ಟೌಂಟನ್(ಜೂ.17): ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅಬ್ಬರಿಸಿದೆ. ಶೈ ಹೋಪ್ 96 ರನ್, ಇವಿನ್ ಲಿವೀಸ್ ಹಾಗೂ ಶಿಮ್ರೊನ್ ಹೆಟ್ಮೆಯರ್ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ 7 ವಿಕೆಟ್ ನಷ್ಟಕ್ಕೆ 321 ರನ್ ಸಿಡಿಸಿದೆ.  

ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ ಆರಂಭದಲ್ಲೇ ಕ್ರಿಸ್ ಗೇಲ್ ವಿಕೆಟ್ ಕಳೆದುಕೊಂಡಿತು. ಗೇಲ ಶೂನ್ಯಕ್ಕೆ ಔಟಾದರು. ಇವಿನ್ ಲಿವಿಸ್ ಹಾಗೂ ಶೈ ಹೋಪ್ ಬಾಂಗ್ಲಾ ಬೌಲರ್‌ಗಳಿಗೆ ತಿರುಗೇಟು ನೀಡಿದರು. ಲಿವಿಸ್ 70 ರನ್ ಸಿಡಿಸಿ ಔಡಾದರು. ಆದರೆ ಶೈ ಹೋಪ್ ಅಬ್ಬರ ಮುಂದುವರಿಸಿದರು.

ನೀಕೋಲಸ್ ಪೂರ್ 25 ರನ್ ಸಿಡಿಸಿದರೆ, ಶಿಮ್ರೊನ್ ಹೆಟ್ಮೆಯರ್ 50 ರನ್ ಕಾಣಿಕೆ ನೀಡಿದರು. ಆ್ಯಂಡ್ರೆ ರಸೆಲ್ ಡಕೌಟ್ ಆದರೆ ನಾಯಕ ಜೇಸನ್ ಹೋಲ್ಡರ್ 33 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಶೈ ಹೋಪ್  96 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 4 ರನ್‌ಗಳಿಂದ  ಶತಕ ವಂಚಿತರಾದರು.  ಡರೆನ್ ಬ್ರಾವೋ 19 ರನ್ ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 321 ರನ್ ಸಿಡಿಸಿತು.