* ಒಂಭತ್ತು ರಾಷ್ಟ್ರಗಳ ಬೆನ್ನಲ್ಲೇ ಸ್ವದೇಶೀ ಕೋವಿಶೀಲ್ಡ್‌ ಲಸಿಕೆಗೆ ಮಾನ್ಯತೆ ಕೊಟ್ಟ ಮತ್ತೊಂದು ರಾಷ್ಟ್ರ* ಕೋವಿಶೀಲ್ಡ್‌ಗೆ ಮಾನ್ಯತೆ ಕೊಟ್ಟ ನೆದರ್‌ಲ್ಯಾಂಡ್!* ಸ್ವದೇಶಿ ಕೋವಿಶೀಲ್ಡ್‌ ಲಸಿಕೆಗೆ 10 ದೇಶಗಳಿಂದ ಮಾನ್ಯತೆ* ಭಾರತದಲ್ಲಿ ಲಸಿಕೆ ಪಡೆದವರ ಸರಾಗ ಪ್ರಯಾಣಕ್ಕೆ ಸಮ್ಮತಿ

ಆಮ್ಸ್ಟರ್‌ಡ್ಯಾಮ್(ಜೂ.02): ಕೊರೋನಾ ವಿರುದ್ಧದ ಹೋರಾಟದಲ್ಲಿ ನೆದರ್‌ಲ್ಯಾಂಡ್‌ ಮಹತ್ವದ ಹೆಜ್ಜೆ ಇರಿಸಿದೆ. COVID-19 ವಿರುದ್ಧದ ವ್ಯಾಕ್ಸಿನೇಷನ್‌ನ ವ್ಯಾಲಿಡ್‌ ಪ್ರೂಫ್‌ ಆಗಿ ಕೋವಿಶೀಲ್ಡ್‌ಗೆ ನೆದರ್‌ಲ್ಯಾಂಡ್‌ ಮಾನ್ಯತೆ ನೀಡಿದೆ. ಈ ಹಿಂದೆ ನೆಡದರ್‌ಲ್ಯಾಂಡ್‌ ಆಸ್ಟ್ರಾಜೆನಿಕಾದ ಲಸಿಕೆ ಹಣದ ಪೋಲು ಎಂದು ಹೇಳಿ ನಿಲ್ಲಿಸಿತ್ತು ಎಂಬುವುದು ಉಲ್ಲೇಖನೀಯ. ಸದ್ಯ ನೆದರ್‌ಲ್ಯಾಂಡ್‌ ಈ ನಿರ್ಧಾರದಿಂದ ಯೂರೋಪ್‌ನ ಹತ್ತು ರಾ‍ಷ್ಟ್ರಗಳಲ್ಲಿ ಭಾರತದ ಸ್ವದೇಶೀ ಲಸಿಕೆ ಕೋವಿಶೀಲ್ಡ್‌ ಮಾನ್ಯತೆ ಪಡೆದಂತಾಗಿದೆ. 

ಇನ್ನು ಯಾವೆಲ್ಲಾ ಭಾರತೀಯರಿಗೆ ಕೋವಿಶೀಲ್ಡ್‌ನ ಎರಡೂ ಡೋಸ್‌ ಸಿಕ್ಕಿದೆ ಅವರೆಲ್ಲರೂ ಯೂರೋಪ್‌ನ ಒಂಭತ್ತು ರಾಷ್ಟ್ರಗಳಿಗೆ ಪ್ರಯಾಣಿಸಬಹುದು. ಹೌದು ಜರ್ಮನಿ, ಸ್ಲೋವೆನಿಯಾ, ಆಸ್ಟ್ರಿಯಾ, ಗ್ರೀಸ್, ಐರ್ಲೆಂಡ್, ಇಸ್ತೋನಿಯಾ ಹಾಗೂ ಸ್ವಿಡ್ಜರ್ಲೆಂಡ್‌ ಕೋವಿಶೀಲ್ಡ್‌ಗೆ ಅನುಮತಿ ನೀಡಿವೆ.

ಕೋವಿಶೀಲ್ಡ್ ಲಸಿಕೆಗೆ ಅನುಮತಿ; 9 ಯುರೋಪಿಯನ್ ರಾಷ್ಟ್ರಗಳ ರಾಷ್ಟ್ರೀಯ ಪ್ರಯಾಣ ಪಟ್ಟಿಗೆ ಸೇರ್ಪಡೆ!

ಭಾರತದ ಬೆದರಿಕೆಗೆ ಮಣಿದ ಯುರೋಪ್‌

ಐರೋಪ್ಯ ಒಕ್ಕೂಟದಲ್ಲಿ 26 ದೇಶಗಳು ಇವೆ. ಅಲ್ಲಿನ ಐರೋಪ್ಯ ವೈದ್ಯಕೀಯ ಸಂಸ್ಥೆ (ಇಎಂಎ) ವಿಶ್ವದ 4 ಕೋವಿಡ್‌ ಲಸಿಕೆಗಳಿಗೆ ಮಾತ್ರ ಮಾನ್ಯತೆ ನೀಡಿತ್ತು. ಅದರಲ್ಲಿ ಭಾರತದ ಕೋವಿಶೀಲ್ಡ್‌ ಆಗಲಿ, ಕೋವ್ಯಾಕ್ಸಿನ್‌ ಆಗಲಿ ಇರಲಿಲ್ಲ. ಬ್ರಿಟನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಕಂಪನಿ ಅಭಿವೃದ್ಧಿಪಡಿಸಿರುವ, ಬ್ರಿಟನ್‌ ಸೇರಿ ಹಲವು ದೇಶಗಳಲ್ಲಿ ವಿತರಿಸಲಾಗುತ್ತಿರುವ ಲಸಿಕೆಗೆ ಮಾನ್ಯತೆ ಇತ್ತು. ಆದರೆ ಭಾರತದಲ್ಲಿ ತಯಾರಾದ, ಕೋವಿಶೀಲ್ಡ್‌ ಎಂದು ಕರೆಯಲ್ಪಡುವ ಲಸಿಕೆಗೆ ಮಾನ್ಯತೆ ಇರಲಿಲ್ಲ. ಹೀಗಾಗಿ ಭಾರತದ ಲಸಿಕೆ ಪ್ರಮಾಣಪತ್ರವನ್ನು ಆ 26 ದೇಶಗಳು ಪರಿಗಣಿಸುವಂತಿರಲಿಲ್ಲ.

ಇದರಿಂದ ಕ್ರುದ್ಧಗೊಂಡ ಭಾರತ, ಭಾರತೀಯ ಲಸಿಕೆಗಳಿಗೆ ಮಾನ್ಯತೆ ನೀಡದಿದ್ದರೆ ಐರೋಪ್ಯ ಒಕ್ಕೂಟದ ಪ್ರಜೆಗಳು ಭಾರತಕ್ಕೆ ಬಂದರೆ ಕ್ವಾರಂಟೈನ್‌ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಐರೋಪ್ಯ ಒಕ್ಕೂಟ ಈ ವಿಚಾರದಲ್ಲಿ ನಿರ್ಧಾರಕ್ಕೆ ಬರುವ ಮುನ್ನವೇ ಆ ಒಕ್ಕೂಟದ ಹಾಗೂ ಅದರಿಂದ ಹೊರಗಿರುವ ಯುರೋಪ್‌ನ 9 ದೇಶಗಳು ಭಾರತದ ಲಸಿಕೆಗೆ ಮಾನ್ಯತೆ ನೀಡಿವೆ. ಸ್ವಿಜರ್ಲೆಂಡ್‌ ಹಾಗೂ ಐಸ್‌ಲೆಂಡ್‌ ಐರೋಪ್ಯ ಒಕ್ಕೂಟದಲ್ಲಿಲ್ಲ. ಈಸ್ಟೋನಿಯಾ ದೇಶ ಭಾರತದ ಕೋವ್ಯಾಕ್ಸಿನ್‌ಗೂ ಅನುಮತಿ ನೀಡಿದೆ.