ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಹಾಗೂ ಇಂಗ್ಲೆಂಡ್ ಮಾಜಿ ನಾಯಕ ಕೇವಿನ್ ಪೀಟರ್‌ಸನ್ ಟ್ವಿಟರ್ ಸಮರ ಶುರುಮಾಡಿದ್ದಾರೆ. ಸದ್ಯ ರೋಹಿತ್ ಶರ್ಮಾ ವಿಚಾರದಲ್ಲಿ ಯುವಿ ಹಾಗೂ ಪೀಟರ್‌ಸನ್ ಸಮರ ಆರಂಭಗೊಂಡಿದೆ.

ಲಂಡನ್(ಜು.03): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಬಾಂಗ್ಲಾದೇಶ ವಿರುದ್ಧ ರೋಹಿತ್ ಶರ್ಮಾ ಸೆಂಚುರಿ ಸಿಡಿಸೋ ಮೂಲಕ ಭಾರತ ಸೆಮೀಸ್‌ಗೆ ಎಂಟ್ರಿ ಕೊಟ್ಟಿತು. ರೋಹಿತ್ ಬ್ಯಾಟಿಂಗ್ ಕುರಿತು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಇಂಗ್ಲೆಂಡ್ ಮಾಜಿ ನಾಯಕ ಕೇವಿನ್ ಪೀಟರ್‌ಸನ್‌ಗೆ ಯುವಿ ತಿರುಗೇಟು ನೀಡಿದ್ದಾರೆ.ಈ ಮೂಲಕ ಇವರ ನಡುವಿನ ಟ್ವಿಟರ್ ಸಮರ ಶುರುವಾಗಿದೆ.

ರೋಹಿತ್ ಶರ್ಮಾ ಸೆಂಚುರಿ ಬಳಿಕ ಯುವರಾಜ್ ಸಿಂಗ್, ಐಸಿಸಿ ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿಯತ್ತ ಹೆಜ್ಜೆಹಾಕುತ್ತಿದ್ದಾರೆ. ಹಿಟ್‌ಮ್ಯಾನ್ ಅದ್ಭುತ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆವಿನ್ ಪೀಟರ್‌ಸನ್ ಇಂಗ್ಲೆಂಡ್ ವಿಶ್ವಕಪ್ ಟ್ರೋಫಿ ಗೆಲ್ಲದಿದ್ದರೆ ಮಾತ್ರ ರೋಹಿತ್‌ಗೆ ಸರಣಿ ಶ್ರೇಷ್ಠ ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪೀಟರ್‌ಸನ್ ಈ ಬಾರಿ ಇಂಗ್ಲೆಂಡ್ ಟ್ರೋಫಿ ಗೆಲ್ಲುತ್ತೆ, ಹೀಗಾಗಿ ರೋಹಿತ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಸಿಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದರು.

Scroll to load tweet…

ಪೀಟರ್‌ಸನ್ ಟ್ವೀಟ್‌ಗೆ ತಿರುಗೇಟು ನೀಡಿದ ಯುವಿ, ಮೊದಲು ಇಂಗ್ಲೆಂಡ್ ಫೈನಲ್‌ಗೆ ಅರ್ಹತೆ ಪಡೆಯಲಿ, ಅಮೇಲೆ ಗೆಲುವಿನ ಮಾತು. ನಾನು ಸರಣಿ ಶ್ರೇಷ್ಠ ಪ್ರಶಸ್ತಿ ಕುರಿತು ಮಾತನಾಡುತ್ತಿದ್ದೇನೆ, ಪ್ರಶಸ್ತಿ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಯುವಿ ತಿರುಗೇಟಿನಿಂದ ವಿಚಲಿತರಾದ ಕೇವಿನ್ ಪೀಟರ್‌ಸನ್, ಭಾರತ ಅರ್ಹತೆ ಪಡೆಯುವು ನಿಶ್ಚಿತ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…