ಚೆಸ್ಟರ್ ಲೆ ಸ್ಟ್ರೀಟ್(ಜು.01): ವಿಶ್ವಕಪ್ ಟೂರ್ನಿಯ 39ನೇ ಲೀಗ್ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸೆಮಿಫೈನಲ್ ಆಸೆ ಜೀವಂತವಾಗಿರಬೇಕಾದರೆ ಶ್ರೀಲಂಕಾ ಈ ಪಂದ್ಯವನ್ನು ಗೆಲ್ಲಲೇಬೇಕು. ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾ ಟಾಸ್ ಸೋತಿಗೆ. ಟಾಸ್ ಗೆದ್ದಿರುವ ವಿಂಡೀಸ್ ಲಂಕಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.

 

ಶ್ರೀಲಂಕಾ ಆಡಿರೋ 7 ಪಂದ್ಯದಿಂದ 2 ಗೆಲುವು ಸಾಧಿಸಿದೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಲಂಕಾಗೆ ಗೆಲುವಿನ ಜೊತೆಗೆ ಅದೃಷ್ಠ  ಕೂಡ  ಕೈಹಿಡಿದರೆ ಮಾತ್ರ ಸೆಮೀಫೈನಲ್ ಪ್ರವೇಶ ಸಿಗಲಿದೆ. ಈಗಾಗಲೇ  ಟೂರ್ನಿಯಿಂದ ಹೊರಬಿದ್ದಿರುವ ವೆಸ್ಟ್ ಇಂಡೀಸ್ ತಂಡ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಹೋರಾಟ ನಡೆಸಲಿದೆ.