ಓವಲ್(ಜೂ.15): ವಿಶ್ವಕಪ್ ಟೂರ್ನಿಯ 20ನೇ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.ಎರಡೂ ತಂಡದಲ್ಲಿ ಬದಲಾವಣೆ ಮಾಡಲಾಗಿದೆ.

 

ಆಸ್ಟ್ರೇಲಿಯಾ ಆಡಿದ 4 ಪಂದ್ಯದಲ್ಲಿ 3 ಗೆಲುವು ಹಾಗೂ 1 ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಇತ್ತ ಶ್ರೀಲಂಕಾ 4 ಪಂದ್ಯದಲ್ಲಿ 1 ಸೋಲು 1 ಗೆಲುವು ಹಾಗೂ 2 ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ 4 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.