ಮ್ಯಾಂಚೆಸ್ಟರ್[ಜು.09]: 2019ರ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.

ಜುಲೈ 14ರಂದು ಲಾರ್ಡ್ಸ್’ನಲ್ಲಿ ನಡೆಯಲಿರುವ ಫೈನಲ್ ಪ್ರವೇಶಿಸಲು ಉಭಯ ತಂಡಗಳು ತುದಿಗಾಲಿನಲ್ಲಿ ನಿಂತಿದ್ದು, ಕೆಲವೊಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ. ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಕುಲ್ದೀಪ್ ಬದಲಿಗೆ ಯುಜುವೇಂದ್ರ ಚಹಲ್ ತಂಡ ಕೂಡಿಕೊಂಡಿದ್ದಾರೆ. ಇನ್ನು ನ್ಯೂಜಿಲೆಂಡ್ ತಂಡದಲ್ಲಿ ಕೂಡಾ ಒಂದು ಬದಲಾವಣೆ ಮಾಡಲಾಗಿದ್ದು, ಟಿಪ್ ಸೌಥಿ ಬದಲಿಗೆ ಲೂಕಿ ಫರ್ಗ್ಯೂಸನ್ ತಂಡ ಕೂಡಿಕೊಂಡಿದ್ದಾರೆ. 

 

ಲೀಗ್ ಹಂತದಲ್ಲಿ ಇಂಗ್ಲೆಂಡ್ ಹೊರತುಪಡಿಸಿ ಉಳಿದೆಲ್ಲಾ ತಂಡದ ಮೇಲೆ ಜಯ ಸಾಧಿಸಿದ್ದ ಟೀಂ ಇಂಡಿಯಾ ಇದೀಗ ಕಿವೀಸ್ ಕಿವಿ ಹಿಂಡಲು ರೆಡಿಯಾಗಿದೆ. ನ್ಯೂಜಿಲೆಂಡ್ ಲೀಗ್ ಹಂತದಲ್ಲಿ ಭರ್ಜರಿ ಶುಭಾರಂಭ ಮಾಡಿತಾದರೂ ಆ ಬಳಿಕ ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಸತತ ಸೋಲು ಕಾಣುವ ಮೂಲಕ ಅದೃಷ್ಠದಾಟದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ಇನ್ನು ಉಭಯ ತಂಡಗಳ ಸೆಮೀಸ್ ಇತಿಹಾಸ ಗಮನಿಸುವುದಾದರೆ, ಈ ವಿಶ್ವಕಪ್ ಸೇರಿದಂತೆ ನ್ಯೂಜಿಲೆಂಡ್ 8 ಬಾರಿ ಸೆಮೀಸ್ ಪ್ರವೇಶಿಸಿದ್ದು, ಕೇವಲ ಒಮ್ಮೆ ಮಾತ್ರ ಫೈನಲ್’ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ಇನ್ನು ಭಾರತ 6 ಬಾರಿ ಸೆಮೀಸ್ ಪ್ರವೇಶಿಸಿದ್ದು, ಅದರಲ್ಲಿ ಮೂರು ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. 

ತಂಡಗಳು ಹೀಗಿವೆ:

ಭಾರತ:

ನ್ಯೂಜಿಲೆಂಡ್: