ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರು 16 ವರ್ಷಗಳ ಬಳಿಕ ಬೆಂಗಳೂರಿನ ದೃಷ್ಟಿಹೀನ ಮಕ್ಕಳ ಕೇಂದ್ರಕ್ಕೆ ಮರಳಿ ಭೇಟಿ ನೀಡಿದರು. ಈ ವೇಳೆ ಮಕ್ಕಳು ಪೋಲೆಂಡ್ನ ರಾಷ್ಟ್ರಗೀತೆ ಹಾಡಿದಾಗ ಅವರು ಹಳೆಯ ನೆನಪುಗಳಿಂದ ಭಾವುಕ.. ವಿಡಿಯೋ ವೈರಲ್ ಆಗಿದೆ ಲಿಂಕ್ ಇಲ್ಲಿದೆ.
ಇತ್ತೀಚೆಗೆ ವ್ಯಾಪಾರ ಮತ್ತು ರಕ್ಷಣಾ ವಿಚಾರಗಳ ಸಂಬಂಧ ಚರ್ಚೆಗಳಿಗೆ ಭಾರತಕ್ಕೆ ಆಗಮಿಸಿದ್ದ ಪೊಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಬೆಂಗಳೂರಿಗೂ ಬಂದಿದ್ದರು. ಹದಿನಾರು ವರ್ಷಗಳ ಹಿಂದೆ ಭೇಟಿ ನೀಡಿದ್ದ ಸ್ಥಳಕ್ಕೆ ಮತ್ತೆ ಭೇಟಿ ನೀಡಿದರು. ಈ ವೇಳೆ ಭಾವುಕರಾದ ಹೃದಯಸ್ಪರ್ಶಿ ಘಟನೆ ನಡೆಯಿತು.
ಭಾರತಕ್ಕೆ ಭೇಟಿ ನೀಡಿದ್ದ ವೇಳೆ ತಮಗಾದ ಸಂತೋಷದ ಹೃದಯಸ್ಪರ್ಶಿ ಅನುಭವವನ್ನು ಪೋಲೆಂಡ್ ಪ್ರಧಾನಿ ಎಕ್ಸ್(X) ಪೋಸ್ಟ್ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅವರು ಮೊದಲ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿದ್ದಾಗ, ಅಂದರೆ ಸುಮಾರು 16 ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಬೆಂಗಳೂರಿಗೂ ಬಂದಿದ್ದರು. ಬೆಂಗಳೂರಿನಲ್ಲಿ ದೃಷ್ಟಿಹೀನ ಮಕ್ಕಳ ಕೇಂದ್ರವೊಂದಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಮಕ್ಕಳನ್ನು ಕಂಡು ಕಣ್ಣೀರು ಹಾಕಿ ದುಃಖಿಸಿದ ಬಗ್ಗೆಯೂ ನೆನಪಿಸಿಕೊಂಡಿದ್ದಾರೆ.
16 ವರ್ಷಗಳ ಹಿಂದಿನ ಘಟನೆ ನೆನಪಿಸಿಕೊಂಡ ಪೋಲೆಂಡ್ ಪ್ರಧಾನಿ
ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಪೋಲೆಂಡ್ ಪ್ರಧಾನಿ ಅವರು, '16 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪೋಲಿಷ್ ನಿಯೋಗದೊಂದಿಗೆ ನಾನು ಫ್ರಾನ್ಸಿಸ್ಕನ್ ಸಿಸ್ಟರ್ಸ್(ಕ್ರೈಸ್ತ್ ಸನ್ಯಾಸಿನಿಯರು) ನಡೆಸುತ್ತಿದ್ದ ದೃಷ್ಟಿಹೀನ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಈ ಸನ್ಯಾಸಿನಿಯರಲ್ಲಿ ಪೋಲೆಂಡ್ನವರು ಕೂಡ ಇದ್ದರು. ಅಂದು ಅವರು ದೃಷ್ಟಿಹೀನ ಮಕ್ಕಳು ಪೋಲೆಂಡ್ನ ರಾಷ್ಟ್ರಗೀತೆ ಹಾಡಿದಾಗ ನನಗೆ ಭಾವನೆಗಳನ್ನ ಮರೆಮಾಚಲು ಆಗಲಿಲ್ಲ, ಅಳು ಬಂದುಬಿಡ್ತು ಎಂದು ಎಂದು ಹಳೆಯ ಘಟನೆ ನೆನಪಾಗಿ ಭಾವುಕರಾಗಿ ಬರೆದುಕೊಂಡಿದ್ದಾರೆ.
ಹದಿನಾರು ವರ್ಷಗಳ ಬಳಿಕ ನಾನು ಮತ್ತೆ ಬೆಂಗಳೂರಿಗೆ ಭೇಟಿ ನೀಡಿದ್ದೇನೆ. ಆದರೆ ಆ ನೆನಪು ಇನ್ನು ನನ್ನ ಮನಸಲ್ಲಿ ಹಾಗೆ ಉಳಿದಿದೆ. ಅಂದು ಆ ಮಕ್ಕಳು ಹಾಡಿದ್ದ ಮುಜರೆಕ್ ಡಾಬ್ರೊವ್ಸ್ಕಿಯೊ.. (Mazurek Dąbrowskiego) ಗೀತೆಯ ಸಾಲುಗಳು ಇನ್ನೂ ನೆನಪಿವೆ. ಇಂದು ಕೂಡ ಹಾಡುವಾಗ ನಮ್ಮಿಬ್ಬರ ಕಣ್ಣುಗಳು ತೇವಗೊಂಡವು ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ Mazurek Dąbrowskiego ಈ ಹಾಡು ಪೋಲೆಂಡ್ನ ರಾಷ್ಟ್ರಗೀತೆಯಾಗಿದೆ.
ಗುಲಾಬಿ ಬಣ್ಣದ ಡ್ರೆಸ್ ತೊಟ್ಟಿದ್ದ ಮಕ್ಕಳು:
ನಾನು ಹದಿನಾರು ವರ್ಷಗಳ ಬಳಿಕ ಮತ್ತೆ ಬೆಂಗಳೂರಿನ ಅದೇ ಸ್ಥಳಕ್ಕೆ ಬಂದಾಗ ಪೋಲೆಂಡ್ ಪ್ರಧಾನಿ ಅಚ್ಚರಿಪಟ್ಟರು. ಮಕ್ಕಳು ಗುಲಾಬಿ ಬಣ್ಣದ ಡ್ರೆಸ್ ತೊಟ್ಟು ರಾಷ್ಟ್ರಗೀತೆ ಹಾಡಿದರು. ನಂತರ ಟಸ್ಕ್ ಅವರು ಮಕ್ಕಳಿಗೆ ವಿಶೇಷ ಉಡುಗೊರೆ ನೀಡುತ್ತಾ 'ಈ ಭೇಟಿ ನನ್ನ ರಾಜಕೀಯ ವಿಚಾರಗಳಿಗಿಂತ ಹೆಚ್ಚು ಮಹತ್ವದ್ದಾಗಿದೆ' ಎಂದು ತಮಾಷೆಯಾಗಿ ಹೇಳಿರುವುದು ವಿಡಿಯೋದಲ್ಲಿ ನೋಡಬಹುದು.
2010 ರಲ್ಲಿ ಪತ್ನಿಯೊಂದಿಗೆ ಭೇಟಿ ನೀಡಿದ್ದ ಡೊನಾಲ್ಡ್ ಟಸ್ಕ್
ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ 2010ರಲ್ಲಿ ಮೊದಲ ಬಾರಿಗೆ ಪತ್ನಿಯೊಂದಿಗೆ ಭಾರತಕ್ಕೆ ಆಗಮಿಸಿದ್ದರು ಆ ವೇಳೆ ಬೆಂಗಳೂರಿನಲ್ಲಿ ದೃಷ್ಟಿಹೀನರಿಗಾಗಿಯೇ ಇರುವ ಜ್ಯೋತಿ ಸೇವಾ ವಸತಿ ಶಾಲೆ' ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಇಲ್ಲಿನ ದೃಷ್ಟಿಹೀನ ಮಕ್ಕಳು ಆರರಿಂದ ಹದಿಮೂರು ವರ್ಷದ ಮಕ್ಕಳಾಗಿದ್ದರು.
16 ವರ್ಷದ ಬಳಿಕ ಡೊನಾಲ್ಡ್ ಟಸ್ಕ್ ಇತ್ತೀಚೆಗೆ ಭೇಟಿ
ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರು ಅಕ್ಟೋಬರ್ 21 ರಿಂದ 23 ರವರೆಗೆ ಮೂರು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಿದ್ದರು. ಅಕ್ಟೋಬರ್ 21 ರಂದು ಭಾರತಕ್ಕೆ ಆಗಮಿಸಿದರು. ಮರುದಿನ ಅಂದರೆ ಅಕ್ಟೋಬರ್ 22 ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿ ಹಲವು ವಿಚಾರಗಳ ಕುರಿತು ಚರ್ಚಿಸಿದ್ದರು. ಅನಂತರ ಅಕ್ಟೋಬರ್ 23ರಂದ ಪೋಲೆಂಡ್ಗೆ ವಾಪಸ್ ಆಗುವ ಮುನ್ನ ಬೆಂಗಳೂರಿಗೆ ಭೇಟಿ ನೀಡಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಅದೇ ದಿನ ಪೋಲೆಂಡ್ಗೆ ವಾಪಸ್ ಆದರು.







