ವಿಶ್ವಕಪ್ ಟೂರ್ನಿಯ ಪ್ರತಿಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ 

ಚೆಸ್ಟರ್‌ ಲೆ ಸ್ಟ್ರೀಟ್‌[ಜು.01]: ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ಗೇರುವ ಕನಸು ಕಾಣುತ್ತಿರುವ ಶ್ರೀಲಂಕಾ ಸೋಮವಾರ ವೆಸ್ಟ್‌ಇಂಡೀಸ್‌ ವಿರುದ್ಧ ಸೆಣಸಲಿದ್ದು, ತಂಡದ ಪಾಲಿಗಿದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. 

ಲಂಕಾ ಬಾಕಿ ಇರುವ ಎರಡೂ ಪಂದ್ಯಗಳಲ್ಲಿ ಗೆದ್ದು, ಇತರೆ ಪಂದ್ಯಗಳ ಫಲಿತಾಂಶ ತನ್ನ ಪರವಾಗಿ ಬರುವಂತೆ ಪ್ರಾರ್ಥಿಸಬೇಕಿದೆ. ಶ್ರೀಲಂಕಾ ಆಡಿರುವ 7 ಪಂದ್ಯಗಳಲ್ಲಿ 2 ಗೆಲುವು ಹಾಗೂ ಮೂರು ಸೋಲು ಮತ್ತು 2 ಪಂದ್ಯಗಳು ರದ್ದಾಗಿದ್ದರಿಂದ ಒಟ್ಟಾರೆ 6 ಅಂಕಗಳಿಸಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. 

ಇದೀಗ ಇಂದಿನ ಪಂದ್ಯದಲ್ಲಿ ಗೆಲ್ಲುವುದು ಮಾತ್ರವಲ್ಲದೇ ಲಂಕಾ, ಭಾರತ ವಿರುದ್ಧವೂ ಭಾರೀ ಅಂತರದಲ್ಲಿ ಜಯಿಸಬೇಕಿದೆ. ಇದಷ್ಟೇ ಅಲ್ಲದೇ ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಂದಿನ ಪಂದ್ಯಗಳನ್ನು ಗೆಲ್ಲಬಾರದು. ಹೀಗಾದರೆ ಮಾತ್ರ ಲಂಕಾ ಸೆಮೀಸ್ ಪ್ರವೇಶಿಸುವ ಸಾಧ್ಯತೆಯಿದೆ.   

ಒಟ್ಟು ಮುಖಾಮುಖಿ: 56

ಶ್ರೀಲಂಕಾ: 25

ವಿಂಡೀಸ್‌: 28

ಫಲಿತಾಂಶವಿಲ್ಲ: 03

ವಿಶ್ವಕಪ್‌ನಲ್ಲಿ ಲಂಕಾ vs ವಿಂಡೀಸ್‌

ಪಂದ್ಯ: 06

ಶ್ರೀಲಂಕಾ: 02

ವಿಂಡೀಸ್‌: 04

ಸಂಭವನೀಯ ಆಟಗಾರರ ಪಟ್ಟಿ

ಲಂಕಾ: ಕರುಣರತ್ನೆ(ನಾಯಕ), ಕುಸಾಲ್‌ ಪೆರೇರಾ, ಆವಿಷ್ಕಾ, ಕುಸಾಲ್‌ ಮೆಂಡಿಸ್‌, ಮ್ಯಾಥ್ಯೂಸ್‌, ಧನಂಜಯ, ಜೀವನ್‌, ತಿಸಾರ, ಉಡಾನ, ಲಕ್ಮಲ್‌, ಮಾಲಿಂಗ.

ವಿಂಡೀಸ್‌: ಗೇಲ್‌, ಆ್ಯಂಬ್ರಿಸ್‌, ಹೋಪ್‌, ಪೂರನ್‌, ಹೆಟ್ಮೇಯರ್‌, ಹೋಲ್ಡರ್‌ (ನಾಯಕ), ಬ್ರಾಥ್‌ವೇಟ್‌, ಆ್ಯಲನ್‌, ರೋಚ್‌, ಕಾಟ್ರೆಲ್‌, ಒಶೇನ್‌ ಥಾಮಸ್‌.

ಸ್ಥಳ: ಚೆಸ್ಟರ್‌ ಲೆ ಸ್ಟ್ರೀಟ್‌ 
ಆರಂಭ: ಮಧ್ಯಾಹ್ನ 3ಕ್ಕೆ 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1