Asianet Suvarna News Asianet Suvarna News

ಲೌಡ್‌ಸ್ಪೀಕರ್‌ ಮೊಳಗಿಸಿದರೆ ದಿಲ್ಲಿಯಲ್ಲಿ 10 ಸಾವಿರ ದಂಡ

  • ಮಿತಿಮೀರಿದ ಮಾಲಿನ್ಯದಿಂದ ತತ್ತರಿಸಿರುವ ರಾಷ್ಟ್ರ ರಾಜಧಾನಿ
  • ದೆಹಲಿಯಲ್ಲಿ ಶಬ್ದಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ನಿಯಮ
  •  ಲೌಡ್‌ ಸ್ಪೀಕರ್‌ ಅಥವಾ ಮೈಕ್‌ ಅನ್ನು ಬಳಸಿದರೆ 10 ಸಾವಿರ ರು. ದಂಡ
10 thousand Fine for playing loudspeaker in Delhi snr
Author
Bengaluru, First Published Jul 11, 2021, 8:46 AM IST

ನವದೆಹಲಿ (ಜು.11):  ಮಿತಿಮೀರಿದ ಮಾಲಿನ್ಯದಿಂದ ತತ್ತರಿಸಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಬ್ದಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ರೂಪಿಸಲಾಗಿದೆ. ಅನುಮತಿ ಪಡೆಯದೆ ಅಥವಾ ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಲೌಡ್‌ ಸ್ಪೀಕರ್‌ ಅಥವಾ ಮೈಕ್‌ ಅನ್ನು ಬಳಸಿದರೆ 10 ಸಾವಿರ ರು. ದಂಡ ವಿಧಿಸಲಾಗುತ್ತದೆ. 

ಜತೆಗೆ ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಈ ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದೆ.

ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ ನಿಗೂಢ ಶಬ್ದ; ಹಲವರಿಗೆ ಭೂಕಂಪನದ ಅನುಭವ! .

ಅನುಮತಿ ಪಡೆಯದೆ 1 ಕೆವಿಎ ಡೀಸೆಲ್‌ ಜನರೇಟರ್‌ ಬಳಸಿದರೆ 1 ಲಕ್ಷ, 62.5 ಕೆವಿಎಯಿಂದ 1000 ಕೆವಿಎವರೆಗಿನ ಜನರೇಟರ್‌ಗೆ 25 ಸಾವಿರ ಹಾಗೂ 62.5 ಕೆವಿಎವರೆಗಿನ ಡಿಜಿ ಸೆಟ್‌ಗಳಿಗೆ 10 ಸಾವಿರ ರು. ದಂಡ ಹೇರಲಾಗುತ್ತದೆ.

ನಿಗದಿತ ಮಿತಿಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ವಸತಿ ಪ್ರದೇಶಗಳು ಅಥವಾ ವಿವಾಹ ಸಮಾರಂಭಗಳಲ್ಲಿ ಬಳಸಿದರೆ, ಕಾರ್ಯಕ್ರಮದ ಸಂಘಟಕರು ಹಾಗೂ ಜಾಗದ ಮಾಲೀಕರು ಮೊದಲ ಉಲ್ಲಂಘನೆಗೆ 25 ಸಾವಿರ ರು. ಪಾವತಿಸಬೇಕು. ಎರಡನೇ ಬಾರಿಯೂ ಅದೇ ತಪ್ಪು ಮಾಡಿದರೆ 40 ಸಾವಿರ ದಂಡ ಕಟ್ಟಬೇಕು ಎಂದು ಹೊಸ ನಿಯಮ ಹೇಳುತ್ತದೆ.

'ಅಜಾನ್‌ನಿಂದ ದಿನಾ ನಿದ್ರೆ ಭಂಗ, ತಲೆನೋವು' ಧ್ವನಿವರ್ಧಕ ಬ್ಯಾನ್

ವಿವಾಹ ಮೆರವಣಿಗೆ ಹಾಗೂ ಸಾರ್ವಜನಿಕ ಸಮಾರಂಭ ವೇಳೆ ನಿಗದಿತ ಮಿತಿಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿ ಸಿಡಿಸಿದರೆ 10 ಸಾವಿರ ರು. ದಂಡ ಪಾವತಿಸಬೇಕು. ಶಾಲೆ, ಕಾಲೇಜು, ಆಸ್ಪತ್ರೆ, ನ್ಯಾಯಾಲಯಗಳ 100 ಮೀಟರ್‌ ವ್ಯಾಪ್ತಿಯೊಳಗಿನ ಪ್ರದೇಶ ನಿಶ್ಯಬ್ದ ವಲಯವಾಗಿದ್ದು, ಅಲ್ಲಿ ದಂಡದ ಮೊತ್ತ ದ್ವಿಗುಣ ಇರುತ್ತದೆ ಎಂದು ನಿಯಮ ವಿವರಿಸಿದೆ.

Follow Us:
Download App:
  • android
  • ios