ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ 1.25 ಲಕ್ಷ ಕೋಟಿ ರು. ವಹಿವಾಟು ನಡೆದಿದೆ ಎಂದು ಅಖಿಲ ಭಾರತ ವ್ಯಾಪಾರಸ್ಥರ ಒಕ್ಕೂಟ ತಿಳಿಸಿದೆ.

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ 1.25 ಲಕ್ಷ ಕೋಟಿ ರು. ವಹಿವಾಟು ನಡೆದಿದೆ ಎಂದು ಅಖಿಲ ಭಾರತ ವ್ಯಾಪಾರಸ್ಥರ ಒಕ್ಕೂಟ ತಿಳಿಸಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಸಮಿತಿಯ ಅಧ್ಯಕ್ಷ ಖಂಡೇಲ್‌ವಾಲ್‌, ‘ರಾಮಮಂದಿರ ಉದ್ಘಾಟನೆ ನಿಮಿತ್ತ ದೇಶಾದ್ಯಂತ ಉತ್ಸವವನ್ನು ಆಚರಿಸಲಾಯಿತು. ಈ ಪ್ರಯುಕ್ತ ದೇಶಾದ್ಯಂತ ಸಣ್ಣ ವ್ಯಾಪಾರಸ್ಥರಿಗೆ ಹೆಚ್ಚಿನ ಮಟ್ಟದ ವ್ಯಾಪಾರವಾಗಿದೆ. ಈ ಪೈಕಿ ಉತ್ತರ ಪ್ರದೇಶವೊಂದರಲ್ಲೇ 40 ಸಾವಿರ ಕೋಟಿ ರು. ವಹಿವಾಟು ನಡೆದಿದೆ. ದೆಹಲಿಯಲ್ಲಿ 25 ಸಾವಿರ ಕೋಟಿ ರು. ವಹಿವಾಟು ನಡೆದಿದೆ. ರಾಮನ ಮೇಲಿನ ಭಕ್ತಿಯಿಂದ ದೇಶದಲ್ಲಿ ಮುಂಚೆ ಚಾಲ್ತಿಯಲ್ಲಿದ್ದ ಸನಾತನ ಆರ್ಥಿಕತೆ ಮರುಕಳಿಸಿದೆ’ ಎಂದು ತಿಳಿಸಿದರು.

ಈ ಸಮಯದಲ್ಲಿ ದೇಶಾದ್ಯಂತ ಲಕ್ಷ ಲಕ್ಷ ಸಂಖ್ಯೆಯಲ್ಲಿ ರಾಮೋತ್ಸವಕ್ಕೆ ಸಂಬಂಧಿಸಿದ ಉಡುಗೊರೆ, ಆಹಾರ ಪದಾರ್ಥ, ವಸ್ತ್ರ, ಪೂಜಾ ಸಾಮಗ್ರಿ, ಆಭರಣ, ಎಲ್‌ಈಡಿ ಸ್ಕ್ರೀನ್‌ಗಳು ಮಾರಾಟವಾಗಿವೆ. ಜೊತೆಗೆ ರಾಮಮಂದಿರದ ಪ್ರತಿಕೃತಿಯ ಮಾರಾಟವೂ ಹೆಚ್ಚಿದ್ದು, ಮುಂದೆ ವಿವಾಹ ಸಮಾರಂಭದಲ್ಲಿ ಅದನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ಬೆಳೆಯುವ ಲಕ್ಷಣಗಳು ಗೋಚರಿಸುತ್ತಿವೆ ಎಂದೂ ಮಾಹಿತಿ ನೀಡಿದರು.

ರಾಮ ಲಲ್ಲಾಗೆ ಹೊಸ ಹೆಸರಿಟ್ಟ ಪ್ರಾಣಪ್ರತಿಷ್ಠೆ ನೆರವೇರಿಸಿದ ಪ್ರಧಾನ ಅರ್ಚಕ!

ಶ್ರೀರಾಮಲಲ್ಲಾನ ವಜ್ರಖಚಿತ ಕಿರೀಟದಲ್ಲಿದೆ ಸೂರ್ಯ, ನವಿಲು, ಮೀನು, ಪಚ್ಚೆ; ತಯಾರಕರೇನಂತಾರೆ?