ ಮಶೀನ್‌ಗಳನ್ನು ಇನ್‌ಸ್ಟಾಲ್ ಮಾಡುವುದಿಲ್ಲ. ಇದನ್ನು ಇತರ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ.ಕೆಲ ಕಂಪನಿಗಳು ಎಟಿಎಂ ಇನ್‌ಸ್ಟಾಲೇಶನ್ ಫ್ರಾಂಚೈಸಿ ಪಡೆದುಕೊಂಡಿದೆ. ಈ ಕಂಪನಿಗಳು ದೇಶದೆಲ್ಲೆಡೆ ಎಟಿಂ ಕೇಂದ್ರಗಳನ್ನು ಗುರುತಿಸಿ ಎಟಿಎಂ ಮಶೀನ್ ಇನ್‌ಸ್ಟಾಲ್ ಮಾಡುತ್ತದೆ. ಇದರಲ್ಲಿ ಆದಾಯಗಳಿಸುವ ಬಗೆ ಹೇಗೆ ಅನ್ನೋದು ಇಲ್ಲಿದೆ.

ಅತ್ಯಂತ ಶ್ರೀಮಂತ ವ್ಯಕ್ತಿ ಯಾರು? ಮುಕೇಶ್ ಅಂಬಾನಿ, ಅದಾನಿ, ರತನ್ ಟಾಟಾ ಅಲ್ಲ!

ಆಸಕ್ತರು ಹಾಗೂ ಅರ್ಹರು, ಫ್ರಾಂಚೈಸಿ ಅನುಮತಿ ಪಡೆದಿರುವ ಖಾಸಗಿ ಕಂಪನಿಗಳಿಗೆ ಅರ್ಜಿ ಸಲ್ಲಿಸಿ ಎಟಿಎಂ ಮಶೀನ್ ಸ್ಥಾಪಿಸಬಹುದು. ಎಲ್ಲಾ ದಾಖಲೆ ಪರಿಶೀಲಿಸಿದ ಬಳಿಕ ಕಂಪನಿಗಳು ನೀವು ಗುರಿತಿಸಿದ ಜಾಗದಲ್ಲಿ ಎಟಿಂಎ ಮಶಿನ್ ಇನ್‌ಸ್ಟಾಲ್ ಮಾಡಲಿದೆ. ಬಳಿಕ ತಿಂಗಳಿಗೆ 60 ರಿಂದ 70 ಸಾವಿರ ರೂಪಾಯಿ ಆದಾಯ ಗಳಿಸಲು ಸಾಧ್ಯವಿದೆ.

ಬೇಕಾದ ಅರ್ಹತೆ ಹಾಗೂ ಸೌಲಭ್ಯ
ನಿಮ್ಮ ಮನವಿ ಪುರಸ್ಕರಿಸುವಾಗ ಎಟಿಎಂ ಮಶಿನ್ ಇನ್‌ಸ್ಟಾಲ್ ಮಾಡಬೇಕಾದ ಸ್ಥಳ ಎಲ್ಲವನ್ನೂ ಗುರುತಿಸಿ ದಾಖಲೆ ನೀಡಬೇಕು. ಕನಿಷ್ಠ 50 ರಿಂದ 60 ಚದರ ಅಡಿ ಸ್ಥಳದ ಅವಶ್ಯಕತೆ ಇದೆ. ಕಾಂಕ್ರಿಟ್ ರೂಫ್ ಕಡ್ಡಾಯವಾಗಿದೆ. ಶಟರ್ ಡೂರ್, ಸುರಕ್ಷತಾ ಮಾನದಂಡಗಳನ್ನು ಹೊಂದಿರಬೇಕು. ಈ ಕಡ್ಡಡ ಅಥವಾ ಕೇಂದ್ರಕ್ಕೆ 24 ಗಂಟೆ ವಿದ್ಯುತ್ ಸಂಪರ್ಕ ಇರಬೇಕು. 1 ಕಿಲೋವ್ಯಾಟ್ ವಿದ್ಯುತ್ ಸಂಪರ್ಕ ಅನಿವಾರ್ಯವಾಗಿದೆ. ನೀವು ಸ್ಥಾಪಿಸಲು ಹೊರಟಿರುವ ಎಟಿಎಂ ಸೆಂಟರ್, ಮತ್ತೊಂದು ಎಟಿಎಂ ಕೇಂದ್ರದಿಂದ ಕನಿಷ್ಟ 100 ಮೀಟರ್ ದೂರದಲ್ಲಿ ಇರಬೇಕು. ಪ್ರತಿ ದಿನ ಕನಿಷ್ಠ 300 ಟ್ರಾನ್ಸಾಕ್ಷನ್ ಆಗಬೇಕು. ಇನ್ನು ಕಟ್ಟಡ, ಕೇಂದ್ರ, ಸ್ಥಳಗಳಿಗೆ ಎನ್ಒಸಿ ಸರ್ಟಿಫಿಕೇಟ್ ಪಡೆದಿರಬೇಕು.

ಟಾಟಾ ಇಂಡಿಕ್ಯಾಶ್, ಮೂಥೂಟ್ ಎಟಿಎಂ,ಇಂಡಿಯಾ ಒನ್ ಎಟಿಎಂ ಎಸ್‌ಬಿಐ ಎಟಿಎಂ ಇನ್‌ಸ್ಟಾಲ್ ಮಾಡುವ ಗುತ್ತಿಗೆ ಪಡೆದುಕೊಂಡಿದೆ. ಈ ಕಂಪನಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನೀವು ಎಟಿಎಂ ಮಶಿನ್ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಆರಂಭಿಕ 2 ಲಕ್ಷ ರೂಪಾಯಿ ಸೆಕ್ಯೂರಿಟಿ ಡೆಪಾಸಿಟ್(ರೀಫಂಡೇಬಲ್) ಮೊತ್ತ ನೀಡಬೇಕು, ಇದರ ಜೊತೆಗೆ 3 ಲಕ್ಷ ರೂಪಾಯಿ ವರ್ಕಿಂಗ್ ಕ್ಯಾಪಿಟಲ್ ಮೊತ್ತವಾಗಿ ಅಂದರೆ ಒಟ್ಟು 5 ಲಕ್ಷ ರೂಪಾಯಿ ಬಂಡವಾಳದಲ್ಲಿ ಬ್ಯಾಂಕ್ ಜೊತೆ ಬ್ಯೂಸಿನೆಸ್ ಆರಂಬಿಸಲು ಸಾಧ್ಯವಿದೆ.

ಆನಂದ್ ಮಹೀಂದ್ರ ರೋಲ್ ಮಾಡೆಲ್ ಈ ಪುಟಾಣಿ ಕಂದ, ಕಾರಣ ಬಿಚ್ಚಿಟ್ಟ ಉದ್ಯಮಿ!

Latest Videos
Follow Us:
Download App:
  • android
  • ios