ತಂಜಾವೂರು ಮಹಿಳಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಈ ಕುರಿತಾಗಿ ಮಾತನಾಡಿದ್ದು, ಏಪ್ರಿಲ್ 16 ರಂದು ಬಾಲಕಿ ಹೊಟ್ಟೆನೋವಿನಿಂದ ಬಳಲಿದ್ದಳು ಈ ವೇಳೆ ಆಕೆಯ ಪೋಷಕರು ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಪಾಸಣೆ ನಡೆಸಿದಾಗ ಆಕೆ ಒಂಬತ್ತು ತಿಂಗಳ ಗರ್ಭಿಣಿ ಎನ್ನುವುದು ಗೊತ್ತಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ತಂಜಾವೂರು (ಏ. 22): 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿ ಮಾಡಿದ ಆರೋಪದಲ್ಲಿ 12 ವರ್ಷದ ಬಾಲಕನನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ತಂಜಾವೂರು (Thanjavur) ಅಖಿಲ ಮಹಿಳಾ ಪೊಲೀಸ್ ಪಡೆ (All-Women Police Force) ಬಂಧಿಸಿದೆ.
ಈ ಕುರಿತಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಹುಡುಗಿ ಏಪ್ರಿಲ್ 16 ರಂದು ಹೊಟ್ಟೆ ನೋವಿನಿಂದ ದೂರು ನೀಡಿದ್ದಳು ಮತ್ತು ಆಕೆಯ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಪಾಸಣೆ ನಡೆಸಿದಾಗ ಆಕೆ ಒಂಬತ್ತು ತಿಂಗಳ ಗರ್ಭಿಣಿ ಎಂದು ವೈದ್ಯರು ಕಂಡುಕೊಂಡಿದ್ದಲ್ಲದೆ, ನಂತರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದರು.
"17 ವರ್ಷದ ಹುಡುಗಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಏಪ್ರಿಲ್ 18 ರಂದು ನಾವು ಆಸ್ಪತ್ರೆಯಿಂದ ಕರೆ ಸ್ವೀಕರಿಸಿದ್ದೆವು' ಎಂದು ಕಚೇರಿ ತಿಳಿಸಿದೆ. ಆದರೆ ಸಂತ್ರಸ್ತೆ ಅಪ್ರಾಪ್ತ ಬಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದಾಳೆ. ಬಾಲಕಿಯನ್ನು ಕೌನ್ಸೆಲಿಂಗ್‌ಗೆ ಕರೆದೊಯ್ದು ಸಾಕಷ್ಟು ಮನವರಿಕೆ ಮಾಡಿದ ನಂತರವೇ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಹುಡುಗಿ ತಾನು ಹುಡುಗನೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿರುವುದಾಗಿ ಮತ್ತು ಅವನು ಗರ್ಭಧಾರಣೆಗೆ ಕಾರಣ ಎಂದು ಬಹಿರಂಗಪಡಿಸಿದಳು. ಬಳಿಕ ಬಾಲಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ (POCSO Act ) ಪ್ರಕರಣ ದಾಖಲಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
“ಹುಡುಗಿಯ ಗರ್ಭಕ್ಕೆ ಈ ಹುಡುಗನೇ ಕಾರಣನೇ ಎಂಬ ಅನುಮಾನ ನಮಗಿದೆ. ಅವನಿಗೆ 15 ವರ್ಷ ಎಂದು ಆಕೆ ನಮಗೆ ಹೇಳಿದ್ದಳು. ಆದರೆ ನಾವು ಅವರ ಪೋಷಕರನ್ನು ಕೇಳಿದಾಗ, ಅವರು ಅವನಿಗೆ 12 ವರ್ಷ ಎಂದು ಅವರು ಹೇಳಿದರು. ವಯಸ್ಸಿನ ಬಗ್ಗೆ ಖಚಿತಪಡಿಸಿಕೊಳ್ಳಲು ನಾವು ಶಾಲೆಯಿಂದ ಅವನ ದಾಖಲೆಗಳನ್ನು ಹುಡುಕಿದ್ದೇವೆ, ಆದರೆ, ಅವರ ಬಳಿಯೂ ಯಾವುದೇ ದಾಖಲೆ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಬಾಲಕನ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿದ್ದಲ್ಲದೆ, ಬೇರೆ ಯಾರಾದರೂ ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪೊಲೀಸರನ್ನು ಪ್ರಶ್ನೆ ಮಾಡಿದ್ದಾರೆ. ಹುಡುಗನ ವಯಸ್ಸನ್ನು ದೃಢೀಕರಿಸಲು ಡಿಎನ್‌ಎ ಪರೀಕ್ಷೆ ಸೇರಿದಂತೆ ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಹುಡುಗನ ವಯಸ್ಸನ್ನು ಖಚಿತಪಡಿಸಿಕೊಳ್ಳಲು ನಾವು ನಿರ್ಧರಿಸಿದ್ದೇವೆ ಮತ್ತು ಅವನು ಮಗುವಿನ ತಂದೆಯೇ ಅಥವಾ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
13 ವರ್ಷದ ಬಾಲಕಿ ಮೇಲೆ 80 ಜನರಿಂದ ಲೈಂಗಿಕ ದೌರ್ಜನ್ಯ
12 ವರ್ಷದ ಬಾಲಕನಮೇಲೆ ಪೋಕ್ಸೊ ಕಾಯಿದೆ ಸೆಕ್ಷನ್ 5 (1) ಮತ್ತು 5 (ಜೆ) (ii) ಅನ್ನು ಸೆಕ್ಷನ್ 6 ರ ಅಡಿಯಲ್ಲಿ ಬಂಧಿಸಲಾಗಿದೆ. ಪೊಲೀಸರು ಬಾಲಕನನ್ನು ತಂಜಾವೂರಿನ ಬಾಲಾಪರಾಧಿಗೃಹಕ್ಕೆ ಕಳುಹಿಸಿದ್ದಾರೆ. "ವೈಜ್ಞಾನಿಕ ವಿಧಾನಗಳು ಮತ್ತು ಡಿಎನ್‌ಎ ಪರೀಕ್ಷೆಯನ್ನು ಬಳಸಿಕೊಂಡು ನಾವು ಹುಡುಗನ ವಯಸ್ಸನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದ್ದೇವೆ" ಎಂದು ಪೊಲೀಸ್ ಇನ್ಸ್‌ಪೆಕ್ಟರ್ ರವಿಮತಿ ಹೇಳಿದ್ದಾರೆ ಎಂದು ವರದಿಯಾಗಿದೆ. ಹುಡುಗಿಯು ಮಗುವಿಗೆ ಜನ್ಮ ನೀಡುವವರೆಗೂ ಹುಡುಗಿ ಮತ್ತು ಆಕೆಯ ಪೋಷಕರು ಗರ್ಭಾವಸ್ಥೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ.
ಉದ್ಯೋಗ ಕೊಟ್ಟಾಕೆಯನ್ನೇ ಮತ್ತು ಬರಿಸಿ ರೇಪ್ ಮಾಡಿದ ದುರುಳ, 4 ವರ್ಷದ ಬಳಿಕ ಬಯಲಾಯ್ತು ಕುಕೃತ್ಯ!
ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಪ್ರಕರಣದಲ್ಲಿ ಬಲವಂತವಾಗಿ ವ್ಯಭಿಚಾರಕ್ಕೆ ತೊಡಗಿಸಲಾಗಿದ್ದ 13 ವರ್ಷದ ಬಾಲಕಿಯ ಮೇಲೆ 80ಕ್ಕೂ ಹೆಚ್ಚು ಜನರು ಆಂಧ್ರಪ್ರದೇಶದಲ್ಲಿ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಗಳವಾರ 10 ಜನರನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 74ಕ್ಕೇರಿದೆ. ಬಾಲಕಿಯನ್ನು ಗುಂಟೂರು ಪೊಲೀಸರು ರಕ್ಷಿಸಿದ್ದಾರೆ.
