ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಇಲ್ಲಿದೆ.

ಭಾರತ vs ವೆಸ್ಟ್ ಇಂಡೀಸ್ ಸ್ಕೋರ್ ಎಷ್ಟು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮ್ಯಾಂಚೆಸ್ಟರ್(ಜೂ.27): ವಿಶ್ವಕಪ್ ಟೂರ್ನಿಯ 34ನೇ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾ ಯಾವುದೇ ಬದಲಾವಣೆ ಮಾಡಿಲ್ಲ. ಇತ್ತ ವೆಸ್ಟ್ ಇಂಡೀಸ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ.

Scroll to load tweet…

ಟೀಂ ಇಂಡಿಯಾ ಆಡಿದ 5 ಪಂದ್ಯಗಳಿಂದ 4 ಗೆಲುವು ಸಾಧಿಸಿ 9 ಅಂಕಪ ಸಂಪಾದಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇತ್ತ ವೆಸ್ಟ್ ಇಂಡೀಸ್ ಆಡಿದ 6ರಲ್ಲಿ ಕೇವಲ 1 ಗೆಲುವು 4 ಸೋಲಿನೊಂದಿಗೆ 3 ಅಂಕ ಸಂಪಾದಿಸಿದೆ. ಈ ಮೂಲಕ 8ನೇ ಸ್ಥಾನದಲ್ಲಿದೆ. 

Scroll to load tweet…