ಸೌಥಾಂಪ್ಟನ್(ಜೂ.22): ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾ ಇದೀಗ ಒಂದು ಪಂದ್ಯ ಗೆಲ್ಲದ ಅಫ್ಘಾನಿಸ್ತಾನ ವಿರುದ್ಧ ರನ್ ಗಳಿಸಲು ಪರದಾಡಿದೆ. ಅಫ್ಘಾನ್ ಕರಾರುವಕ್ ದಾಳಿಗೆ ಭಾರತ ವಿಕೆಟ್ ಉಳಿಸಿಕೊಳ್ಳಲು ಹೆಚ್ಚು ಗಮನ ನೀಡಿತೇ ಹೊರತು ರನ್ ಗಳಿಸೋ ಪ್ರಯತ್ನಕ್ಕೆ ಮುಂದಾಗಲಿಲ್ಲ.  ಹೀಗಾಗಿ ಭಾರತ 8 ವಿಕೆಟ್ ನಷ್ಟಕ್ಕೆ 224 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ 7 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಕೇವಲ 1 ರನ್ ಸಿಡಿಸಿ ಔಟಾದರು. ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ 58 ರನ್ ಜೊತೆಯಾಟ ನೀಡಿದರು. ರಾಹುಲ್ 30 ರನ್ ಸಿಡಿಸಿ ನಿರ್ಗಮಿಸಿದರು. 

ನಾಯಕ ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ವಿಜಯ್ ಶಂಕರ್ 29 ರನ್ ಸಿಡಿಸಿ ನಿರ್ಗಮಿಸಿದರು. 67 ರನ್ ಸಿಡಿಸಿದ ಕೊಹ್ಲಿ ವಿಕೆಟ್ ಪತನದೊಂದಿಗೆ ಭಾರತ ರನ್ ರೇಟ್ ಮತ್ತೆ ಕುಸಿತಗೊಂಡಿತು. ಎಂ.ಎಸ್.ಧೋನಿ ಹಾಗೂ ಕೇದಾರ್ ಜಾಧವ್ ಜೊತೆಯಾಟ ನೀಡಿದರೂ ರನ್ ವೇಗ ಹೆಚ್ಚಾಗಲಿಲ್ಲ. ಧೋನಿ 28 ರನ್ ಸಿಡಿಸಿ ಔಟಾದರು. 

ಹಾರ್ದಿಕ್ ಪಾಂಡ್ಯ ಕೂಡ ನೆರವಾಗಲಿಲ್ಲ. ಮೊಹಮ್ಮದ್ ಶಮಿ 1 ರನ್ ಸಿಡಿಸಿ ನಿರ್ಗಮಿಸಿದರು. ಕೇದಾರ್ ಜಾಧವ್ 52 ರನ್ ಸಿಡಿಸಿ ಔಟಾದರು. ಈ ಮೂಲಕ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 225 ರನ್ ಸಿಡಿಸಿತು.