ಸೌತ್ ಆಫ್ರಿಕಾ vs ಶ್ರೀಲಂಕಾ ಸ್ಕೋರ್ ಎಷ್ಟು?

ಚೆಸ್ಟರ್ ಲೆ-ಸ್ಟ್ರೀಟ್(ಜೂ.28): ವಿಶ್ವಕಪ್ ಟೂರ್ನಿಯ 35 ಲೀಗ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಸೌತ್ ಆಫ್ರಿಕಾ, ಮತ್ತೊಂದೆಡೆ ಸೆಮಿಫೈನಲ್ ಆಸೆ ಜೀವಂತವಾಗಿರಿಸಿರುವ ಶ್ರೀಲಂಕಾ ನಡುವಿನ ಹೋರಾಟ ತೀವ್ರ ಕುತೂಹ ಕೆರಳಿಸಿದೆ. ಟಾಸ್ ಗೆದ್ದಿರುವ ಸೌತ್ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಸೌತ್ ಆಫ್ರಿಕಾ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ.ಲುಂಗಿ ಎನ್‌ಗಿಡಿ  ಹಾಗೂ ಡೇವಿಡ್ ಮಿಲ್ಲರ್ ಬದಲು, ಡ್ವೆಯ್ನಿ ಪ್ರೆಟ್ರೋರಿಯಸ್ ಹಾಗೂ ಜೆಪಿ ಡುಮಿನಿ ತಂಡ ಸೇರಿಕೊಂಡಿದ್ದಾರೆ. ಇತ್ತ ಲಂಕಾ ತಂಡದಲ್ಲಿ ನುವಾನ್ ಪ್ರದೀಪ್ ಬದಲು ಸುರಂಗ ಲಕ್ಮಾಲ್ ತಂಡ ಸೇರಿಕೊಂಡಿದ್ದಾರೆ.

 

ಶ್ರೀಲಂಕಾ ತಂಡ 6 ಪಂದ್ಯದಲ್ಲಿ 2 ಗೆಲುವು, 2 ಸೋಲು ಹಾಗೂ 2 ಪಂದ್ಯ ಫಲಿತಾಂಶ ಕಾಣದೆ ರದ್ದಾಗಿದೆ. ಹೀಗಾಗಿ 6 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಇತ್ತ ಸೌತ್ ಆಫ್ರಿಕಾ 7 ಪಂದ್ಯದಲ್ಲಿ ಕೇವಲ 1 ಗೆಲುವು ಸಾಧಿಸಿ 3 ಅಂಕ ಸಂಪಾದಿಸೋ ಮೂಲಕ 9ನೇ ಸ್ಥಾನದಲ್ಲಿದೆ.