*ಸ್ವಾತಂತ್ರ್ಯ ಶತಮಾನೋತ್ಸವಕ್ಕೆ ‘ನವಭಾರತ ಸೃಷ್ಟಿ’ಗೆ ಮೋದಿ ಯೋಜನೆ*2047ಕ್ಕೆ ಜಾಗತಿಕವಾಗಿ ನಂ.1 ಆಗಲು ನಾನಾ ಕಾರ‍್ಯಕ್ರಮ*‘ವಿಷನ್‌ ಇಂಡಿಯಾ-2047’ ನೀಲನಕ್ಷೆ ರೂಪಿಸಲು ನಿರ್ಧಾರ

ನವದೆಹಲಿ (ಡಿ. 12) : ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ, ತನ್ನ ಸ್ವಾತಂತ್ರ್ಯದ ಶತಮಾನೋತ್ಸವ (100th Year of Independence) ವೇಳೆ ಹೊಸದಾಗಿ ಏನೇನು ಸಾಧಿಸಬಹುದು ಎಂಬುದರ ಬಗ್ಗೆ ಗುರಿಯೊಂದನ್ನು ಹಾಕಿಕೊಂಡು ಅದರ ಕಡೆಗೆ ದಿಟ್ಟಹೆಜ್ಜೆ ಇಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ವಿಷನ್‌ ಇಂಡಿಯಾ @ 2047’ (Vision India @2047) ನೀಲನಕ್ಷೆ ರೂಪಿಸಲು ನಿರ್ಧರಿಸಿದೆ. ಯಾವ್ಯಾವ ವಲಯ, ಕ್ಷೇತ್ರಗಳಲ್ಲಿ ಕಾಲಮಿತಿಯೊಳಗೆ ಭಾರತ ವಿಶ್ವದಲ್ಲಿಯೇ ನಂ.1 ಆಗಿ ಹೊರಹೊಮ್ಮಬಹುದು ಎಂಬುದನ್ನು ನಿರ್ಧರಿಸುವ ಸಲುವಾಗಿ ಕೇಂದ್ರ ಸರ್ಕಾರದ ವಿವಿಧ ಸಚಿವಾಯಗಳ ಕಾರ್ಯದರ್ಶಿಗಳು ಸಭೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಇದರ ಜೊತೆಗೆ ಭಾರತದ ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳು ಮತ್ತು ಚಿಂತಕರ ಚಾವಡಿಯನ್ನು ಜಾಗತಿಕ ಮಟ್ಟದಲ್ಲಿ ನಂ.1 ಆಗಿಸುವ ಇಲ್ಲವೇ ಅವುಗಳಿಗೆ ಸಮನಾಗಿ ನಿಲ್ಲುವ ನಿಟ್ಟಿನಲ್ಲಿ ಅಭಿವೃದ್ಧಿ ನೀಲನಕ್ಷೆ ರಚಿಸುವ ಕೆಲಸವನ್ನೂ ಸಭೆ ಮಾಡಲಿವೆ.

ಹಲವು ವಿಷಯಗಳ ಆಯ್ಕೆ

2047ರ ವೇಳೆಗೆ ಯಾವ್ಯಾವ ವಿಷಯದಲ್ಲಿ ಭಾರತ ನಂ.1 ಆಗಬೇಕೆಂಬ ವಿಷಯದ ಕುರಿತು ಇನ್ನೂ ಸ್ಪಷ್ಟನಿರ್ಧಾರ ಹೊರಬಿದ್ದಿಲ್ಲವಾದರೂ, ಕೆಲವೊಂದು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅವುಗಳ ಕುರಿತು ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ. ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ (Rajiv Gauba) ಅವರು ಈ ಕಾರ್ಯದರ್ಶಿಗಳ ಮಟ್ಟದ ಸಭೆಯ ನೇತೃತ್ವ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

PM Narendra Modi: ಕ್ರಿಪ್ಟೋಕರೆನ್ಸಿಗಳಂತಹ ತಂತ್ರಜ್ಞಾನಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗದಿರಲಿ!

ಹೊಸ ನೀಲನಕ್ಷೆಯು, 2047ರೊಳಗೆ ಭಾರತ ಹೊಸದಾಗಿ ಏನೇನು ಸಾಧಿಸಬಹುದು? ಅವುಗಳನ್ನು ಸಾಧಿಸುವ ಬಗೆ, ಸಾಧಿಸಲು ಕಾಲಮಿತಿಯನ್ನು ಒಳಗೊಂಡಿರಲಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆಯ ಜೀವನ ಗುಣಮಟ್ಟಹೆಚ್ಚಿಸುವ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಅಂಶಗಳು ಈ ನೀಲನಕ್ಷೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಇದರ ಜೊತೆಗೆ ದೇಶೀಯವಾಗಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಜಾಗತಿಕ ಮಟ್ಟದ ಸಂಸ್ಥೆಗಳಾಗಿ ಹೊರಹೊಮ್ಮುವುದು, ವಿದೇಶಿ ಸರ್ಕಾರಗಳು ಮತ್ತು ಜಾಗತಿಕ ಸಂಸ್ಥೆಗಳ ಜೊತೆ ಸಹಯೋಗಕ್ಕೆ ಸೂಕ್ತ ವ್ಯವಸ್ಥೆ ರೂಪಿಸುವುದರ ಬಗ್ಗೆಯೂ ನೀಲನಕ್ಷೆ ಮಾಹಿತಿ ಒಳಗೊಂಡಿರಲಿದೆ ಎಂದು ಮೂಲಗಳು ತಿಳಿಸಿವೆ.

ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಸಭೆ!

'ವಿಷನ್ ಇಂಡಿಯಾ @ 2047' ಯೋಜನೆಗೆ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ವಿವಿಧ ಕ್ಷೇತ್ರಗಳ ಅಧ್ಯಯನ ನಡೆಸಿ ಪರಿಣಿತಿ ಸಾಧಿಸುವ ಮಾರ್ಗಗಳನ್ನು ಸೂಚಿಸುವ ಅಗತ್ಯವಿದೆ. ಭಾರತದ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಜಾಗತಿಕಮಟ್ಟದಲ್ಲಿ ಬೆಳೆಯುವುದನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಯನ್ನು ಸಿದ್ಧಪಡಿಸುವುದು. ಜತೆಗೆ ವಿದೇಶಿ ಸರ್ಕಾರಗಳು ಮತ್ತು ಅಂತರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಹಯೋಗಕ್ಕಾಗಿ ಕಾರ್ಯವಿಧಾನವನ್ನು ರೂಪಿಸುವುದು ಸೇರಿದಂತೆ ಇತರ ಯೋಜನೆಗಳು ಚರ್ಚೆ ಮಾಡಲಾಗುವುದು. ಇದರಿಂದಾಗಿ ಅವರು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಪಾತ್ರವನ್ನು ವಹಿಸಬಹುದು" ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಕಳೆದ ಮೂರು ವರ್ಷಗಳಲ್ಲಿ ಡಿಜಿಟಲ್ ಪಾವತಿಯಲ್ಲಿ ಏರಿಕೆ : ಕೇಂದ್ರ ಸರ್ಕಾರ

ಡಿಜಿಟಲ್ ಇಂಡಿಯಾ ಕಾರ್ಯಕ್ರಮ (Digital India programme) ದೇಶದ ಸಾಮಾನ್ಯ ನಾಗರಿಕರ( common citizens) ಬದುಕಿನ ಮೇಲೆ ಗಮನಾರ್ಹ ಹಾಗೂ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ವಿತ್ತ ಸಚಿವಾಲಯದ ರಾಜ್ಯ ಸಚಿವ ಡಾ.ಭಾಗ್ವತ್ ಕಿಸಾನ್ ರಾವ್ ಕರಡ್ ಲೋಕಸಭೆಗೆ ನೀಡಿರೋ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಡಿಜಿಟಲ್ ಪಾವತಿಯಲ್ಲಿ ಏರಿಕೆಯಾಗಿದೆ ಎಂದು ಅವರು ತಿಳಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ (RBI)ನೀಡಿರೋ ಮಾಹಿತಿ ಪ್ರಕಾರ ಕೆಲವು ವಾಣಿಜ್ಯ ಬ್ಯಾಂಕ್ ಗಳಿಗೆ ಆನ್ಲೈನ್ ಸೇವೆಗಳ ಮೇಲೆ ಶುಲ್ಕಗಳನ್ನು ವಿಧಿಸೋ ಅಧಿಕಾರವನ್ನು ನೀಡಲಾಗಿದೆ. ಆದ್ರೆ ಸೇವಾ ಶುಲ್ಕಗಳನ್ನು ವಿಧಿಸೋವಾಗ ಅವು ಸಮಂಜಸ ಹಾಗೂ ನ್ಯಾಯಸಮ್ಮತವಾಗಿರೋ ಜೊತೆ ಸರಾಸರಿ ಅಂದಾಜು ವೆಚ್ಚಕ್ಕಿಂತ ಹೆಚ್ಚಿರಬಾರದು ಎಂಬ ಸಲಹೆಯನ್ನು ಬ್ಯಾಂಕ್ ಗಳಿಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.