ಹೆಚ್ಚು ಇಳುವರಿಯ ಪುಸಾ ಭತ್ತ ನಿಷೇಧಿಸಲು ಪಂಜಾಬ್‌ ನಿರ್ಧಾರ

ಹೆಚ್ಚು ನೀರು ಬಳಕೆ ಮಾಡುತ್ತದೆ ಮತ್ತು ಹೆಚ್ಚು ಹುಲ್ಲು ಸಂಗ್ರಹವಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಇಳುವರಿ ನೀಡುವ 'ಪುಸಾ 44' ಭತ್ತದ ತಳಿಯನ್ನು ಮುಂದಿನ ವರ್ಷದಿಂದ ನಿಷೇಧಿಸಲು ಪಂಜಾಬ್‌ ಸರ್ಕಾರ ನಿರ್ಧರಿಸಿದೆ

Punjab farmers condemns govt decision that to ban high yielding Pusa Paddy which Accumulate more water consumption more hay accumulation akb

ಪಟಿಯಾಲಾ: ಹೆಚ್ಚು ನೀರು ಬಳಕೆ ಮಾಡುತ್ತದೆ ಮತ್ತು ಹೆಚ್ಚು ಹುಲ್ಲು ಸಂಗ್ರಹವಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಇಳುವರಿ ನೀಡುವ 'ಪುಸಾ 44' ಭತ್ತದ ತಳಿಯನ್ನು ಮುಂದಿನ ವರ್ಷದಿಂದ ನಿಷೇಧಿಸಲು ಪಂಜಾಬ್‌ ಸರ್ಕಾರ ನಿರ್ಧರಿಸಿದೆ. ಆದರೆ ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.  ಪುಸಾ 44 ಭತ್ತದ ತಳಿ ಇತರ ತಳಿಗಳಿಗೆ ಹೋಲಿಸಿದರೆ ಎಕರೆಗೆ 10 ಕ್ವಿಂಟಾಲ್‌ ಹೆಚ್ಚಿನ ಇಳುವರಿ ಕೊಡುತ್ತದೆ. ಅಲ್ಲದೇ ಮತ್ತಷ್ಟು ತಳಿಗಳಿಗೆ ಹೋಲಿಸಿದರೆ ಇದರ ಇಳುವರಿ ಪ್ರಮಾಣ 40 ಕ್ವಿಂಟಾಲ್‌ವರೆಗೂ ಇರುತ್ತದೆ. ಹೀಗಾಗಿ ಇದರ ನಿಷೇಧಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಈ ತಳಿಯ ಭತ್ತ ಬೆಳೆಯಲು ಹೆಚ್ಚಿನ ನೀರು ಬಳಕೆಯಾಗುತ್ತದೆ. ಅಲ್ಲದೇ ಬೆಳೆಯ ಬಳಿಕ ಉತ್ಪಾದನೆಯಾಗುವ ಹುಲ್ಲಿನ ಪ್ರಮಾಣವೂ ಸಹ ಅಧಿಕವಾಗಿರುತ್ತದೆ ಎಂಬ ಕಾರಣಕ್ಕೆ ಇದನ್ನು ನಿಷೇಧಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಪಂಜಾಬ್‌ ಭಾಗದಲ್ಲಿ ಬೆಳೆ ಬೆಳೆದ ಬಳಿಕ ರೈತರು ಹುಲ್ಲನ್ನು ಸುಟ್ಟು ಹಾಕುವುದರಿಂದ ಇದು ಹೆಚ್ಚಿನ ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಸರ್ಕಾರ ಹೇಳಿದೆ. ಇತರ ಭತ್ತದ ತಳಿಗಳಿಗೆ ಹೋಲಿಸಿದರೆ ಅಧಿಕ ಇಳುವರಿ ನೀಡುವ ಇದನ್ನು ನಿಷೇಧ ಮಾಡಿದರೆ ನಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದೇವೆ. ಒಂದು ವೇಳೆ ಈ ತಳಿಯನ್ನು ನಿಷೇಧಿಸುವುದೇ ಆದರೆ ಉಳಿದ ಭತ್ತದ ತಳಿಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಸರ್ಕಾರದ ನಿರ್ಧಾರದ ವಿರುದ್ಧ ಪಂಜಾಬ್‌ ರೈತರು ಆಕ್ರೋಶ ಹೊರಹಾಕಿದ್ದಾರೆ.

ಪ್ರಣಯ ನಗರಿಗೆ ಹೊಸ ಹಾವಳಿ : ಮೆಟ್ರೋ ಏರ್‌ಪೋರ್ಟ್‌ ಹೊಟೇಲ್‌ ಥಿಯೇಟರ್ ಎಲ್ಲೆಂದರಲ್ಲಿ ತಿಗಣೆಗಳ ದರ್ಬಾರ್‌

Latest Videos
Follow Us:
Download App:
  • android
  • ios