ನವದೆಹಲಿ(ಜೂ.20): ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾಗೆ ಇಂಜುರಿ ಸಮಸ್ಯೆ ಕಾಡುತ್ತಿದೆ. ಗಾಯದಿಂದ ಚೇತರಿಸಿಕೊಳ್ಳದ ಶಿಖರ್ ಧವನ್ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದಿದ್ದಾರೆ. ಟೂರ್ನಿಯಿಂದ ಹೊರಬಿದ್ದ  ಬಳಿಕ ಧವನ್ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ, ಧವನ್ ಇಂಜುರಿ ಕುರಿತು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಜಯಕಿಶನ್ ತಬ್ಬಿಕೊಂಡು ಕ್ಷಮೆ ಕೇಳಿದ ಡೇವಿಡ್ ವಾರ್ನರ್!

ಆತ್ಮೀಯ ಶಿಖರ್ ಧವನ್, ಕ್ರೀಡಾಂಗಣ ನಿಮ್ಮನ್ಮು ಮಿಸ್ ಮಾಡಿಕೊಳ್ಳುತ್ತೆ. ಧವನ್ ಶೀಘ್ರದಲ್ಲೇ ಚೇತರಿಸಿಕೊಂಡು ತಂಡ ಸೇರಿಕೊಳ್ಳುವ ವಿಶ್ವಾಸ ನನಗಿದೆ. ಈ ಮೂಲಕ ಮತ್ತೆ ದೇಶಕ್ಕೆ ಅವಿಸ್ಮರಣೀಯ ಗೆಲುವು ಕಟ್ಟಿಕೊಡುವ ಭರವಸೆ ಇದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಇದನ್ನೂ ಓದಿ: ಭಾರತ ವಿರುದ್ಧದ ಸೋಲು-ಪಾಕ್ ಕ್ರಿಕೆಟ್ ಕಮಿಟಿ ಮುಖ್ಯಸ್ಥನ ತಲೆದಂಡ?

ಧವನ್ ವಿಶ್ವಕಪ್ ಟೂರ್ನಿಯಿಂದ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಶೀಘ್ರದಲ್ಲೇ ಚೇತರಿಸಿಕೊಳ್ಳಲು ಹಾರೈಸಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮೂಲಕ ಹಾರೈಸಿದ್ದು, ಧವನ್‌ಗೆ ಮತ್ತಷ್ಟು ಶಕ್ತಿ ನೀಡಲಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಧವನ್, ಕೈಬೆರಳಿಗೆ ಗಾಯ ಮಾಡಿಕೊಂಡು ಹೊರ ನಡೆದಿದ್ದರು.