ಲಾರ್ಡ್ಸ್(ಜು.14): ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಬ್ಬರಿಸೋ ನಿರೀಕ್ಷೆಯಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ  ಹಿನ್ನಡೆಯಾಗಿದೆ. ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಆತಿಥೇಯ ಇಂಗ್ಲೆಂಡ್ ದಾಳಿಗೆ ಕುಸಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 241 ರನ್ ಸಿಡಿಸಿದೆ. ಇದೀಗ ನ್ಯೂಜಿಲೆಂಡ್ ಈ ಮೊತ್ತವನ್ನು ಡಿಫೆಂಡ್ ಮಾಡಿ ಪ್ರಶಸ್ತಿ ಗೆಲ್ಲುತ್ತಾ? ಅಥವಾ ಇಂಗ್ಲೆಂಡ್ 242 ರನ್ ಚೇಸ್ ಮಾಡುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಎಂದಿನಂತೆ ಆರಂಭ ಪಡೆಯಲಿಲ್ಲ. ಮಾರ್ಟಿನ್ ಗಪ್ಟಿಲ್ 19 ರನ್ ಸಿಡಿಸಿ ಔಟಾದರು. ಹೆನ್ರಿ ನಿಕೋಲಸ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಜೊತೆಯಾಟದಿಂದ ನ್ಯೂಜಿಲೆಂಡ್ ಉಸಿರಾಡಿತು. ವಿಲಿಯಮ್ಸನ್ 30 ರನ್ ಸಿಡಿಸಿ ಔಟಾದರು.

ಹಾಫ್ ಸೆಂಚುರಿ ಸಿಡಿಸಿದ ನಿಕೋಲಸ್ 55 ರನ್‌ಗಳಿಸಿ ಔಟಾದರು. ಇತ್ತ ಇನ್‌ಫಾರ್ಮ್ ಬ್ಯಾಟ್ಸ್‌ಮನ್ ರಾಸ್ ಟೇಲರ್ 15 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರೆ, ಜೇಮ್ಸ್ ನೀಶನ್ 19 ರನ್‌ಗೆ ಔಟಾದರು. ಟಾಮ್ ಲಾಥಮ್ ಹಾಗೂ ಕೊಲಿನ್ ಡೆ ಗ್ರ್ಯಾಂಡ್ ಹೊಮ್ಮೆ ಬ್ಯಾಟಿಂಗ್ ನಿಂದ ಇಂಗ್ಲೆಂಡ್ 200 ರನ್ ಗಡಿ ದಾಟಿತು. ಗ್ರ್ಯಾಂಡ್‌ಹೊಮ್ಮೆ 16 ರನ್ ಗಳಿಸಿ ನಿರ್ಗಮಿಸಿದರು. ಟಾಮ್ ಲಾಥಮ್ 47 ರನ್ ಸಿಡಿಸಿ ಔಟಾದರು.  ಅಂತಿಮವಾಗಿ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 241 ರನ್ ಸಿಡಿಸಿತು.