72 ಲಕ್ಷ ರೂಪಾಯಿ ಜಾಗ್ವಾರ್ ಕಾರಿಗೆ ತಿರಂಗ ಪೈಂಟ್, ಯುವಕನ ಕಾರ್ಯಕ್ಕೆ ಮೆಚ್ಚುಗೆ!
ಜಾಗ್ವಾರ್ ಕಾರಿಗೆ 2 ಲಕ್ಷ ರೂಪಾಯಿ ನೀಡಿ ತಿರಂಗ ಕಲರ್ ಪೈಂಟ್ಸ್ ಮಾಡಿಸಲಾಗಿದೆ. ಯವಕನ ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ದೆಹಲಿ(ಆ.15): ಭಾರತ ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಿಂದ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೀಡಿದ ಹರ್ ಘರ್ ತಿರಂಗ ಅಭಿಯಾನದಿಂದ ದೇಶಾದ್ಯಂತ ತಿರಂಗ ಹಾರಾಡಿದೆ. ಮನೆ ಮನೆಗಳಲ್ಲಿ, ಕಚೇರಿ, ಐತಿಹಾಸಿಕ ಕಟ್ಟಡ, ಸ್ಮಾರಕ, ವಾಹನ ಸೇರಿದಂತೆ ಎಲ್ಲೆಡೆ ತಿರಂಗ ಹಾರಾಡಿದೆ. ಆದರೆ ಯುವಕ ತನ್ನ ಜಾಗ್ವಾರ್ ಕಾರನ್ನು ತಿರಂಗ ಪೈಂಟ್ ಮಾಡಿಸಿಕೊಂಡಿದ್ದಾನೆ. ಸಿದ್ಧಾರ್ಥ್ ದೋಶಿ ತನ್ನ 71.60 ಲಕ್ಷ ರೂಪಾಯಿ ಜಾಗ್ವಾರ್ ಕಾರನ್ನು 2 ಲಕ್ಷ ರೂಪಾಯಿ ನೀಡಿ ಪೈಂಟ್ ಮಾಡಿಸಲಾಗಿದೆ. ಕೇಸರಿ, ಬಿಳಿ ಹಸಿರು ಬಣ್ಣ ಪೈಂಟ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗ ಅಭಿಯಾನಕ್ಕೆ ಬೆಂಬಲ ನೀಡಲು ಈ ರೀತಿ ಮಾಡಿರುವುದಾಗಿ ಹೇಳಿದ್ದಾನೆ. ಸೂರತ್ ಮೂಲದ ಸಿದ್ದಾರ್ಥ್ ದೋಶಿ ತನ್ನ ಕಾರಿಗೆ ತಿರಂಗ ಪೈಂಟ್ಸ್ ಹಾಕಿಸಿಕೊಂಡು ಸೂರತ್‌ನಿಂದ ನೇರವಾಗಿ ದೆಹಲಿ ತಲುಪಿದ್ದಾನೆ. ಬಳಿಕ ಸಂಸತ್ ಮುಂಭಾಗದಲ್ಲಿ ತನ್ನತಿರಂಗ ಕಲರ್ ಕಾರಿನಲ್ಲಿ ತಿರುಗಾಡಿದ್ದಾನೆ.
ಅಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿ ಸಿದ್ದಾರ್ಥ್ ಗುಜರಾತ್‌ನ ಸೂರತ್‌ನಲ್ಲಿ ತಿರಂಗ ಪೈಂಟ್ಸ್ ಮಾಡಿಸಿಕೊಂಡಿದ್ದಾನೆ. ಬಳಿಕ ಸೂರತ್‌ನಿಂದ ದೆಹಲಿಗೆ ಅಂದರೆ 1157 ಕಿಲೋಮೀಟರ್ ತನ್ನ ಜಾಗ್ವಾರ್ ಕಾರಿನಲ್ಲಿ ಪ್ರಯಾಣ ಮಾಡಿದ್ದಾನೆ. ತನ್ನ ಸ್ನೇಹಿತನ ಜೊತೆ ಪ್ರಯಾಣ ಮಾಡಿದ ಸಿದ್ದಾರ್ಥ್ ದಾರಿಯುದ್ದಕ್ಕೂ ತಿರಂಗ ಹಾರಾಡಿಸುತ್ತಾ ಪ್ರಯಾಣ ಮಾಡಿದ್ದಾರೆ. ದೆಹಲಿಯ ಸಂಸತ್ ಭವನದ ಮುಂದೆ ಜಾಗ್ವಾರ್ ಕಾರಿನಲ್ಲಿ ತಿರುಗಾಡಿ ತನ್ನ ಸಂತಸ ಹಂಚಿಕೊಂಡಿದ್ದಾನೆ.
75th Independence Day ತ್ರಿವರ್ಣ ಧ್ವಜದ ರಂಗಿನಲ್ಲಿ ಮುಖೇಶ್ ಅಂಬಾನಿ ಅವರ ಆಂಟಿಲಿಯಾ
ತ್ರಿವರ್ಣ ಧ್ವಜ ಅಭಿಯಾನಕ್ಕೆ ಭಾರಿ ಸ್ಪಂದನೆ
ಹರ್ ಘರ್ ತಿರಂಗಾ ಅಭಿಯಾನಕ್ಕೆ 2ನೇ ದಿನವೂ ರಾಜ್ಯಾದ್ಯಂತ ಅಭೂತಪೂರ್ವ ಸ್ಪಂದನೆ ದೊರೆಯಿತು. ಸರ್ಕಾರಿ ಕಟ್ಟಡ, ಪ್ರಮುಖ ವೃತ್ತಗಳನ್ನು ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಶೃಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಹಲವೆಡೆ ಪಾದಯಾತ್ರೆ, ರಾರಯಲಿ ನಡೆದವು. ಬಳ್ಳಾರಿಯ ಮಿಂಚೇರಿ ಗುಡ್ಡದಲ್ಲಿನ ಬ್ರಿಟಿಷ್ ಕಾಲದ ಬಂಗ್ಲೆಯ ಮುಂಭಾಗದಲ್ಲಿ ಸಚಿವ ಶ್ರೀರಾಮುಲು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ರಾಯಚೂರಿನಲ್ಲಿ 1000 ಅಡಿ, ಅಖಿಲ ಭಾರತ ವಿಶ್ವಹಿಂದೂ ಪರಿಷತ್‌ನಿಂದ ಕೂಡ್ಲಿಗಿಯಲ್ಲಿ 100 ಮೀಟರ್ ಧ್ವಜದ ಮೆರವಣಿಗೆ ನಡೆಯಿತು. ಕೊಟ್ಟೂರು ಬಿಜೆಪಿ ಘಟಕದವರು ಭಾನುವಾರ ಪಟ್ಟಣದಲ್ಲಿ ಬೈಕ್ ರಾರಯಲಿ ನಡೆಸಿದರು. ಕೊಟ್ಟೂರೇಶ್ವರ ದೇಗುಲ, ತುಮಕೂರಿನ ಸಿದ್ಧಗಂಗಾ ಮಠ, ವಿಜಯಪುರದ ಗೋಳಗುಮ್ಮಟಕ್ಕೆ ರಾಷ್ಟ್ರಧ್ವಜದ ಬಣ್ಣಗಳಿಂದ ದೀಪಾಲಂಕಾರ ಮಾಡಲಾಗಿತ್ತು. ಗದಗದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಬೈಕ್ ತಿರಂಗಾ ಯಾತ್ರೆ ಕೈಗೊಂಡರು. ಕಾರವಾರದಲ್ಲಿ 75 ಕಿ.ಮೀ. ಬೈಸಿಕಲ್ ಜಾಥಾ ನಡೆಯಿತು. ದಾವಣಗೆರೆಯಲ್ಲಿ ಭಾರತೀಯ ರೈತ ಮೋರ್ಚಾದಿಂದ ಟ್ರ್ಯಾಕ್ಟರ್ ರಾರಯಲಿ ನಡೆಸಲಾಯಿತು, ಸುಮಾರು 200ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಭಾಗಿಯಾಗಿದ್ದವು.
ಶಿರಸಿಯಲ್ಲಿ 8 ವರ್ಷದ ಬಾಲಕ ಅದ್ವೈತ 75 ಬಾರಿ ತಡೆರಹಿತವಾಗಿ ಹಾರ್ಮೋನಿಯಂನಲ್ಲಿ ರಾಷ್ಟ್ರಗೀತೆ ನುಡಿಸಿ ಗಮನಸೆಳೆದಿದ್ದಾನೆ. ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ನಾನಾ ಭಾಗಗಳಲ್ಲಿ ತಿರಂಗಾ ಯಾತ್ರೆ, ಅಮೃತ ನಡಿಗೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಭಾನುವಾರ ಜರುಗಿದವು.