ಪ್ರೀತಿಸಿದಾಕೆಗೆ ಮದುವೆ : ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ 17ರ ತರುಣ

ತಾನು ಪ್ರೀತಿಸಿದ ಹುಡುಗಿಗೆ ಬೇರೊಬ್ಬರೊಂದಿಗೆ ಮದುವೆ ಮಾಡಿದರೆಂದು ದುಃಖ ತಾಳಲಾರದೇ 17ರ ಹರೆಯದ ತರುಣನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಬಿಲ್ವಾರದಲ್ಲಿ ಗುರುವಾರ ನಡೆದಿದೆ.

17 year old rajsthan youth killed self by shooting self in Bhilwara after love failure akb

ಬಿಲ್ವಾರ: ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಜಾರು ಎಂಬ ಹಾಡನ್ನು ನೀವು ಕೇಳಿರಬಹುದು. ಪ್ರೀತಿ ಎಂದರೆ ಹಾಗೆ ಖುಷಿ ನೋವು ಎರಡನ್ನು ಜೊತೆಯಾಗಿ ನೀಡುವ ಮಾಯಾಲೋಕ. ಹೀಗೆ ಈ ಪ್ರೀತಿಗೆ ಬಿದ್ದ ಹರೆಯದ ಹುಡುಗನೋರ್ವ ತನ್ನ ಪ್ರಾಣವನ್ನೇ ಬಲಿ ಕೊಟ್ಟಿದ್ದಾನೆ. ತಾನು ಪ್ರೀತಿಸಿದ ಹುಡುಗಿಗೆ ಬೇರೊಬ್ಬರೊಂದಿಗೆ ಮದುವೆ ಮಾಡಿದರೆಂದು ದುಃಖ ತಾಳಲಾರದೇ 17ರ ಹರೆಯದ ತರುಣನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಬಿಲ್ವಾರದಲ್ಲಿ ಗುರುವಾರ ನಡೆದಿದೆ. ಬಿಲ್ವಾರದ ಮಹಾತ್ಮ ಗಾಂಧಿ ಆಸ್ಪತ್ರೆ ಮುಂದೆಯೇ ಈ ಘಟನೆ ನಡೆದಿದ್ದು, ಕೂಡಲೇ ಆ ದಾರಿಯಲ್ಲಿ ಸಾಗುತ್ತಿದ್ದವರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಆತನನ್ನು ಉದಯ್‌ಪುರದ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ. ಅಲ್ಲದೇ ನಂತರ ಅಲ್ಲಿಗೆ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಕರೆದೊಯ್ಯಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. 

ಆತ ತನ್ನ ತಲೆಗೆ ತಾನೇ ಗನ್‌ನಿಂದ ಗುಂಡು ಹಾರಿಸಿಕೊಂಡಿರುವುದು ಅಲ್ಲೇ ಅಳವಡಿಸಲಾಗಿದೆ ಸಿಸಿ ಕ್ಯಾಮರಾದಲ್ಲಿ(CC camera) ಸೆರೆ ಆಗಿದೆ. ಮೃತ ಯುವ ತರುಣನನ್ನು 17 ವರ್ಷದ ಯಶ್ ವ್ಯಾಸ್ (Yash Vyas) ಎಂದು ಗುರುತಿಸಲಾಗಿದೆ. ಈ ಬಗ್ಗೆ ಬಿಲ್ವಾರದ ಎಸ್‌ಪಿ ಆದರ್ಶ್ ಸಿಧು (Adarsha Sidhu) ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮೃತ ಯಶ್ ವ್ಯಾಸ್ ಹಾಗೂ ವಿವಾಹವಾದ ಹುಡುಗಿ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅಲ್ಲದೇ ಸಾಯುವ ಮೊದಲು ಈತ ತನ್ನ ಸೋಶಿಯಲ್ ಮೀಡಿಯಾ (Social Media) ಖಾತೆಯಲ್ಲಿ ಆಕೆಯ ಮದುವೆಯಿಂದ ತೀವ್ರವಾಗಿ ನೊಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದ ಎನ್ನಲಾಗಿದೆ. ಘಟನಾ ಸ್ಥಳದಿಂದ ಒಂದು ರಿವಾಲ್ವರ್ ಹಾಗೂ ಒಂದು ಸ್ಪಾರ್ಟ್ ಫೋನ್ ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

17 year old rajsthan youth killed self by shooting self in Bhilwara after love failure akb

Crime News: ಪ್ರೀತಿಸಿ ಮದುವೆಯಾದವಳನ್ನೇ ಕೊಂದು ಬಿಟ್ಟನಾ ಪೊಲೀಸ್?

Bengaluru Crime: ನಂಬಿಕೆ ಇಲ್ಲದವನ ಪ್ರೀತಿ ನಂಬಿಕೊಂಡು ಕೊಲೆಯಾದ ನೇಪಾಳಿ ಸುಂದರಿ

ಪ್ರೀತಿ ಉಳಿಸಿಕೊಳ್ಳಲು ಮರ್ಡರ್‌.. ಬಾಯ್‌ಫ್ರೆಂಡ್‌ ಜೊತೆ ಸೇರಿ ಯುವತಿಯ ಕೊಲೆ ಮಾಡಿದ್ಲು ಸುಂದರಿ!

Latest Videos
Follow Us:
Download App:
  • android
  • ios