Asianet Suvarna News Asianet Suvarna News

15 ವರ್ಷ ಹಳೆಯದಾದ ಸರ್ಕಾರಿ ವಾಹನ ಗುಜರಿಗೆ : ಯೋಜನೆ ಜಾರಿಗೆ ಕೇಂದ್ರ ಸಚಿವ ಗಡ್ಕರಿ ಸಹಿ

15 ವರ್ಷ ಹಳೆಯ ಸರ್ಕಾರಿ ವಾಹನ ಗುಜರಿಗೆ ಹಾಕಲಾಗುತ್ತದೆ. ಈ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಅಂಕಿತ ಹಾಕಿದೆ ಎಂದು ಕೇಂದ್ರ ಸಚಿವ ಗಡ್ಕರಿ ಘೋಷಣೆ ಮಾಡಿದ್ದಾರೆ. ರಾಜ್ಯಗಳಿಗೂ ಈ ಯೋಜನೆ ರವಾನೆ ಮಾಡಲಾಗಿದೆ ಎಂದೂ ಅವರು ಹೇಳಿದರು.

15 year old government vehicles will be scrapped nitin gadkari ash
Author
First Published Nov 26, 2022, 10:29 AM IST

ನಾಗಪುರ: ಪರಿಸರ ಮಾಲಿನ್ಯಕ್ಕೆ (Environmental Pollution) ಕಾರಣವಾಗುತ್ತಿರುವ 15 ವರ್ಷಗಳಷ್ಟು ಹಳೆಯದಾದ ಭಾರತ ಸರ್ಕಾರದ (Indian Government) ಎಲ್ಲಾ ವಾಹನಗಳನ್ನೂ (Vehicles) ಗುಜರಿಗೆ (Scrap) ಹಾಕುವ ಯೋಜನೆಗೆ ಕೇಂದ್ರ ಸರ್ಕಾರ (Central Government) ಚಾಲನೆ ನೀಡಿದೆ. ಈ ಕುರಿತ ಕಡತಕ್ಕೆ ಗುರುವಾರವಷ್ಟೇ ತಾವು ಸಹಿ ಹಾಕಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ (Central Road Transport and Highways Minister) ನಿತಿನ್‌ ಗಡ್ಕರಿ (Nitin Gadkari) ಘೋಷಿಸಿದ್ದಾರೆ.

ಈ ಕುರಿತು ಶುಕ್ರವಾರ ಇಲ್ಲಿ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಗಡ್ಕರಿ, ‘ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮಾರ್ಗದರ್ಶನದಂತೆ, ಭಾರತದ ಸರ್ಕಾರ ಬಳಸುತ್ತಿರುವ 15 ವರ್ಷಗಳಷ್ಟು ಹಳೆಯದಾದ ಎಲ್ಲಾ ಸರ್ಕಾರಿಗಳ ವಾಹನಗಳನ್ನೂ ಗುಜರಿಗೆ ಹಾಕುವ ಯೋಜನೆಯ ಕಡತಕ್ಕೆ ನಾನು ಗುರು​ವಾರ ಸಹಿ ಹಾಕಿದ್ದೇನೆ. ಜೊತೆಗೆ ಕೇಂದ್ರ ಸರ್ಕಾರದ ಈ ನೀತಿಯನ್ನು ನಾನು ರಾಜ್ಯಗಳಿಗೂ ಕಳುಹಿಸಿಕೊಟ್ಟಿದ್ದೇನೆ. ಅವು ಕೂಡಾ ಇದನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಇದನ್ನು ಓದಿ: Vehicle Scrap Policy ಹಳೇ ವಾಹನ ಮಾಲೀಕರು ಪ್ರತಿ ವರ್ಷ ಮಾಡಬೇಕು FC,ಕಟ್ಟಬೇಕು ಗ್ರೀನ್ ಟ್ಯಾಕ್ಸ್, ಇದ್ಕಿಂತ ಹೊಸ ವಾಹನವೇ ಲೇಸು

20 ವರ್ಷ ಪೂರೈಸಿದ ಖಾಸಗಿ ವಾಹನಗಳನ್ನೂ ಕಡ್ಡಾಯ ಗುಜರಿಗೆ ಹಾಕುವ ಪ್ರಸ್ತಾಪ ಕೂಡಾ ಕೇಂದ್ರ ಸರ್ಕಾರದ ಮುಂದಿದೆ. ಆದರೆ ಅದರ ಜಾರಿಗೆ ಇನ್ನೂ ನಿರ್ದಿಷ್ಟ ಕಾಲಮಿತಿ ಜಾರಿಯಾಗಿಲ್ಲ. ಹೀಗೆ ಅವಧಿ ಮೀರಿದ ಸರ್ಕಾರಿ ಮತ್ತು ಖಾಸಗಿ ವಾಹನಗಳ ನೋಂದಣಿ ಪ್ರಮಾಣ ಪತ್ರ ನವೀಕರಣ ಶುಲ್ಕವು 8 ಪಟ್ಟು ಹೆಚ್ಚಾಗಲಿದೆ, ನವೀಕರಣ ವಿಳಂಬವಾದರೆ ಪ್ರತಿ ತಿಂಗಳೂ ದಂಡ ವಿಧಿಸುವುದು ಸೇರಿದಂತೆ ಹಲವು ಕಠಿಣ ನಿಯಮಗಳು ಅನ್ವಯವಾಗಲಿದೆ.

ಗುಜರಿಗೆ ಏಕೆ?:
ಹೊಸ ವಾಹನಗಳಿಗೆ ಹೋಲಿಸಿದರೆ ಹಳೆಯ ವಾಹನಗಳು ಶೇ.10-12ರಷ್ಟು ಹೆಚ್ಚು ವಾಯು ಮಾಲಿನ್ಯ ಉಂಟು ಮಾಡುತ್ತವೆ. ಇವುಗಳನ್ನು ನಿಷೇಧಿಸುವ ಮೂಲಕ ಮಾಲಿನ್ಯ ತಡೆಯುವುದರ ಜೊತೆಗೆ, ಇಂಧನ ವೆಚ್ಚ ಉಳಿಸಬಹುದು. ಹಳೆಯ ವಾಹನಗಳ ಸೂಕ್ತ ನಿರ್ವಹಣೆ ಯೋಜನೆ ಜಾರಿಯಾದರೆ, ಅದರಲ್ಲಿ ಅಂದಾಜು 10,000 ಕೋಟಿ ರೂ. ಹೊಸ ಬಂಡವಾಳ ಹೂಡಿಕೆಯಾಗುತ್ತದೆ, 5 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರ ಇದೆ.

ಇದನ್ನೂ ಓದಿ: Vehicle Scrapping Centre: ದೇಶದ ಮೊದಲ ಸುಸಜ್ಜಿತ ವಾಹನ ಗುಜರಿ ಘಟಕಕ್ಕೆ ಚಾಲನೆ!

ಕರ್ನಾಟಕ ನಂ.1:
ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು ಒಟ್ಟಾಗಿ ಸೇರಿಸಿದರೆ 15 ವರ್ಷಕ್ಕಿಂತ ಹೆಚ್ಚು ಅವಧಿ ಪೂರೈಸಿರುವ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನದಲ್ಲಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಸಂಸತ್ತಿಗೆ ಸಲ್ಲಿಸಿದ ವರದಿ ಅನ್ವಯ ಕರ್ನಾಟಕದಲ್ಲಿ 15 ವರ್ಷ ಪೂರೈಸಿದ 70 ಲಕ್ಷ ವಾಹನಗಳಿಗೆ. ನಂತರದ ಸ್ಥಾನಗಳಲ್ಲಿ ಉತ್ತರಪ್ರದೇಶ (56 ಲಕ್ಷ), ದೆಹಲಿ (50) ಇವೆ.

ಇದನ್ನೂ ಓದಿ: ವಾಹನ ಒಳ್ಳೆ ಕಂಡೀಶನ್‌ನಲ್ಲಿದ್ರೂ ಗುಜರಿಗೆ ಹಾಕ್ಬೇಕಾ? ನಿಮ್ಮೆಲ್ಲರ ಪ್ರಶ್ನೆಗೆ ಉತ್ತರ

Follow Us:
Download App:
  • android
  • ios