ಬರ್ಮಿಂಗ್‌ಹ್ಯಾಮ್(ಜೂ.19): ಸೌತ್ಆಫ್ರಿಕಾ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಮೈದಾನ ಒದ್ದೆಯಾಗಿದ್ದ ಕಾರಣ ವಿಳಂಬವಾಗಿ ಆರಂಭಗೊಂಡಿತು. ಪಂದ್ಯ 49 ಓವರ್‌ಗಳಿ ಸೀಮಿತಗೊಳಿಸಲಾಗಿತ್ತು. ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಸೌತ್ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 241 ರನ್ ಸಿಡಿಸಿತು. ಈ ಮೂಲಕ ನ್ಯೂಜಿಲೆಂಡ್ ಗೆಲುವಿಗೆ 242 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಸೌತ್ ಆಫ್ರಿಕಾ ಉತ್ತಮ ಆರಂಭ ಪಡೆಯಲಿಲ್ಲ. ಕ್ವಿಂಟನ್ ಡಿಕಾಕ್ 5 ರನ್ ಸಿಡಿಸಿ ಔಟಾದರು. ನಾಯಕ ಫಾಫ್ ಡುಪ್ಲೆಸಿಸ್ 23 ರನ್ ಸಿಡಿಸಿ ಔಟಾದರು.  ಹಾಶಿಮ್ ಆಮ್ಲಾ ಅರ್ಧಶತಕ ಸಿಡಿಸಿ ಆಸರೆಯಾದರು.  ಆಮ್ಲಾ 55 ರನ್ ಸಿಡಿಸಿ ಔಟಾದರು.

ಆ್ಯಡಿನ್ ಮಕ್ರರಂ 38 ರನ್ ಕಾಣಿಕೆ ನೀಡಿದರು. ಡೇವಿಡ್ ಮಿಲ್ಲರ್ 36 ರನ್  ಸಿಡಿಸಿ ಔಟಾದರು. ಆದರೆ ರಸಿ ವ್ಯಾಂಡರ್ ಡಸೆನ್ ಹಾಫ್ ಸೆಂಚುರಿ ಬಾರಿಸಿದರು.  ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ವ್ಯಾಂಡರ್ ಡೆಸನ್ ಸಿಡಿಸಿದ ಅಜೇಯ 67 ರನ್ ಮೂಲಕ ಮೂಲಕ ಸೌತ್ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 241 ರನ್  ಸಿಡಿಸಿತು.