ವಿಶ್ವಕಪ್ ಟೂರ್ನಿಯ ಪ್ರತಿಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಬೆಂಗಳೂರು[ಜು.04]: ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೆ ಬೇಸತ್ತಿರುವ ಅಂಬಟಿ ರಾಯುಡು ಬುಧವಾರವಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್ ಗೆ ದಿಢೀರ್ ಗುಡ್ ಬೈ ಹೇಳಿದ್ದರು. 

ಕಳೆದ ಅಕ್ಟೋಬರ್’ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವಿಶ್ವಕಪ್ ಟೂರ್ನಿಯಲ್ಲಿ ರಾಯುಡು ನಂ.4 ಸ್ಥಾನದಲ್ಲಿ ಆಡಲಿದ್ದಾರೆ ಎಂದು ಆತ್ಮವಿಶ್ವಾಸದಿಂದಲೇ ಹೇಳಿದ್ದರು. ಆದರೆ ಏಪ್ರಿಲ್ ವೇಳೆಗಾಗಲೇ ಪರಿಸ್ಥಿತಿ ಬದಲಾಗಿತ್ತು. ರಾಯುಡು ಸ್ಥಾನಕ್ಕೆ ವಿಜಯ್ ಶಂಕರ್ ಆಯ್ಕೆಯಾಗಿದ್ದರು.  ಇನ್ನು ವಿಶ್ವಕಪ್ ಆರಂಭವಾಗಿ ಕೆಲವೇ ದಿನಗಳಲ್ಲಿ ಶಿಖರ್ ಧವನ್, ಆ ಬಳಿಕ ವಿಜಯ್ ಶಂಕರ್ ಟೀಂ ಇಂಡಿಯಾದಿಂದ ಹೊರಬಿದ್ದರೂ ಅಂಬಟಿ ರಾಯುಡುಗೆ ಕರೆ ಬರಲಿಲ್ಲ. ಬದಲಾಗಿ ರಿಷಭ್ ಪಂತ್ ಹಾಗೂ ಮಯಾಂಕ್ ಅಗರ್‌ವಾಲ್’ಗೆ ಅವಕಾಶ ಸಿಕ್ಕಿತು. ಪದೇ ಪದೇ ತಂಡದಿಂದ ನಿರ್ಲಕ್ಷದಿಂದ ಬೇಸತ್ತ ರಾಯುಡು ಕೊನೆಗೂ ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 

ಈ-ಮೇಲ್ ಮೂಲಕ ಬಿಸಿಸಿಐಗೆ ತಮ್ಮ ನಿವೃತ್ತಿ ಪತ್ರ ರವಾನಿಸಿದ ರಾಯುಡು, ಟೀಂ ಇಂಡಿಯಾ ನಾಯಕರಾದ ಎಂ.ಎಸ್ ಧೋನಿ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಧನ್ಯವಾದ ಅರ್ಪಿಸಿದ್ದಾರೆ. ಅದರಲ್ಲೂ ತಮ್ಮ ವೇತ್ತಿಜೀವನದುದ್ಧಕ್ಕೂ ತಮ್ಮ ಮೇಲೆ ನಂಬಿಕೆಯಿಟ್ಟ ನಾಯಕ ವಿರಾಟ್ ಕೊಹ್ಲಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.

ರಾಯುಡು ವಿದಾಯಕ್ಕೆ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಶುಭಕೋರಿದ್ದಾರೆ. ಅದೇ ರೀತಿ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಹೈದರಾಬಾದ್ ಕ್ರಿಕೆಟಿಗನಿಗೆ ಶುಭ ಕೋರಿದ್ದಾರೆ. 

’ಮುಂದೆ ಒಳ್ಳೆಯದಾಗಲಿ ಅಂಬಟಿ. ನೀವೊಬ್ಬ ಉತ್ತಮ ವ್ಯಕ್ತಿ[ಯು ಆರ್ ಎ ಟಾಪ್ ಮ್ಯಾನ್] ಎಂದು ಟ್ವೀಟ್ ಮಾಡಿದ್ದಾರೆ.

ವಿರಾಟ್ ಟ್ವೀಟ್ ಮಾಡಿದ ಕೆಲಹೊತ್ತಿನಲ್ಲೇ ಹಲವು ಟ್ವಿಟರಿಗರು ವಿರಾಟ್ ಕೊಹ್ಲಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ವೇಳೆ ರಾಯುಡು ಅವರನ್ನು ವಿಶ್ವಕಪ್’ಗೆ ಆಯ್ಕೆ ಮಾಡಬಾರದು ಎಂದಿದ್ದರೆ ಮತ್ತೇಕೆ ಕಳೆದೆರಡು ವರ್ಷಗಳಿಂದ ಆಡಿಸಲಾಯಿತು. ನೀವೇ ಹೇಳಿದಂತೆ ಐಪಿಎಲ್ ಫಾರ್ಮ್ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಆಯ್ಕೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದ್ದಿರಿ. ಆದರೆ ಆಗಿದ್ದೇನು ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು, ಅಣ್ಣಾ ನೀವೆಷ್ಟು ಡ್ರಾಮಾ ಮಾಡ್ತೀರಾ ಎಂದು ಕಾಲೆಳೆದಿದ್ದಾರೆ. 

ಟ್ವಿಟರಿಗರು ವಿರಾಟ್ ಗೆ ಕ್ಲಾಸ್ ತೆಗೆದುಕೊಂಡ ಪರಿಯಿದು.