ಮ್ಯಾಂಚೆಸ್ಟರ್(ಜು.06): ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಮುಖಾಮುಖಿಯಾಗುತ್ತಿದೆ. ಈ ಪಂದ್ಯದೊಂದಿಗೆ  ವಿಶ್ವಕಪ್ ಲೀಗ್ ಪಂದ್ಯ ಮುಕ್ತಾಯಗೊಳ್ಳಲಿದೆ. ಅಂತಿಮ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸೌತ್ ಆಫ್ರಿಕಾ  ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಆಸ್ಟ್ರೇಲಿಯಾ ಈಗಾಗಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿದೆ. ಇತ್ತ ಸೌತ್ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಈ ಗೆಲುವು ಆಸ್ಟ್ರೇಲಿಯಾಗೆ ಪ್ರಮುಖವಾಗಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಈ ಗೆಲುವು ಮುಖ್ಯವಾಗಿದೆ. ಇಷ್ಟೇ ಅಲ್ಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿರುವ ಆಸಿಸ್, ಸೌತ್ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿದರೆ, ಸೆಮೀಸ್ ಎದುರಾಳಿ ಇಂಗ್ಲೆಂಡ್ ತಂಡವಾಗಿ ಬದಲಾಗಲಿದೆ.