Digital payments:ಕಳೆದ ಮೂರು ವರ್ಷಗಳಲ್ಲಿ ಡಿಜಿಟಲ್ ಪಾವತಿಯಲ್ಲಿ ಏರಿಕೆ : ಕೇಂದ್ರ ಸರ್ಕಾರ
ಡಿಜಿಟಲ್ ಪಾವತಿಯನ್ನು(Digital payments) ಜನರು ನೆಚ್ಚಿಕೊಂಡಿದ್ದಾರೆ. ಪರಿಣಾಮ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಡಿಜಿಟಲ್ ಪಾವತಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ನವದೆಹಲಿ (ಡಿ.7): ಡಿಜಿಟಲ್ ಇಂಡಿಯಾ ಕಾರ್ಯಕ್ರಮ (Digital India programme) ದೇಶದ ಸಾಮಾನ್ಯ ನಾಗರಿಕರ( common citizens) ಬದುಕಿನ ಮೇಲೆ ಗಮನಾರ್ಹ ಹಾಗೂ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ವಿತ್ತ ಸಚಿವಾಲಯದ ರಾಜ್ಯ ಸಚಿವ ಡಾ.ಭಾಗ್ವತ್ ಕಿಸಾನ್ ರಾವ್ ಕರಡ್ ಲೋಕಸಭೆಗೆ ನೀಡಿರೋ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಡಿಜಿಟಲ್ ಪಾವತಿಯಲ್ಲಿ ಏರಿಕೆಯಾಗಿದೆ ಎಂದು ಅವರು ತಿಳಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ (RBI)ನೀಡಿರೋ ಮಾಹಿತಿ ಪ್ರಕಾರ ಕೆಲವು ವಾಣಿಜ್ಯ ಬ್ಯಾಂಕ್ ಗಳಿಗೆ ಆನ್ಲೈನ್ ಸೇವೆಗಳ ಮೇಲೆ ಶುಲ್ಕಗಳನ್ನು ವಿಧಿಸೋ ಅಧಿಕಾರವನ್ನು ನೀಡಲಾಗಿದೆ. ಆದ್ರೆ ಸೇವಾ ಶುಲ್ಕಗಳನ್ನು ವಿಧಿಸೋವಾಗ ಅವು ಸಮಂಜಸ ಹಾಗೂ ನ್ಯಾಯಸಮ್ಮತವಾಗಿರೋ ಜೊತೆ ಸರಾಸರಿ ಅಂದಾಜು ವೆಚ್ಚಕ್ಕಿಂತ ಹೆಚ್ಚಿರಬಾರದು ಎಂಬ ಸಲಹೆಯನ್ನು ಬ್ಯಾಂಕ್ ಗಳಿಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಮೂಲ ಸೇವೆಗಳನ್ನು ಗುರುತಿಸಿ ಅವುಗಳಿಗೆ ಸಮಂಜಸ ಶುಲ್ಕ(fee) ನಿಗದಿಪಡಿಸೋ ಬಗ್ಗೆ ನಿರ್ದಿಷ್ಟ ನಿಯಮಗಳನ್ನು ರೂಪಿಸಿಕೊಳ್ಳುವಂತೆ ಕೂಡ ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಸೇವಾಶುಲ್ಕಗಳ (Service charges) ಬಗ್ಗೆ ಗ್ರಾಹಕರಿಗೆ ಮಾಹಿತಿಯನ್ನು ಒದಗಿಸೋದು ಬ್ಯಾಂಕ್ ಕರ್ತವ್ಯವಾಗಿದೆ. ಸೇವಾ ಶುಲ್ಕದಲ್ಲಿನ ಬದಲಾವಣೆಗಳ ಬಗ್ಗೆಯೂ ಗ್ರಾಹಕರಿಗೆ ಮುಂಚಿತವಾಗಿ ನೋಟಿಸ್ ನೀಡಬೇಕು ಎಂದು ಕೂಡ ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು. ಇದಕ್ಕೆ ಸಂಬಂಧಿಸಿದಂತೆ ವಿವಿಧ ವರ್ಷಗಳಲ್ಲಿ ಹೊರಡಿಸಲಾಗಿರೋ ಅಧಿಸೂಚನೆಗಳ ಮಾಹಿತಿ ಆರ್ ಬಿಐ ವೆಬ್ ಸೈಟ್ ನಲ್ಲಿ ಲಭ್ಯವಿದೆ ಎಂದು ಸಚಿವರು ತಿಳಿಸಿದರು.
Mobile Payments: ಭಾರತದಲ್ಲಿಎಟಿಎಂ ವಿತ್ ಡ್ರಾಕ್ಕಿಂತ ಮೊಬೈಲ್ ಪಾವತಿಯೇ ಹೆಚ್ಚು: ಪ್ರಧಾನಿ
ಕೋವಿಡ್ -19 ಬಳಿಕ ಡಿಜಿಟಲ್ ಪಾವತಿ ಹೆಚ್ಚಳ
2020ರ ಪ್ರಾರಂಭದಲ್ಲಿ ಜಗತ್ತಿಗೆ ಕಾಲಿಟ್ಟ ಕೊರೋನಾ ಮಹಾಮಾರಿ ಜನರನ್ನು ಮನೆಯೊಳಗೆ ಬಂಧಿಯಾಗಿಸಿತ್ತು. ಮನೆಯಿಂದ ಹೊರಗೆ ಕಾಲಿಡಲು ಭಯಪಡುವಂಥ ಸ್ಥಿತಿ ನಿರ್ಮಾಣವಾಗಿತ್ತು. ಇಂಥ ಸಮಯದಲ್ಲಿ ಎಲ್ಲರಿಗೂ ನೆರವಾಗಿದ್ದು ಡಿಜಿಟಲ್ ಪಾವತಿ. ಹೌದು, ಇ-ಕಾಮರ್ಸ್ ಪೋರ್ಟಲ್ಗಳು ಹಾಗೂ ಡಿಜಿಟಲ್ ಪಾವತಿಗಳು ಜನರ ಮೆಚ್ಚಿನ ಆಯ್ಕೆಗಳಾದವು. ಪರಿಣಾಮ 2020ರಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂತು. ಈ ಬೆಳವಣಿಗೆ 2021ರಲ್ಲಿಯೂ ಮುಂದುವರಿದಿದೆ. ಉದಾಹರಣೆಗೆ ಯುಪಿಐ ವರ್ಗಾವಣೆ ( UPI transaction) ಪ್ರಮಾಣ (Volume) 2020ರ ಸೆಪ್ಟೆಂಬರ್ ನಲ್ಲಿ 2019ರ ಸೆಪ್ಟೆಂಬರ್ ಗಿಂತ ಶೇ.88ರಷ್ಟು ಏರಿಕೆ ಕಂಡಿತ್ತು. ಆದ್ರೆ ಈ ಪ್ರಮಾಣ 2021ರಲ್ಲಿ ಗಮನಾರ್ಹ ಏರಿಕೆ ದಾಖಲಿಸಿ ಶೇ.103ಕ್ಕೆ ತಲುಪಿತ್ತು. ಅದೇರೀತಿ ಯುಪಿಐ ವರ್ಗಾವಣೆ ಮೌಲ್ಯದಲ್ಲಿ(Value)ಕೂಡ ಏರಿಕೆಯಾಗಿದೆ. 2021ರಲ್ಲಿ ಯುಪಿಐ ಮೌಲ್ಯ ಶೇ.98 ಪ್ರಗತಿ ದಾಖಲಿಸಿತ್ತು. ದಾಖಲೆಗಳ ಪ್ರಕಾರ ಯುಪಿಐ ಪಾವತಿಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಡಿಜಿಟಲ್ ಪಾವತಿ ಪ್ರಮಾಣದಲ್ಲಿ ಶೇ.50ರಷ್ಟು ಪಾಲು ಯುಪಿಐ ಪಾವತಿಯದ್ದೇ ಇದೆ. ಬ್ಯಾಂಕುಗಳ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಗ್ರಾಹಕರ ವರ್ತನೆಯಲ್ಲಿ ಬದಲಾವಣೆ ಗೋಚರಿಸುತ್ತಿದೆ. ಅವರು ಡಿಜಿಟಲ್ ಪೇಮೆಂಟ್ ಹಾಗೂ ಇ-ಬ್ಯಾಂಕಿಂಗ್ ಅನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. 2021ರಲ್ಲಿ ಕ್ರೆಡಿಟ್ ಕಾರ್ಡ್ಗಳ ಬಳಕೆಯಲ್ಲಿ ಕೂಡ ಹೆಚ್ಚಳವಾಗಿದೆ. 2020ರ ಆಗಸ್ಟ್ಗೆ ಹೋಲಿಸಿದ್ರೆ 2021ರ ಆಗಸ್ಟ್ನಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಶೇ.33 ಪ್ರಗತಿಯಾಗಿದೆ.
ಜಿಯೋ, ಏರ್ಟೆಲ್ , ವೋಡಾಫೋನ್ ಕಂಪನಿಗಳಿಗೆ BSNL ಟಕ್ಕರ್
ಮೊಬೈಲ್ ಪಾವತಿಯಲ್ಲೂ ಹೆಚ್ಚಳ
ಭಾರತದಲ್ಲಿ ಕಳೆದ ವರ್ಷ ಮೊಬೈಲ್ ಪಾವತಿಗಳ (Mobile Payments) ಪ್ರಮಾಣ ಎಟಿಎಂನಲ್ಲಿ(ATM) ಹಣ ವಿತ್ ಡ್ರಾ (Withdraw) ಮಾಡಿದ್ದಕ್ಕಿಂತ ಹೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಡೆದ ಇನ್ಫಿನಿಟಿ ಫೋರಂ (InFinity Forum)ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದರು.