ಲಂಡನ್(ಜೂ.12): ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೆ ಸಜ್ಜಾಗಿರುವ ಟೀಂ ಇಂಡಿಯಾ ಅಭ್ಯಾಸದ ನಡುವೆ ರಿಲಾಕ್ಸ್ ಮೂಡ್‌ಗೆ ಜಾರಿತ್ತು. ಆರಂಭಿಕ 2 ಪಂದ್ಯ ಗೆದ್ದು 3ನೇ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದ ಕೊಹ್ಲಿ ಬಾಯ್ಸ್, ಬಿಡುವಿನ ವೇಳೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರ ವೀಕ್ಷಿಸಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಭಾರತ್ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಿದೆ. ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್‌ನಲ್ಲಿರುವ ಟೀಂ ಇಂಡಿಯಾ, ಭಾರತ್ ಚಿತ್ರ ವೀಕ್ಷಿಸಿದೆ. ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಎಂ.ಎಸ್.ಧೋನಿ, ಕೇದಾರ್ ಜಾಧವ್, ಗಾಯಗೊಂಡಿರುವ ಶಿಖರ್ ಧವನ್ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 
 
 
 
 
 
 
 
 
 
 
 
 

BHARAT KI TEAM ❤️BHARAT MOVIE KE BAAD 🎬 @beingsalmankhan @katrinakaif @atulreellife @bharat_thefilm

A post shared by Kedar Jadhav (@kedarjadhavofficial) on Jun 11, 2019 at 12:40pm PDT

 

ಚಿತ್ರ ನೋಡಿದ ಬಳಿಕ ಫೋಟೋ ಕ್ಲಿಕ್ಕಿಸಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತ, ಭಾರತ್ ಚಿತ್ರ ವೀಕ್ಷಿಸಿದ ಬಳಿಕ ಎಂದು ಕೇದಾರ್ ಪೋಸ್ಟ್ ಹಾಕಿದ್ದಾರೆ. ಕೇದಾರ್ ರೋಲ್ ಮಾಡೆಲ್ ಸಲ್ಮಾನ್ ಖಾನ್ ಈ ಚಿತ್ರಕ್ಕೆ ಲೈಕ್ ಮಾಡಿ ಧನ್ಯವಾದ ಹೇಳಿದ್ದಾರೆ.