ಬೆಂಗಳೂರು: ಸೈಟ್‌ ಖರೀದಿ ನೆಪದಲ್ಲಿ ಎಸ್‌ಬಿಐಗೆ 2.30 ಕೋಟಿ ಪಂಗನಾಮ..!

ಯಲಹಂಕದ ಎಸ್‌ಬಿಐ ಬ್ಯಾಂಕ್‌ ಗೆ ಆರೋಪಿಗಳು ವಂಚಿಸಿದ್ದಾರೆ. ಬ್ಯಾಂಕಿನ ವ್ಯವಸ್ಥಾಪಕ ಟಿ.ಎಂ.ರವಿ ನೀಡಿದ ದೂರಿನ ಮೇರೆಗೆ ಮಲ್ಲತಹಳ್ಳಿಕೆಂಗುಂಟೆಯ ಶಿವಣ್ಣ, ವೀರಭದ್ರಪ್ಪ, ತೆಲಂಗಾಣ ಮೂಲದ ಕೊಲುಪುಲಾ ವಿಜಯ್ , ಹರಿಯಾಣ ಮೂಲದ ವಿಜಯಕುಮಾರ್ ವಿರುದ್ಧ ನಕಲಿ ದಾಖಲೆ ಸೃಷ್ಟಿ, ವಂಚನೆ, ನಂಬಿಕೆ ದ್ರೋಹ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

2.30 crore fraud to sbi in the name of buying site in bengaluru grg

ಬೆಂಗಳೂರು(ಜು.31):  ನಿವೇಶನ ಖರೀದಿ ನೆಪದಲ್ಲಿ ನಕಲಿ ದಾಖಲೆ ಸಲ್ಲಿಸಿ ರಾಷ್ಟ್ರೀಕೃತ ಬ್ಯಾಂಕ್‌ವೊಂದರಿಂದ ಬರೋ ಬ್ಬರಿ ₹2.30 ಕೋಟಿ ಸಾಲ ಪಡೆದು ಮರು ಪಾವತಿಸದೆ ವಂಚನೆ ಮಾಡಿದ ಆರೋಪ ದಡಿ ಸಿಸಿಬಿಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

ಯಲಹಂಕದ ಎಸ್‌ಬಿಐ ಬ್ಯಾಂಕ್‌ ಗೆ ಆರೋಪಿಗಳು ವಂಚಿಸಿದ್ದಾರೆ. ಬ್ಯಾಂಕಿನ ವ್ಯವಸ್ಥಾಪಕ ಟಿ.ಎಂ.ರವಿ ನೀಡಿದ ದೂರಿನ ಮೇರೆಗೆ ಮಲ್ಲತಹಳ್ಳಿಕೆಂಗುಂಟೆಯ ಶಿವಣ್ಣ(43), ವೀರಭದ್ರಪ್ಪ(90), ತೆಲಂಗಾಣ ಮೂಲದ ಕೊಲುಪುಲಾ ವಿಜಯ್ (29), ಹರಿಯಾಣ ಮೂಲದ ವಿಜಯಕುಮಾರ್ (35) ವಿರುದ್ಧ ನಕಲಿ ದಾಖಲೆ ಸೃಷ್ಟಿ, ವಂಚನೆ, ನಂಬಿಕೆ ದ್ರೋಹ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಬೆಂಗಳೂರು: ಮೇಲೆ 500, ಒಳಗೆ ಬಿಳಿಹಾಳೆ ಬಿಟ್ಟು 20 ಲಕ್ಷ ವಂಚನೆ..!

ಏನಿದು ಪ್ರಕರಣ?:

ಆರೋಪಿಗಳಾದ ಕೊಲುಪುಲಾ ವಿಜಯ್ ಮತ್ತು ವಿಜಯ್ ಕುಮಾರ್ ಎಸ್‌ಬಿಐ ಬ್ಯಾಂಕ್ ಲೋನ್ ಏಜೆಂಟ್‌ಗಳಾದ ಪ್ರಮೋದ್ ಸಿಂಗ್ ಮತ್ತು ಮೊಹಮ್ಮದ್ ಸುಹೇಲ್ ಮುಖಾಂತರ ಯಲಹಂಕದ ಎಸ್‌ಬಿಐ ಬ್ಯಾಂಕ್‌ಗೆ ಬಂದಿ ದ್ದಾರೆ. ಶಿವಣ್ಣ ಎಂಬುವವರ ಯಶವಂತಪುರ ಹೋಬಳಿಯ 2 ನಿವೇಶನ ಖರೀದಿಸಲು ಸಾಲ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. 2 ನಿವೇಶನಗಳು ತಂದೆ ವೀರಭದ್ರಪ್ಪ ಅವರಿಂದ ಶಿವಣ್ಣಗೆ ದಾನವಾಗಿ ಬಂದಿರುವುದು ಹಾಗೂ ಆ ನಿವೇಶನಗಳಿಗೆ ಬಿಬಿಎಂಪಿ ಖಾತೆ ಇರುವುದಾಗಿ ಗೊತ್ತಾಗಿದೆ.

₹2.30 ಕೋಟಿ ಸಾಲ ಮಂಜೂರು: ಬಳಿಕ ಬ್ಯಾಂಕ್ ಅಧಿಕಾರಿಗಳು ಒಂದು ನಿವೇಶನಕ್ಕೆ ₹97.40 ಲಕ್ಷ, ಮತ್ತೊಂದು ನಿವೇಶನಕ್ಕೆ 1.33 ಕೋಟಿ ಸೇರಿ ಒಟ್ಟು 2.30 ಕೋಟಿ ಸಾಲ ಮಂಜೂರು ಮಾಡಿದ್ದಾರೆ. ಬಳಿಕ ಕೊಲುಪುಲಾ ವಿಜಯ್ ಮತ್ತು ವಿಜಯ್ ಕುಮಾರ್ ಸಾಲ ಮರುಪಾವತಿಸಿಲ್ಲ. ಬಳಿಕ ಬ್ಯಾಂಕ್‌ನಿಂದ ನೋಟಿಸ್ ಜಾರಿ ಮಾಡಿದ್ದು, ಆ ನೋಟಿಸ್‌ಗಳು ಸ್ವೀಕೃತವಾಗದೆ ವಾಪಾಸ್ ಬಂದಿವೆ. ಈ ವೇಳೆ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದಾಗ, ಆ ನಿವೇಶನಗಳ ಮಾಲೀಕರು ಬೇರೆಯವರು ಎಂಬುದು ಗೊತ್ತಾಗಿದೆ.

Latest Videos
Follow Us:
Download App:
  • android
  • ios