ವಿಶ್ವಕಪ್ ಪಂದ್ಯದ ಪ್ರತಿಕ್ಷಣದ ಸ್ಕೋರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

ಬರ್ಮಿಂಗ್’ಹ್ಯಾಮ್[ಜೂ.29]: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದ್ದು, ನಾಯಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಜೆರ್ಸಿ ಬಗ್ಗೆ ತುಟಿ ಬಿಚ್ಚಿದ್ದಾರೆ.

ವಿರೋಧದ ನಡುವೆ ಟೀಂ ಇಂಡಿಯಾ ಕೇಸರಿ ಜರ್ನಿ ಅನಾವರಣ!

ಜೆರ್ಸಿ ನನಗೆ ನಿಜಕ್ಕೂ ತುಂಬಾನೆ ಇಷ್ಟವಾಯಿತು. ನೋಡುವುದಕ್ಕೂ ಸುಂದರವಾಗಿದೆ. ನಾನು ಈ ಜೆರ್ಸಿಗೆ 10ಕ್ಕೆ 8 ಅಂಕ ನೀಡುತ್ತೇನೆಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಇಂಗ್ಲೆಂಡ್ ಹಾಗೂ ಭಾರತದ ಜೆರ್ಸಿ ಬಣ್ಣ ಒಂದೇ ಆಗಿರುವುದರಿಂದ ಭಾರತ ತನ್ನ ತವರಿನಾಚೆಯ ಪಂದ್ಯದಲ್ಲಿ ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ.

ಟೀಂ ಇಂಡಿಯಾ ಆರೇಂಜ್ ಜರ್ಸಿ-ಟ್ವಿಟರ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ!

ಇಂಗ್ಲೆಂಡ್ ಪ್ರದರ್ಶನದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ತವರಿನ ಲಾಭ ಬಳಸಿಕೊಂಡು ಇಂಗ್ಲೆಂಡ್ ಭರ್ಜರಿ ಪ್ರದರ್ಶನ ತೋರಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಾನು ಈ ಮೊದಲೇ ಹೇಳಿದಂತೆ ತವರಿನಲ್ಲಿ ಆಡುವಾಗ ಉಂಟಾಗುವ ಒತ್ತಡ ತಂಡದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ ಎಂದಿದ್ದಾರೆ.  

ಭಾರತ-ಇಂಗ್ಲೆಂಡ್ ನಡುವಿನ ಪಂದ್ಯವು ಜೂನ್ 30ರಂದು ಬರ್ಮಿಂಗ್ ಹ್ಯಾಮ್’ನ ಎಡ್ಜ್ ಬಾಸ್ಟನ್ ಮೈದಾನದಲ್ಲಿ ನಡೆಯಲಿದ್ದು, ಇಂಗ್ಲೆಂಡ್ ಪಾಲಿಗೆ ಸೆಮಿಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿದೆ.