Asianet Suvarna News Asianet Suvarna News

ರಬ್ಬರ್‌ ಮ್ಯಾಟ್‌ಗೆ ಬಡಿದ ತಲೆ, ಕಬಡ್ಡಿ ಆಡುವಾಗಲೇ 16 ವರ್ಷದ ಹುಡುಗನ ಸಾವು!

ಕಬಡ್ಡಿ ಆಡುವಾಗಲೇ 16 ವರ್ಷದ ಹುಡುಗ ಹಠಾತ್‌ ಸಾವು ಕಂಡಿದ್ದಾನೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು, ಸಾವಿಗೆ ಸ್ಪಷ್ಟ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕಯೇ ಗೊತ್ತಾಗಲಿದೆ. ಮೂಲಗಳ ಪ್ರಕಾರ, ರಬ್ಬರ್‌ಮ್ಯಾಟ್‌ಗೆ ಜೋರಾಗಿ ತಲೆ ಬಡಿದ ಕಾರಣಕ್ಕೆ ಹುಡುಗ ಸಾವು ಕಂಡಿದ್ದಾನೆ ಎನ್ನಲಾಗಿದೆ.
 

16 year old Boy who played kabaddi suddenly fainted and died in Tamilnadu san
Author
First Published Apr 17, 2023, 5:32 PM IST

ಚೆನ್ನೈ (ಎ.17): ಹಠಾತ್‌ ಸಾವಿನ ಪ್ರಕರಣಗಳು ಇತ್ತೀಚೆಗೆ ಏರಿಕೆಯಾಗುತ್ತದೆ. ಅದರಲ್ಲೂ ಯುವಕರು ಹಾಗೂ ನಡು ವಯಸ್ಸಿನ ವ್ಯಕ್ತಿಗಳೇ ಹಠಾತ್‌ ಆಗಿ ಸಾವು ಕಾಣುತ್ತಿದ್ದಾರೆ. ಭಾನುವಾರ ತಮಿಳುನಾಡಿನ ಕಾರೈಕುಡಿಯಲ್ಲಿ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದ 16 ವರ್ಷದ ಹುಡುಗನೊಬ್ಬ ಹಠಾತ್‌ ಸಾವಿಗೆ ಈಡಾಗಿದ್ದಾರೆ. ಶಿವಗಂಗೈ ಜಿಲ್ಲೆಯ ಕಾರೈಕುಡಿ ಪೆರಿಯಾರ್ ನಗರದ ವೈಥಿಲಿಂಗಪುರಂ ನಿವಾಸಿಯಾಗಿರುವ ಮುರುಗೇಶನ್ ಅವರ ಪುತ್ರ ಸಾವಿಗೀಡಾಗಿರುವ ವ್ಯಕ್ತಿ. ಮುರುಗೇಶನ್‌ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರೆ, ಅವರ 16 ವರ್ಷದ ಪುತ್ರ ಪ್ರತಾಪ್‌, ಸರ್ಕಾರಿ ಐಟಿಐನಲ್ಲಿ 2ನೇ ವರ್ಷದ ಎಸಿ ಮೆಕ್ಯಾನಿಕ್‌ನಲ್ಲಿ ವಿದ್ಐಆಭ್ಯಾಸ ಮಾಡುತ್ತಿದ್ದ. ಪ್ರತಾಪ್‌ಗೆ ಮೊದಲಿನಿಂದಲೂ ಕಬಡ್ಡಿಯಲ್ಲಿ ಬಹಳ ಆಸಕ್ತಿ. ಭಾನುವಾರ ಕಾರೈಕುಡಿಯ ಸಿಂಚೈ ಪ್ರದೇಶದಲ್ಲಿ ದೇವಸ್ಥಾನದ ಹಬ್ಬದ ನಿಮಿತ್ತ ಕಬಡ್ಡಿ ಟೂರ್ನಮೆಂಟ್‌ ಆಯೋಜನೆಯಾಗಿತ್ತು.  ಇದರಲ್ಲಿ ಗ್ರೀಸ್ ಬ್ರದರ್ಸ್ ತಂಡ ಮತ್ತು ಗಣೇಶಪುರಂ ಯೋಗ ಮುನೀಶ್ವರರ ತಂಡ ಮುಖಾಮುಖಿಯಾಗಿದ್ದವು. ಎದುರಾಳಿ ತಂಡದ ಆಟಗಾರರು ಪ್ರತಾಪ್‌ನನ್ನು ಹಿಡಿಯಲು ಪ್ರಯತ್ನ ಮಾಡುತ್ತಿದ್ದಾಗ, ಪ್ರತಾಪ್‌ನ ತಲೆ ರಬ್ಬರ್‌ ಮ್ಯಾಟ್‌ಗೆ ಬಡಿದಿದೆ. ಇದರ ಬೆನ್ನಲ್ಲಿಯೇ ಆತ ಹಠಾತ್‌ ಸಾವು ಕಂಡಿದ್ದಾನೆ ಎಂದು ವರದಿಯಾಗಿದೆ.

ರಬ್ಬರ್‌ ಮ್ಯಾಟ್‌ ತಲೆಗೆ ಬಡಿದ ಬಳಿಕ ಪ್ರತಾಪ್‌ ಆ ಸ್ಥಳದಿಂದ ಎದ್ದಿದ್ದಾನೆ. ಎದ್ದು ಬರುವ ವೇಳೆಗೆ ಹಠಾಕ್‌ ಆಗಿ ಕುಸಿದು ಬಿದ್ದಿದ್ದಾರೆ. ಇದರಿಂದ ಗಾಬರಿಗೊಂಡ ಆಟಗಾರರು ಹಾಗೂ ಪಂದ್ಯ ವೀಕ್ಷಿಸುತ್ತಿದ್ದ ಜನರು ಪ್ರತಾಪ್‌ನ್ನು ಎತ್ತಿಕೊಂಡುಮೇಲೆತ್ತಿ ಕಾರೈಕುಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರತಾಪ್ ನನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಚಿಕ್ಕೋಡಿ: ಬಸ್‌ ಸ್ಟೇರಿಂಗ್‌ ಮೇಲೆಯೇ ಹೃದಯಾಘಾತ, ಚಾಲಕ ಸಾವು

ಇದಾದ ಬಳಿಕ ಪ್ರತಾಪ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೆ ಘಟನೆಯ ಕುರಿತು ಕಾರೈಕುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಅವರ ಸಾವಿಗೆ ಕಾರಣ ತಿಳಿಯಲಿದೆ. ಕಬಡ್ಡಿ ಪಂದ್ಯಗಳಲ್ಲಿ ಆಡುವಾಗ ಯುವಕರು ಇತ್ತೀಚೆಗೆ ಪ್ರಾಣ ಕಳೆದುಕೊಂಡು ಕೆಲವು ಘಟನೆಗಳಲ್ಲಿ ಇದೂ ಕೂಡ ಒಂದಾಗಿದೆ.

Bengaluru: ಮೇಲ್ಸೇತುವೆಯಿಂದ ಬಿದ್ದು ಆಟೋ ಚಾಲಕ ಸಾವು: ಹೃದಯಾಘಾತ ಶಂಕೆ

Follow Us:
Download App:
  • android
  • ios