ಮ್ಯಾಂಚೆಸ್ಟರ್[ಜೂ.16]: ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ-ಪಾಕಿಸ್ತಾನ ನಡುವಿನ ರೋಚಕ ಪಂದ್ಯಕ್ಕೆ ಮ್ಯಾಂಚೆಸ್ಟರ್’ನ ಓಲ್ಡ್ ಟ್ರಾಫೋರ್ಡ್ ಮೈದಾನ ವೇದಿಕೆ ಒದಗಿಸಿದೆ. ಈ ಪಂದ್ಯವನ್ನೂ ಜಯಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಸತತ 7ನೇ ಗೆಲುವಿನ ಮೇಲೆ ಟೀಂ ಇಂಡಿಯಾ ಕಣ್ಣಿಟ್ಟಿದೆ.

ಈಗಾಗಲೇ ಮೊದಲೆರಡು ಪಂದ್ಯ ಜಯಿಸಿ ಆತ್ಮವಿಶ್ವಾಸದಿಂದ ಬೀಗಿತ್ತಿರುವ ಭಾರತ, ನ್ಯೂಜಿಲೆಂಡ್ ವಿರುದ್ಧದ ಪಂದ್ಯವು ಮಳೆಯಿಂದ ರದ್ದಾಗಿದ್ದರಿಂದ ಒಂದು ಅಂಕ ಪಡೆದುಕೊಂಡಿತ್ತು. ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿ ಮಿಂಚಿದ್ದ ಧವನ್ ಗಾಯದ ಸಮಸ್ಯೆಯಿಮದಾಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ತಂಡದಲ್ಲಿ ಒಂದು ಬದಲಾವಣೆಯಾಗಲಿದೆ.

ಇಂಡೋ-ಪಾಕ್ ಕದನ: ಈ ಐವರು ಫೈಟ್ ನೋಡಲು ಮರೆಯದಿರಿ..!

ಕನ್ನಡಿಗ ಕೆ.ಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ನಾಲ್ಕನೇ ಕ್ರಮಾಂಕದಲ್ಲಿ ಯುವ ಆಲ್ರೌಂಡರ್ ವಿಜಯ್ ಶಂಕರ್, ಇಲ್ಲವೇ ದಿನೇಶ್ ಕಾರ್ತಿಕ್ ಕಣಕ್ಕಿಳಿಯುವ ಸಾಧ್ಯತೆಯಿದೆ

ಸುವರ್ಣ ನ್ಯೂಸ್ ಪಟ್ಟಿ ಮಾಡಿದ ಸಂಭಾವ್ಯ ಟೀಂ ಇಂಡಿಯಾ ಹೀಗಿದೆ ನೋಡಿ...
ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ವಿಜಯ್‌ ಶಂಕರ್‌/ದಿನೇಶ್ ಕಾರ್ತಿಕ್, ಎಂ.ಎಸ್‌.ಧೋನಿ, ಹಾರ್ದಿಕ್‌ ಪಾಂಡ್ಯ, ಕೇದಾರ್‌ ಜಾಧವ್‌, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಜಸ್ಪ್ರೀತ್‌ ಬುಮ್ರಾ