ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕದ ವಿವಿಧ ಸಹಕಾರಿ ಬ್ಯಾಂಕ್‌ಗಳ ಮೇಲೆ ಇತ್ತೀಚೆಗೆ ನಡೆಸಲಾದ ಆದಾಯ ತೆರಿಗೆ ದಾಳಿ ವೇಳೆ 1,000 ಕೋಟಿ ರು. ಮೌಲ್ಯದ ಅಕ್ರಮ ವ್ಯವಹಾರ ಬೆಳಕಿಗೆ ಬಂದಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮಂಗಳವಾರ ತಿಳಿಸಿದೆ.

ಪಿಟಿಐ ನವದೆಹಲಿ (ಏ.12) : ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕದ ವಿವಿಧ ಸಹಕಾರಿ ಬ್ಯಾಂಕ್‌ಗಳ ಮೇಲೆ ಇತ್ತೀಚೆಗೆ ನಡೆಸಲಾದ ಆದಾಯ ತೆರಿಗೆ ದಾಳಿ ವೇಳೆ 1,000 ಕೋಟಿ ರು. ಮೌಲ್ಯದ ಅಕ್ರಮ ವ್ಯವಹಾರ ಬೆಳಕಿಗೆ ಬಂದಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮಂಗಳವಾರ ತಿಳಿಸಿದೆ.

ಸಹಕಾರಿ ಬ್ಯಾಂಕುಗಳ 16 ಶಾಖೆಗಳ ಮೇಲೆ ಮಾ.31 ರಂದು ಐಟಿ ಇಲಾಖೆ ದಾಳಿ (IT department raids)ನಡೆಸಿತ್ತು. ತಮ್ಮ ಗ್ರಾಹಕರ ಉದ್ಯಮಗಳ ಹಣವನ್ನು ಈ ಬ್ಯಾಂಕುಗಳು ಬೇರೆ ಕಡೆ ವರ್ಗಾಯಿಸಿ ತೆರಿಗೆಯಿಂದ ಪಾರಾಗಲು ಯತ್ನಿಸಿದ್ದವು ಎಂಬ ಆರೋಪ ಕೇಳಿಬಂದ ಕಾರಣ ದಾಳಿ ನಡೆಸಲಾಗಿತ್ತು. ದಾಳಿ ವೇಳೆ 3.3 ಕೋಟಿ ರು. ಹೆಚ್ಚು ನಗದು ಮತ್ತು 2 ಕೋಟಿ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಡಿಟಿ ಹೇಳಿಕೆಯಲ್ಲಿ ತಿಳಿಸಿದೆ.

Yadgir: ₹6.16ಕೋಟಿ ಹಣ ದುರ್ಬಳಕೆ: ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಸೇರಿ 19 ಜನರ ವಿರುದ್ಧ ಕೇಸ್

ಅಸ್ತಿತ್ವದಲ್ಲೇ ಇಲ್ಲದ ಕಂಪನಿಗಳ ಹೆಸರಿನಲ್ಲಿ ಚೆಕ್‌ಗಳನ್ನು ಬರೆದು ಈ ಬ್ಯಾಂಕ್‌ಗಳಲ್ಲಿನ ಉದ್ದಿಮೆಗಳು ತೆರಿಗೆ ವಂಚನೆಗೆ ಯತ್ನಿಸಿದ್ದವು ಎಂದು ವಶಪಡಿಸಿಕೊಂಡ ಪುರಾವೆಗಳಲ್ಲಿ ಪತ್ತೆ ಆಗಿದೆ. ಈ ಉದ್ದಿಮೆ/ ವ್ಯಾಪಾರ ಸಂಸ್ಥೆಗಳಲ್ಲಿ ಗುತ್ತಿಗೆದಾರರು, ರಿಯಲ್‌ ಎಸ್ಟೇಟ್‌ ಕಂಪನಿಗಳು ಹಾಗೂ ಇತರರು ಇದ್ದಾರೆ. ಚೆಕ್‌ ಬರೆಯುವಾಗ ಯಾವುದೇ ಕೆವೈಸಿ ಮಾನದಂಡ ಅನುಸರಿಸಿರಲಿಲ್ಲ ಎಂದು ಗೊತ್ತಾಗಿದೆ.

ಇನ್ನು ಕೆಲವು ಸಹಕಾರ ಸಂಘಗಳು ತಮ್ಮ ಖಾತೆಗಳಿಂದ ಹಣವನ್ನು ನಗದು ರೂಪದಲ್ಲಿ ಹಿಂತೆಗೆದುಕೊಂಡು, ಹಣವನ್ನು ವ್ಯಾಪಾರ/ಉದ್ದಿಮೆ ಘಟಕಗಳಿಗೆ ಹಿಂದಿರುಗಿಸಿರುವುದು ಸಹ ಪತ್ತೆಯಾಗಿದೆ. ಒಟ್ಟಾರೆಯಾಗಿ ಸಹಕಾರ ಸಂಘಗಳನ್ನು ಬಳಸಿಕೊಂಡು ವ್ಯಾಪಾರ/ಉದ್ದಿಮೆ ಘಟಕಗಳು ತಮ್ಮ ತೆರಿಗೆ ವಂಚನೆ ಉದ್ದೇಶ ಈಡೇರಿಸಿಕೊಂಡಿವೆ ಎಂಬುದು ಈ ಪ್ರಕರಣದ ತಿರುಳು ಎಂದು ಇಲಾಖೆ ಹೇಳಿದೆ.

ಮೋದಿ ಸರ್ಕಾರದಿಂದ ಅಧಿಕಾರ ದುರ್ಬಳಕೆ: ಸೋನಿಯಾ ಗಾಂಧಿ ವಾಗ್ದಾಳಿ

ಈ ರೀತಿ ಸುಮಾರು 1000 ಕೋಟಿ ರು. ಹಣವನ್ನು ಸುಳ್ಳು ವೆಚ್ಚವಾಗಿ ತೋರಿಸಿ ಬೋಗಸ್‌ ಲೆಕ್ಕಪತ್ರ ಸೃಷ್ಟಿಸಲಾಗಿದೆ. ಶೋಧನೆಯ ಸಮಯದಲ್ಲಿ ವಶಪಡಿಸಿಕೊಂಡ ಪುರಾವೆಗಳು ಕೆಲವು ವ್ಯಕ್ತಿಗಳು/ಗ್ರಾಹಕರಿಗೆ 15 ಕೋಟಿ ರು.ಗೂ ಅಧಿಕ ನಗದು ಸಾಲವನ್ನು ಯಾವುದೇ ಲೆಕ್ಕ-ಪತ್ರ ದಾಖಲಾತಿಗಳಿಲ್ಲದೇ ನೀಡಿರುವುದು ಬೆಳಕಿಗೆ ಬಂದಿದೆ.

ರಾಜ್ಯದ ಸಹಕಾರ ಬ್ಯಾಂಕುಗಳಲ್ಲಿ ಭಾರಿ ಅಕ್ರಮ ನಡೆದಿರುವ ಕುರಿತು ಆರೋಪ

  • ಸಹಕಾರ ಬ್ಯಾಂಕುಗಳ 16 ಶಾಖೆಗಳಲ್ಲಿ ಮಾ.31ಕ್ಕೆ ದಾಳಿ ನಡೆಸಿದ್ದ ತೆರಿಗೆ ಇಲಾಖೆ
  •  ದಾಳಿ ವೇಳೆ 3.3 ಕೋಟಿ ರು. ನಗದು, 2 ಕೋಟಿ ಮೌಲ್ಯದ ಚಿನ್ನಾಭರಣ ಸಿಕ್ಕಿತ್ತು
  •  ಅಸ್ತಿತ್ವದಲ್ಲೇ ಇಲ್ಲದ ಕಂಪನಿಗಳ ಹೆಸರಿನಲ್ಲಿ ಚೆಕ್‌ ಬರೆದು ತೆರಿಗೆ ವಂಚನೆಗೆ ಯತ್ನ
  • ಚೆಕ್‌ ಬರೆಯುವಾಗ ಯಾವುದೇ ಕೆವೈಸಿ ನಿಯಮ ಪಾಲಿಸದಿರುವುದು ತನಿಖೆ ವೇಳೆ ಪತ್ತೆ
  • ಸಹಕಾರ ಸಂಘಗಳನ್ನು ವ್ಯಾಪಾರ/ಉದ್ದಿಮೆಗಳು ತೆರಿಗೆ ವಂಚನೆಗೆ ಬಳಸಿರುವುದು ದೃಢ