ವಿಶ್ವಕಪ್ 2019: ಪಾಕ್ ಗೆ ಸ್ಫರ್ಧಾತ್ಮಕ ಗುರಿ ನೀಡಿದ ಆಫ್ಘನ್

ಶಾಹೀನ್ ಅಫ್ರಿದಿ ಮಿಂಚಿನ ದಾಳಿಯ ಹೊರತಾಗಿಯೂ ಆಫ್ಘಾನಿಸ್ತಾನ ತಂಡವು 227 ರನ್ ಬಾರಿಸಿದ್ದು, ಪಾಕಿಸ್ತಾನಕ್ಕೆ ಸವಾಲಿನ ಗುರಿ ನೀಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

World Cup 2019 Shaheen Afridi Stars As Pakistan Restrict Afghanistan To 227 for 9

ವಿಶ್ವಕಪ್ ಟೂರ್ನಿಯ ಪ್ರತಿಕ್ಷಣದ ಸ್ಕೋರ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಲೀಡ್ಸ್[ಜೂ.29]: ಶಾಹೀನ್ ಅಫ್ರಿದಿ ಮಾರಕ ದಾಳಿಯ ಹೊರತಾಗಿಯೂ ಸಂಘಟಿತ ಪ್ರದರ್ಶನ ತೋರಿದ ಆಫ್ಘಾನಿಸ್ತಾನ 227 ರನ್ ಬಾರಿಸಿದ್ದು, ಪಾಕಿಸ್ತಾನಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದೆ. ಸೆಮಿಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಪಾಕ್ ತಂಡಕ್ಕೆ ಮಹತ್ವದ ಪಂದ್ಯ ಇದಾಗಿದ್ದು, ಇದುವರೆಗೂ ಆಡಿದ 7 ಪಂದ್ಯದಲ್ಲಿ 3 ಗೆಲುವು ಹಾಗೂ 3 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಜಯಿಸಿದರೆ 9 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಲಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಫ್ಘನ್ ತಂಡಕ್ಕೆ 5ನೇ ಓವರ್’ನಲ್ಲಿ ಶಾಹೀನ್ ಅಫ್ರಿದಿ ಸತತ 2 ವಿಕೆಟ್ ಕಬಳಿಸುವ ಮೂಲಕ ಶಾಕ್ ನೀಡುವಲ್ಲಿ ಯಶಸ್ವಿಯಾದರು. ಇದಾದ ಕೆಲ ಹೊತ್ತಿನಲ್ಲೇ ಉತ್ತಮವಾಗಿ ಆಡುತ್ತಿದ್ದ ರೆಹಮತ್ ಶಾ[35] ಕೂಡಾ ಪೆವಿಲಿಯನ್ ಸೇರಿದರು. ಆದರೆ ನಾಲ್ಕನೇ ವಿಕೆಟ್’ಗೆ ಆಸ್ಗರ್ ಆಫ್ಘನ್-ಇಕ್ರಾಮ್ ಅಲಿಕಿಲ್ ಜೋಡಿ 64 ರನ್ ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಸ್ಫೋಟಕ ಬ್ಯಾಟಿಂಗ್ ಮಾಡುವ ಯತ್ನದಲ್ಲಿ ಆಸ್ಗರ್[42] ಶಾದಾಬ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ಎಚ್ಚರಿಕೆಯ ಆಟವಾಡಿದ ಅಲಿಕಿಲ್ 66 ಎಸೆತಗಳಲ್ಲಿ 24 ರನ್ ಬಾರಿಸಿ ಇಮಾದ್ ವಾಸೀಂಗೆ ಎರಡನೇ ಬಲಿಯಾದರು. ಕೊನೆಯಲ್ಲಿ ನಜೀಬುಲ್ಲಾ ಜದ್ರಾನ್[42] ಹಾಗೂ ಶಮೀಉಲ್ಲಾ ಶೆನ್ವಾರಿ[] ಉಪಯುಕ್ತ ರನ್ ಕಾಣಿಕೆ ನೀಡುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ 47 ರನ್ ನೀಡಿ 4 ವಿಕೆಟ್ ಪಡೆದರೆ, ಇಮಾದ್ ವಾಸೀಂ ಹಾಗೂ ವಹಾಬ್ ರಿಯಾಜ್ ತಲಾ 2 ಮತ್ತು ಶಾದಾಬ್ ಖಾನ್ 1 ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್:

ಆಫ್ಘಾನಿಸ್ತಾನ: 227/9

ಆಸ್ಗರ್ ಆಫ್ಘನ್: 42

ಶಾಹೀನ್ ಅಫ್ರಿದಿ: 47/4

[*ಆಫ್ಘಾನಿಸ್ತಾನ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]

Latest Videos
Follow Us:
Download App:
  • android
  • ios