ರಾಜ್‌ಘಾಟ್‌ನಲ್ಲಿ ಗಾಂಧಿ ಪ್ರತಿಮೆಗೆ ವಂದಿಸಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ
ನವದೆಹಲಿ: ದೇಶ 77ನೇ ಸ್ವಾತಂತ್ರ ದಿನಾಚರಣೆಯ ಸಂಭ್ರಮದಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯಲ್ಲಿ 10ನೇ ಹಾಗೂ ಈ ಸರ್ಕಾರದ ಅವಧಿಯ ಕೊನೆಯ ಧ್ವಜಾರೋಹಣವನ್ನು ನೆರವೇರಿಸಿದರು. ಇದಕ್ಕೂ ಮೊದಲು ಅವರು ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಗೆ ನಮಸ್ಕರಿಸಿದರು.
ನವದೆಹಲಿ: ದೇಶ 77ನೇ ಸ್ವಾತಂತ್ರ ದಿನಾಚರಣೆಯ ಸಂಭ್ರಮದಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯಲ್ಲಿ 10ನೇ ಹಾಗೂ ಈ ಸರ್ಕಾರದ ಅವಧಿಯ ಕೊನೆಯ ಧ್ವಜಾರೋಹಣವನ್ನು ನೆರವೇರಿಸಿದರು. ಇದಕ್ಕೂ ಮೊದಲು ಅವರು ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಗೆ ನಮಸ್ಕರಿಸಿದರು. ಬಳಿಕ ಮಾತನಾಡಿದ ಪ್ರಧಾನಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟವೆನಿಸಿರುವ ಭಾರತ ಈಗ ಜನಸಂಖ್ಯೆಯ ದೃಷ್ಟಿಯಿಂದ ಮುಂದಿದೆ. ಇಷ್ಟು ದೊಡ್ಡ ದೇಶ, ನನ್ನ ಕುಟುಂಬದ 140 ಕೋಟಿ ಸದಸ್ಯರು ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಕೊಡುಗೆಯನ್ನು ನೀಡಿದ ಎಲ್ಲಾ ಕೆಚ್ಚೆದೆಯ ಹೃದಯಗಳಿಗೆ ನಾನು ನನ್ನ ಗೌರವವನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ದೆಹಲಿ ಮಾತ್ರ ಭಾರತದ ಕೇಂದ್ರವಾಗಿಲ್ಲ, ಭಾರತದ ಸಣ್ಣ ಸಣ್ಣ ಪಟ್ಟಣಗಳು ತಂತ್ರಜ್ಞಾನದಲ್ಲಿ ಮುಂದಿದೆ, ಜತೆಗೆ ಇಡೀ ಜಗತ್ತು ಇಂದು ಭಾರತದ ಮೇಲೆ ವಿಶ್ವಾಸವಿಟ್ಟಿದೆ. ಜಗತ್ತನೇ ಸೆಳೆಯುವಂತೆ ಭಾರತ ಬೆಳೆಯುತ್ತಿದೆ. ಜಗತ್ತಿನ ಯಾವುದೇ ರೇಟಿಂಗ್ ಏಜೆನ್ಸಿಗೂ ಭಾರತದ ಬೆಳವಣಿಗೆ ತಡೆಯುವ ಶಕ್ತಿ ಇಲ್ಲ, ಇಂಥ ಅಮೃತ ಕಾಲದಲ್ಲಿ ನಾವಿರುವುದು ನಮ್ಮೆಲ್ಲರ ಅದೃಷ್ಟ, ದೇಶದ ಯುವಕರಿಗೆ ಅವಕಾಶದ ಕೊರತೆ ಇಲ್ಲ, ಅವಕಾಶ ಆಕಾಶದಷ್ಟಿದೆ. ಚೆನ್ನಾಗಿ ಬಳಸಿಕೊಳ್ಳಿ ಎಂದು ಪ್ರಧಾನಿ ಹೇಳಿದರು.
ಇಂದು 77ನೇ ಸ್ವಾತಂತ್ರ್ಯ ಸಂಭ್ರಮ: 10ನೇ ಬಾರಿ ಧ್ವಜರೋಹಣ ನೆರವೇರಿಸಿದ ಪ್ರಧಾನಿ
ಮನುಷ್ಯತ್ವದಿಂದ ದೇಶ ಕೊರೋನಾ ಎದುರಿಸಿ ಬೇರೆ ದೇಶಗಳ ನೆರವಿಗೂ ಬಂತು, ಕೊರೋನಾ ಬಳಿಕ ದೇಶದ ಸ್ಥಾನಮಾನ ಬದಲಾಗಿದೆ. ಇಡೀ ಜಗತ್ತು ಭಾರತವನ್ನು ಮೆಚ್ಚುಗೆ ಹಾಗೂ ಅಚ್ಚರಿಯಿಂದ ನೋಡುತ್ತಿದೆ ಎಂದರು. ಇದೇ ವೇಳೆ ಮಣಿಪುರದ ಹಿಂಸಾಚಾರ ನೆನೆದ ಪ್ರಧಾನಿ, ಅಲ್ಲಿ ಅನೇಕ ಜನ ಜೀವ ಕಳೆದುಕೊಂಡಿದ್ದಾರೆ. ಆದಷ್ಟು ಶೀಘ್ರ ಅಲ್ಲಿನ ಜನ ಆ ಸಂಕಟದಿಂದ ಹೊರಬರಲಿ ಎಂದರು.
ವಂಶ ರಾಜಕಾರಣದ ವೇಳೆಯೂ ಪ್ರಧಾನಿ ವಾಗ್ದಾಳಿ
ಪ್ರಧಾನಿ ಮೋದಿಯವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ವಂಶ ರಾಜಕಾರಣದ ಬಗ್ಗೆಯೂ ಮಾತನಾಡಿದ ಪ್ರಧಾನಿ, ಕುಟುಂಬ ರಾಜಕಾರಣ ನಮ್ಮ ದೇಶವನ್ನು ಹಾಳು ಮಾಡಿದೆ. ಒಂದು ರಾಜಕೀಯ ಪಕ್ಷವು ಕೇವಲ ಒಂದೇ ಕುಟುಂಬದ ಉಸ್ತುವಾರಿಯನ್ನು ಹೇಗೆ ಹೊಂದಲು ಸಾಧ್ಯ, ಅವರಿಗೆ ಕುಟುಂಬದ ಪಕ್ಷ ಕುಟುಂಬದಿಂದ ಕುಟುಂಬಕ್ಕಾಗಿ ಎಂಬುದೇ ಅವರ ಜೀವ ಮಂತ್ರವಾಗಿದೆ ಎಂದು ಪ್ರಧಾನಿ ಟೀಕಿಸಿದರು.
ಇಂದು ತೆಗೆದುಕೊಳ್ಳುವ ನಿರ್ಧಾರ ದೇಶದ ಸಾವಿರ ವರ್ಷದ ಭವಿಷ್ಯ ನಿರ್ಧರಿಸುತ್ತದೆ.
ಇಂದು ತೆಗೆದುಕೊಂಡ ನಿರ್ಧಾರ ಹಾಗೂ ಮಾಡಿದ ಕೆಲಸಗಳು ದೇಶದ ಭವಿಷ್ಯದ ಸಾವಿರ ವರ್ಷ ಹೇಗಿರಲಿದೆ ಎಂಬುದನ್ನು ನಿರ್ಧರಿಸುತ್ತದೆ ಹಾಗೂ ಸಾವಿರ ವರ್ಷಗಳಿಗೆ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.