ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಲೀಡ್ಸ್‌[ಜು.04]: ವಿಶ್ವಕಪ್ ಟೂರ್ನಿಯ 42ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.

ವೆಸ್ಟ್ ಇಂಡೀಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಎವಿನ್ ಲೆವೀಸ್ ಹಾಗೂ ಕೀಮರ್ ರೋಚ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಆಫ್ಘಾನಿಸ್ತಾನ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದ್ದು, ದೌಲತ್ ಜದ್ರಾನ್, ಸಯ್ಯದ್ ಶಿರ್ಜಾದ್ ತಂಡ ಕೂಡಿಕೊಂಡಿದ್ದಾರೆ.

ಈಗಾಗಲೇ ಸೆಮೀಸ್ ಪ್ರವೇಶಿಸುವ ಅವಕಾಶ ಕೈಚೆಲ್ಲಿರುವ ಉಭಯ ತಂಡಗಳ ಪಾಲಿಗೆ ಇದು ಪ್ರತಿಷ್ಠೆಯ ಕದನವಾಗಿದ್ದು, ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನಕ್ಕೆ ಗುಡ್ ಹೇಳಲು ಎದುರು ನೋಡುತ್ತಿವೆ. ಆಫ್ಘಾನಿಸ್ತಾನ ಆಡಿದ 8 ಪಂದ್ಯಗಳಲ್ಲೂ ಸೋಲು ಕಂಡಿದ್ದು, ಕೊನೆಯ ಪಂದ್ಯದಲ್ಲಾದರೂ ಗೆದ್ದು ವಿಶ್ವಕಪ್’ಗೆ ಗುಡ್’ಬೈ ಹೇಳಲು ಗುಲ್ಬದ್ದೀನ್ ನೈಬ್ ಪಡೆ ತುದಿಗಾಲಿನಲ್ಲಿ ನಿಂತಿದೆ. ಇನ್ನು ವೆಸ್ಟ್ ಇಂಡೀಸ್ ತಂಡದ ಆಡಿದ 8 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದು, ಆರು ಪಂದ್ಯಗಳಲ್ಲಿ ಸೋತು ಒಟ್ಟು ಮೂರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. 

ಕೆರಿಬಿಯನ್ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ ಪಾಲಿಗೆ ಕೊನೆಯ ಏಕದಿನ ವಿಶ್ವಕಪ್’ನ ಕೊನೆಯ ಪಂದ್ಯ ಇದಾಗಿದ್ದು, ಅಭಿಮಾನಿಗಳನ್ನು ರಂಜಿಸುವ ಸಾಧ್ಯತೆಯಿದೆ.

ತಂಡಗಳು ಹೀಗಿವೆ:
ಆಫ್ಘಾನಿಸ್ತಾನ:

ವೆಸ್ಟ್ ಇಂಡೀಸ್: