ನವದೆಹಲಿ(ಜೂ.08): ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾಡಿದ ಭಾಷಣದ ವೇಳೆ 18 ರಿಂದ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದರು. ಈ ಘೋಷಣೆ ಮಾಡಿದ ಮರು ದಿನವೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 44 ಕೋಟಿ ಲಸಿಕೆಗೆ ಕೇಂದ್ರ ಆರ್ಡರ್ ಮಾಡಿದೆ.

ಎಲ್ಲರಿಗೂ ಉಚಿತ ವ್ಯಾಕ್ಸಿನ್, ದೀಪಾವಳಿ ವರೆಗೆ ಉಚಿತ ರೇಶನ್; ಪ್ರಧಾನಿ ಮೋದಿ ಘೋಷಣೆ!.

24 ಕೋಟಿ ಕೋವಿಶೀಲ್ಡ್ ಲಸಿಕೆ ಹಾಗೂ 19 ಕೋಟಿ ಕೋವಾಕ್ಸಿನ್ ಲಸಿಕೆಗೆ ಸೇರಿದಂತೆ ಒಟ್ಟು44 ಕೋಟಿ ಲಸಿಕೆಗೆ ಕೇಂದ್ರ ಸರ್ಕಾರ ಆರ್ಡರ್ ಮಾಡಿದೆ. ಜೂನ್ 21 ರಿಂದ ರಾಜ್ಯಗಳಲ್ಲಿ ಯಾವುದೇ ಲಸಿಕೆ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳಲು ಕೇಂದ್ರ ಮುಂದಾಗಿದೆ.

ಕೇಂದ್ರ ಆರೋಗ್ಯ ಇಲಾಖೆ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪೌಲ್ ಲಸಿಕೆ ಆರ್ಡರ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ದೇಶದ ಪ್ರಮುಖ ಎರಡು ಲಸಿಕೆ ಜೊತೆಗೆ ಸೆಪ್ಟೆಂಬರ್ ತಿಂಗಳಲ್ಲಿ ಲಭ್ಯವಾಗಲಿರುವ ಬಯೋಲಾಜಿಕಲ್ ಲಸಿಕೆಗೂ ಆರ್ಡರ್ ಮಾಡಿದೆ. 30 ಕೋಟಿ ಬಯೋಲಾಜಿಕಲ್ ಲಸಿಕೆ ಆರ್ಡರ್ ಮಾಡಲಾಗಿದೆ ಎಂದು ಪೌಲ್ ಹೇಳಿದ್ದಾರೆ.

ಉಚಿತ ಲಸಿಕೆಗೆ 50,000 ಕೋಟಿ ರೂಪಾಯಿ ವ್ಯಯಿಸಲಿದೆ ಕೇಂದ್ರ!

ಶೀಘ್ರದಲ್ಲೇ ಲಸಿಕೆ ಪೂರೈಕೆ ಮಾಡುವುದಾಗಿ  ಲಸಿಕೆ ಉತ್ಪಾದಕ ಸಂಸ್ಥೆಗಳು ಭರವಸೆ ನೀಡಿದೆ.  ರಾಜ್ಯ ಸರ್ಕಾರಗಳು ಲಸಿಕೆ ಖರೀದಿ ಮಾಡುವ ಪದ್ಧತಿಯನ್ನು ರದ್ದು ಮಾಡಿ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಂಡಿದೆ.