Asianet Suvarna News Asianet Suvarna News

ಮೋದಿ ಸರ್ಕಾರದಿಂದ ಅಧಿಕಾರ ದುರ್ಬಳಕೆ: ಸೋನಿಯಾ ಗಾಂಧಿ ವಾಗ್ದಾಳಿ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಪ್ರತಿಯೊಂದು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ವಿಷಯವನ್ನು ದೇಶಾದ್ಯಂತ ಜನರ ಬಳಿಗೆ ನೇರವಾಗಿ ಕೊಂಡೊಯ್ಯಲು ಕಾಂಗ್ರೆಸ್‌ ನಿರ್ಧರಿಸಿದೆ. ಅಲ್ಲದೇ ಸಂವಿಧಾನವನ್ನು ಉಳಿಸಲು ಸಮಾನ ಮನಸ್ಕ ಪಕ್ಷಗಳ ಜೊತೆ ಕೈಜೋಡಿಸಲು ನಾವು ಸಿದ್ಧವಾಗಿದ್ದೇವೆ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

Misuse of power by Modi government: Sonia Gandhi attacks rav
Author
First Published Apr 12, 2023, 1:02 AM IST | Last Updated Apr 12, 2023, 1:02 AM IST

ನವದೆಹಲಿ (ಏ.12): ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಪ್ರತಿಯೊಂದು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ವಿಷಯವನ್ನು ದೇಶಾದ್ಯಂತ ಜನರ ಬಳಿಗೆ ನೇರವಾಗಿ ಕೊಂಡೊಯ್ಯಲು ಕಾಂಗ್ರೆಸ್‌ ನಿರ್ಧರಿಸಿದೆ. ಅಲ್ಲದೇ ಸಂವಿಧಾನವನ್ನು ಉಳಿಸಲು ಸಮಾನ ಮನಸ್ಕ ಪಕ್ಷಗಳ ಜೊತೆ ಕೈಜೋಡಿಸಲು ನಾವು ಸಿದ್ಧವಾಗಿದ್ದೇವೆ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ(Soniya gandhi) ಹೇಳಿದ್ದಾರೆ.

‘ದ ಹಿಂದೂ’ ಪತ್ರಿಕೆಗೆ ಲೇಖನ ಬರೆದಿರುವ ಅವರು, ಮೋದಿ ಸರ್ಕಾರ(Narendra Modi government) ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳನ್ನು ವ್ಯವಸ್ಥಿತವಾಗಿ ಛಿದ್ರಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ದೇಶದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕ(BJP and RSS Leaders)ರಿಂದ ಹೆಚ್ಚಾಗುತ್ತಿರುವ ದ್ವೇಷ ಭಾಷಣಗಳನ್ನು ಮೋದಿ ನಿರ್ಲಕ್ಷಿಸಿದ್ದಾರೆ. ದೇಶದಲ್ಲಿ ಧಾರ್ಮಿಕ ಹಬ್ಬಗಳು ಸಂತೋಷ ಮತ್ತು ಆಚರಣೆಗಳನ್ನು ಕಳೆದುಕೊಂಡಿದ್ದು ಇತರರನ್ನು ಬೆದರಿಸುವ ಹಬ್ಬಗಳಾಗಿವೆ. ಜಾತಿ, ಧರ್ಮ, ಆಹಾರ, ಲಿಂಗ ಅಥವಾ ಭಾಷೆಯ ಕಾರಣದಿಂದಾಗಿ ಇತರರಲ್ಲಿ ಭಯ ಮೂಡಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ವಿದೇಶದಲ್ಲಿ ಭೇಟಿಯಾಗೋ ಉದ್ಯಮಿಗಳು ಯಾರು..? ಬಿಜೆಪಿ ಪ್ರಶ್ನೆ

ಇಂತಹ ಅನೇಕ ಸಮಸ್ಯೆಗಳು ದೇಶದಲ್ಲಿದ್ದರೂ ಮೋದಿ ಇವುಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ವಿಷಯಗಳಿಂದ ದೂರವಿರಲು ಇಬ್ಬಗೆಯ ಭಾಷಣಗಳನ್ನು ಮಾಡುತ್ತಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಹಲವಾರು ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳು ದೇಶದ ಪ್ರಜಾಪ್ರಭುತ್ವದ ನಿರ್ಣಾಯಕ ಪರೀಕ್ಷೆಯಾಗಿದೆ. ಹಾಗಾಗಿ ಇದನ್ನು ನೇರವಾಗಿ ಜನರಿಗೆ ತಲುಪಿಸಲು ಕಾಂಗ್ರೆಸ್‌ ಪಕ್ಷ ಭಾರತ್‌ ಜೋಡೋ ಯಾತ್ರೆ ಕೈಗೊಂಡಂತೆ ಯೋಜನೆಯನ್ನು ಕೈಗೊಳ್ಳಲಿದೆ. ಅಲ್ಲದೇ ಸಂವಿಧಾನವನ್ನು ರಕ್ಷಿಸುವುದಕ್ಕಾಗಿ ಸಮಾನ ಮನಸ್ಕ ಪಕ್ಷಗಳ ಜೊತೆ ಕಾಂಗ್ರೆಸ್‌ ಕೈ ಜೋಡಿಸಲಿದೆ ಎಂದು ಅವರು ಹೇಳಿದ್ದಾರೆ.

ಅಷ್ಟೇ ಅಲ್ಲದೇ ನಿರುದ್ಯೋಗ ಬಡತನ, ಹಣದುಬ್ಬರ ಮತ್ತು ಸಾಮಾಜಿಕ ಒಡಕಿನ ಬಗ್ಗೆ ವಿಪಕ್ಷಗಳು ಮಾತನಾಡದಂತೆ ತಡೆಯಲು ಅಧಿವೇಶನ ಸರಿಯಾಗಿ ನಡೆಯದಂತೆ ಬಿಜೆಪಿ ನೋಡಿಕೊಂಡಿದೆ. ವಿಪಕ್ಷಗಳ ಬಾಯಿ ಮುಚ್ಚಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿದೆ. ಇವು ದಾಖಲಿಸಿರುವ ಶೇ.95ರಷ್ಟುಮೊಕದ್ದಮೆಗಳು ವಿಪಕ್ಷಗಳ ನಾಯಕರ ವಿರುದ್ಧವೆ ಇವೆ ಎಂದು ಅವರು ಆರೋಪಿಸಿದರು.

ಇಸ್ರೇಲ್‌ ತಂತ್ರಾಂಶ ಬಳಸಿ ಮೋದಿ ಸರ್ಕಾರದಿಂದ ಬೇಹುಗಾರಿಕೆ: ಕಾಂಗ್ರೆಸ್‌

ಇದು ಮೋದಿ ದ್ವೇಷದ ಸ್ಪಷ್ಟಉದಾಹರಣೆ: ರಿಜಿಜು

ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳ ಸ್ವಾತಂತ್ರ್ಯದ ಕುರಿತಾಗಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಬರೆದಿರುವ ಲೇಖನ ಸಂಪೂರ್ಣವಾಗಿ ಭ್ರಮೆಯಿಂದ ಕೂಡಿದೆ. ಇದು ಮೋದಿ ದ್ವೇಷಕ್ಕೆ ಸ್ಪಷ್ಟಉದಾಹರಣೆ ಎಂದು ಕೇಂದ್ರ ಸಚಿವರಾದ ಕಿರಣ್‌ ರಿಜಿಜು ಮತ್ತು ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಸೋನಿಯಾ ಗಾಂಧಿ ಅವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿರುವುದು ಭ್ರಮೆಯಿಂದ ಕೂಡಿದೆ ಎಂದು ರಿಜಿಜು ಹೇಳಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಹಿಸಾಸಕ್ತಿಗಳನ್ನು ಬದಿಗೊತ್ತಿ, ಮೋದಿ ದ್ವೇಷವನ್ನಷ್ಟೇ ಇದು ಸಾರುತ್ತದೆ ಎಂದು ಪ್ರಧಾನ್‌ ಕುಟುಕಿದ್ದಾರೆ.

Latest Videos
Follow Us:
Download App:
  • android
  • ios