Asianet Suvarna News Asianet Suvarna News

ರೇಪ್ ಮಾಡಿದ್ದಲ್ಲದೇ ವೀಡಿಯೋ ಮಾಡಿ ಬ್ಲಾಕ್‌ಮೇಲ್: 50ರ ಸಲಿಂಗಕಾಮಿ ಕತೆ ಮುಗಿಸಿದ 15ರ ಬಾಲಕ

ಇವತ್ತಿನ ಕಾಲದಲ್ಲಿ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಕೂಡ ಸುರಕ್ಷಿತ ಅಲ್ಲ ನೋಡಿ.. ನಾವು ಈಗ ಹೇಳ ಹೊರಟಿರುವ ಘಟನೆಯೇ ಇದಕ್ಕೆ ಸಾಕ್ಷಿ.  

15 year old boy killed gay person who not only raped him but also blackmailed him by making a rape video akb
Author
First Published May 26, 2024, 11:53 AM IST

ಮುಜಾಫರ್‌ನಗರ: ಇವತ್ತಿನ ಕಾಲದಲ್ಲಿ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಕೂಡ ಸುರಕ್ಷಿತ ಅಲ್ಲ ನೋಡಿ.. ನಾವು ಈಗ ಹೇಳ ಹೊರಟಿರುವ ಘಟನೆಯೇ ಇದಕ್ಕೆ ಸಾಕ್ಷಿ.  ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ 15 ವರ್ಷದ ಬಾಲಕನೋರ್ವನ ಮೇಲೆ 50 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ಬರೀ ಇಷ್ಟೇ ಅಲ್ಲ ಅದನ್ನು ವೀಡಿಯೋ ಮಾಡಿ ಬಾಲಕನಿಗೆ ದಿನವೂ ಬ್ಲಾಕ್‌ಮೇಲ್ ಮಾಡಲು ಶುರು ಮಾಡಿ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ. 50ರ ಸಲಿಂಗಕಾಮಿಯ ಕಿರುಕುಳ ದಿನವೂ ಮುಂದುವರೆದಾಗ ತಾಳ್ಮೆಗೆಟ್ಟ ಬಾಲಕ ಆ ಪಾಪಿಯ ಕತೆ ಮುಗಿಸಿಬಿಟ್ಟಿದ್ದಾನೆ. ವ್ಯಕ್ತಿಯ ಕೊಲೆ ಮಾಡಿದ ಕಾರಣಕ್ಕೆ ಈಗ ಪೊಲೀಸರು ಬಾಲಕನನ್ನು ಬಂಧಿಸಿ ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದಾರೆ. ಮುಜಾಫರ್‌ನಗರದ ಗ್ರಾಮೊಂದರಲ್ಲಿ ಈ ಘಟನೆ ನಡೆದಿದೆ. 

50ರ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಕುಟುಂಬ ಕೊಲೆಪ್ರಕರಣ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಅಪ್ರಾಪ್ತ ಬಾಲಕನನ್ನು ಶನಿವಾರ ಬಂಧಿಸಿದ್ದಾರೆ. ವಾರದ ಹಿಂದೆ ಮೃತ ವ್ಯಕ್ತಿ ಈ ಅಪ್ರಾಪ್ತನ ಜೊತೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರವೆಸಗಿದ್ದ. ಜೊತೆಗೆ ಈ ಅಶ್ಲೀಲ ವೀಡಿಯೋ ಇಟ್ಟುಕೊಂಡು ನಿರಂತರ ಬ್ಲಾಕ್‌ಮೇಲ್ ಶುರು ಮಾಡಿದ್ದ. 

ಸಲಿಂಗಕಾಮಿ ಸ್ನೇಹಿತೆ ಜೊತೆ ತನ್ನ ಸಲ್ಲಾಪ ನೋಡಿದ ಮಗನನ್ನೇ ಹತ್ಯೆ ಮಾಡಿದ ತಾಯಿ

ಹಾಗೆಯೇ ಕಳೆದ ಸೋಮವಾರವು ಕೂಡ 50ರ ಸಲಿಂಗಕಾಮಿ ಬಾಲಕನನ್ನು ಮನೆಗೆ ಕರೆದಿದ್ದಾನೆ. ಮನೆಗೆ ಬಾರದೇ ಇದ್ದರೆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ತಾಳ್ಮೆ ಕಳೆದುಕೊಂಡ ಬಾಲಕ ವ್ಯಕ್ತಿಯ ಮನೆಗೆ ಹೋಗುವಾಗಲೇ ತೀಕ್ಷ್ಣವಾದ ಆಯುಧವನ್ನು ತೆಗೆದುಕೊಂಡು ಹೋಗಿದ್ದಾನೆ. ಬಳಿಕ ವ್ಯಕ್ತಿಯ ತಲೆಗೆ ಹಾಗೂ ಕತ್ತಿಗೆ ಬೀಸಿ ಹೊಡೆದಿದ್ದಾನೆ. ಇದರಿಂದ ಆತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ ಎಂದು ಮುಜಾಫರ್‌ನಗರ ಗ್ರಾಮಾಂತರದ ಪೊಲೀಸ್ ಸೂಪರಿಂಟೆಂಡೆಂಟ್ ಆದಿತ್ಯ ಬನ್ಸಲ್ ಹೇಳಿದ್ದಾರೆ. 

ಸಲಿಂಗಕಾಮಿ ಸ್ನೇಹಿತನಿಂದಲೇ ಲೈಂಗಿಕ ದೌರ್ಜನ್ಯವೆಸಗಿ 16 ವರ್ಷದ ಕಾಲೇಜು ಹುಡುಗನ ಹತ್ಯೆ

Latest Videos
Follow Us:
Download App:
  • android
  • ios