Asianet Suvarna News Asianet Suvarna News

ಸುವರ್ಣ ಕಾಲಘಟ್ಟದಲ್ಲಿ ಭಾರತ, ಯುವ ಸಮೂಹದ ಜೊತೆ ರಾಜೀವ್ ಚಂದ್ರಶೇಖರ್ ಸಂವಾದ!

ಸ್ವತಂತ್ರ ಭಾರತದ ಕಳೆದ 75 ವರ್ಷಗಳಲ್ಲಿ  ಅತ್ಯಂತ ಸುವರ್ಣ ಘಟ್ಟದಲ್ಲಿ ನಾವಿದ್ದೇವೆ. ಅಜಾದಿ ಕಾ ಅಮೃತ ಮಹೋತ್ಸವ, ಕೋವಿಡ್ ಮಣಿಸಿದ ಸಾಧನೆ ಸೇರಿದಂತೆ ಹಲವು ವಿಶೇಷತೆಗಳು, ಸಂಭ್ರಮಗಳು ನಮ್ಮ ಮುಂದಿದೆ. ಹೀಗಾಗಿ ಇದು ಉತ್ಸಾಹದ ವರ್ಷ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 
 

India digital economy creates opportunities of new jobs and entrepreneurships says Minister rajeev chandrasekhar in Kerala ckm
Author
First Published Dec 30, 2022, 4:46 PM IST

ತಾಮರಷೇರಿ(ಡಿ.30):  ಹೊಸ ವರ್ಷಕ್ಕೆ ಬರಮಾಡಿಕೊಳ್ಳಲು ಭಾರತ ಸೇರಿದಂತೆ ವಿಶ್ವವೇ ಸಜ್ಜಾಗಿದೆ. ಇದಕ್ಕೂ ಮುನ್ನ 2022ರ ವರ್ಷ ಭಾರತದಲ್ಲಿ ಹಲವು ಸಿಹಿ ಕಹಿಗಳನ್ನು ಕಟ್ಟಿಕೊಟ್ಟಿದೆ. ನವ ಭಾರತದ ದಿಟ್ಟ ಹೆಜ್ಜೆಯಲ್ಲಿ 2022ನೇ ವರ್ಷ ಭಾರತದ ಪಾಲಿಗೆ ಅತ್ಯಂತ ಸ್ಮರಣೀಯ ಹಾಗೂ ಉತ್ಸಾಹದ ವರ್ಷವಾಗಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಸ್ವಾತಂತ್ರ ಬಂದ ಕಳೆದ 75 ವರ್ಷಗಳಲ್ಲಿ ಅತ್ಯುತ್ತಮ ಹಾಗೂ ಅತೀ ಉತ್ಸಾಹದ ವರ್ಷ ಯಾವುದೇ ಎಂದರೆ ಅಂದು 2022. ಈ ವರ್ಷ ನಾವು ಅಜಾದಿ ಕಾ ಅಮೃತಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಕೊರೋನಾ ವೈರಸ್ ನಿಯಂತ್ರಿಸಿ ವಿಶ್ವದೆದೆರು ತಲೆ ಎತ್ತಿ ನಿಂತ ವರ್ಷ ಇದಾಗಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ನೋಡುತ್ತಿದ್ದ ದೃಷ್ಟಿಕೋನ 2022ರಲ್ಲಿ ಸಂಪೂರ್ಣವಾಗಿ ಬದಲಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಕೇರಳದ ತಾಮರಷೇರಿಯಲ್ಲಿ ಆಯೋಜಿಸಿದ್ದ ನ್ಯೂ ಇಂಡಿಯಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜೀವ್ ಚಂದ್ರಶೇಖರ್, ಯುವ ಸಮೂಹದ ಜೊತೆ ಮಹತ್ವದ ಮಾಹಿತಿ ಹಂಚಿಕೊಂಡರು. ಇದೇ ವೇಳೆ ಯುವ ಸಮೂಹದ ಪ್ರಶ್ನೆ ಹಾಗೂ ಕುತೂಹಲಕ್ಕೆ ಉತ್ತರ ನೀಡಿದರು. ಹಲವು ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ನ್ಯೂ ಇಂಡಿಯಾ ಕುರಿತು ಭಾಷಣ ಮಾಡಿದ್ದೇನೆ. ಮಾಹಿತಿಗಳನ್ನು ನೀಡಿದ್ದೇನೆ. ಒಂದು ಬಾರಿ ಪ್ರಶ್ನೋತ್ತರ ವೇಳೆ ಒರ್ವ ಏನಿದು ನ್ಯೂ ಇಂಡಿಯಾ ಎಂದು ಕೇಳಿದ್ದ. ಹೀಗಾಗಿ ಇಂದು ನ್ಯೂ ಇಂಡಿಯಾ  ಕುರಿತು ನೀವೆಲ್ಲರೂ ತಿಳಿದುಕೊಳ್ಳುವ ಅಗತ್ಯವಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಇಂಟರ್ನೆಟ್‌ ಭವಿಷ್ಯಕ್ಕೆ ಭಾರತದ ಪ್ರತ್ಯೇಕ ನೀತಿ; ಸೂಕ್ತ ಮಾನದಂಡ ರಚಿಸಲು ಸಿದ್ಧ: ರಾಜೀವ್‌ ಚಂದ್ರಶೇಖರ್‌

ಕಳೆದ 75 ವರ್ಷದಲ್ಲಿ ಭಾರತವನ್ನು ವಿದೇಶಗಳಲ್ಲಿ ಯಾವ ರೀತಿ ಚಿತ್ರಿಸಲಾಗುತ್ತಿತ್ತು. ಭಾರತದ ಕುರಿತು ಯಾವ ಮಾತುಗಳನ್ನು ಆಡುತ್ತಿದ್ದರು. ಭಾರತಕ್ಕೆ ವಿದೇಶಗಳಲ್ಲಿ ಸಿಗುತ್ತಿದ್ದ ಮನ್ನಣೆ ಹೇಗಿತ್ತು? ಈ ಆವಲೋಕನ ಮಾಡಲು ವಿದ್ಯಾರ್ಥಿಗಳಿಗೆ ಬಹುಷ ಸಾಧ್ಯವಾಗಲ್ಲ. ಆದರೆ ನಿಮ್ಮ ಪೋಷಕರು, ಹಿರಿಯರ ಬಳಿ ಕೇಳಿದರೆ ಸ್ಪಷ್ಟ ಉತ್ತರ ಸಿಗಲಿದೆ. ಸದ್ಯ ಭಾರತಕ್ಕೆ ವಿಶ್ವಮಟ್ಟದಲ್ಲಿ ಸಿಗುತ್ತಿರುವ ಸ್ಥಾನಮಾನ ಹೇಗಿದೆ? ನವ ಭಾರತದಲ್ಲಿ ಭಾರತವನ್ನು ನೋಡುವ ದೃಷ್ಟಿಕೋನ ಯಾವ ರೀತಿ ಬದಲಾಗಿದೆ. ಇದಕ್ಕೆ ಕಾರಣಗಳೇನು? ಅನ್ನೋದು ಅತೀ ಮುಖ್ಯ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನವ ಭಾರತ ನಿರ್ಮಾಣವಾಗಿದೆ. ಇದಕ್ಕೆ ಕಳೆದ 8 ವರ್ಷಗಳಿಂದ ಸತತ ಪರಿಶ್ರಮ ಪಡಲಾಗಿದೆ. ಭಾರತದ ಚಿತ್ರಣ ಬದಲಿಸಲಾಗಿದೆ. ಅಭಿವೃದ್ಧಿಯ ಹೊಸ ಅರ್ಥ ಹಾಗೂ ಹೊಸ ವೇಗ ನೀಡಲಾಗಿದೆ. ಭಾರತದ ಮೂಲಭೂತ ಸೌಕರ್ಯಗಳನ್ನು ವಿಶ್ವಮಟ್ಟಕ್ಕೆ ಏರಿಸಲಾಗಿದೆ. ಯುವ ಸಮೂಹಕ್ಕೆ ಅವಕಾಶಗಳ ಬಾಗಿಲು ತೆರಿದಿದೆ. ಡಿಜಿಟಲ್ ಇಂಡಿಯಾ ಮೂಲಕ ಹೊಸ ಕ್ರಾಂತಿ ಬರೆಯಲಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ವೈಯಕ್ತಿಕ ಡೇಟಾ ದುರ್ಬಳಕೆಗಿನ್ನು ಕಡಿವಾಣ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಈ ಕಾರ್ಯಕ್ರಮದಲ್ಲಿ 20 ಕಾಲೇಗಳಿಂದ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಯುವ ಸಮೂಹದ ಜೊತೆ ಸಂವಾದ ನಡೆಸಿದ ರಾಜೀವ್ ಚಂದ್ರಶೇಖರ್ ಹೊಸ ಭಾರತದಲ್ಲಿರುವ ವಿಪುಲ ಅವಕಾಶದ ಕುರಿತು ಮಾಹಿತಿ ನೀಡಿದರು. ಬದಲಾದ ಭಾರತದಲ್ಲಿ ಯುವ ಶಕ್ತಿಯ ಕೇಂದ್ರೀಕರಣವಾಗಿದೆ ಎಂದರು.

Follow Us:
Download App:
  • android
  • ios